ರಾಷ್ಟ್ರೀಯ

ನಾವು ಈಗ ಎಚ್ಚೆತ್ತುಕೊಳ್ಳದಿದ್ದರೆ ದೇಶಾದ್ಯಂತ ಕೊರೊನಾ ಮಹಾ ಸ್ಫೋಟವಾಗಲಿದೆ: ಎಚ್ಚರಿಕೆ ನೀಡಿದ ಪ್ರಧಾನಿ ಮೋದಿ

Pinterest LinkedIn Tumblr

ನವದೆಹಲಿ: ದೇಶದಲ್ಲಿ ಎರಡನೇ ಅಲೆಯ ಹೊಡೆತದ ಕರಾಳತೆಯನ್ನು ಪ್ರಧಾನಿ ನರೇಂದ್ರ ಮೋದಿ ಬಿಚ್ಚಿಟ್ಟಿದ್ದಾರೆ. ನಾವು ಈಗ ಎಚ್ಚೆತ್ತುಕೊಳ್ಳದಿದ್ದರೆ ದೇಶಾದ್ಯಂತ ಕೊರೊನಾ ಮಹಾ ಸ್ಫೋಟವಾಗಲಿದೆ ಎಂದು ಪ್ರಧಾನಿ ಎಚ್ಚರಿಕೆ ನೀಡಿದ್ದಾರೆ.

ವೀಡಿಯೋ ಕಾನ್ಫರೆನ್ಸ್ ಮೂಲಕ ಸಿಎಂಗಳ ಸಭೆ ಉದ್ದೇಶಿಸಿ ಮಾತನಾಡಿದ ಮೋದಿ, ಕಟ್ಟುನಿಟ್ಟಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ವ್ಯವಸ್ಥೆ ಮಾಡಬೇಕು. ಮಾಸ್ಕ್ ಕಡ್ಡಾಯ ಮಾಡಬೇಕು. ಅಲ್ಲದೆ ಕ್ಲಿನಿಕಲ್ ಸೌಲಭ್ಯ ಹೆಚ್ಚು ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಸೂಚನೆ ನೀಡಿದ್ದಾರೆ.

ಜನರು ಮಾಸ್ಕ್ ಧರಿಸುವುದನ್ನ ಗಂಭೀರವಾಗಿ ಪರಿಗಣಿಸಿಲ್ಲ. ಇದು ಸ್ಥಳೀಯ ಜಿಲ್ಲಾಡಳಿತದ ವೈಫಲ್ಯವಾಗಿದೆ. ಕೆಲವೆಡೆ ಕೊರೊನಾ 2ನೇ ಅಲೆ ಕಂಡು ಬರುತ್ತಿದೆ. ಭಾರತದಲ್ಲಿ ಶೇ.96 ಹೆಚ್ಚು ಪ್ರಕರಣಗಳು ಚೇತರಿಸಿಕೊಂಡಿವೆ. ಸಾವಿನ ಪ್ರಮಾಣ ಅತ್ಯಂತ ಕಡಿಮೆ ಇರುವ ದೇಶಗಳಲ್ಲಿ ಭಾರತವೂ ಒಂದಾಗಿದೆ. ಮೈಕ್ರೋ ಕಂಟೈನ್ಮೆಂಟ್ ಆಗತ್ಯವಾಗಿದ್ದು, ಹಳ್ಳಿಗಳಿಗೆ ಸೋಂಕು ವ್ಯಾಪಿಸಿದ್ರೆ ಕಷ್ಟ. ಹೀಗಾಗಿ ಚಿಕ್ಕ ಚಿಕ್ಕ ಪಟ್ಟಣಗಳಲ್ಲೂ ಟೆಸ್ಟಿಂಗ್ ಹೆಚ್ಚಿಸಿ ಎಂದು ಹೇಳಿದ್ದಾರೆ.

ಸೋಂಕಿತ ವ್ಯಕ್ತಿಯನ್ನು ಶೀಘ್ರದಲ್ಲಿ ಪತ್ತೆ ಹಚ್ಚಬೇಕು. ಆರ್‍ ಟಿಪಿಸಿಆರ್ ಶೇ.70ರಷ್ಟು ಹೆಚ್ಚಿಸಬೇಕು. ಕೆಲವು ರಾಜ್ಯಗಳು ಆಂಟಿಜನ್ ಗೆ ಮಾತ್ರ ಆದ್ಯತೆ ನೀಡಿದೆ. ಹೀಗಾಗಿ ಆರ್‍ಟಿಪಿಸಿಆರ್ ಗೆ ಆದ್ಯತೆ ನೀಡಬೇಕು. ನಗರಗಳಿಗೆ ಸೋಂಕು ಹೆಚ್ಚು ವ್ಯಾಪಿಸುತ್ತಿದೆ. ಮೊದಲು ಟಿ1 ನಗರಗಳಲ್ಲಿ ಹೆಚ್ಚಿತ್ತು. ಹೀಗಾಗಿ ಸಣ್ಣ ಊರುಗಳಲ್ಲಿ ಪರೀಕ್ಷೆ ಹೆಚ್ಚು ಮಾಡಬೇಕು. ಟೆಸ್ಟಿಂಗ್ ಹೆಚ್ಚಿಸದಿದ್ದರೆ ಪರಿಸ್ಥಿತಿ ಗಂಭೀರವಾಗಿರುತ್ತದೆ. ವ್ಯಾಕ್ಸಿನ್‍ಗಳು ಪೂರ್ಣ ಪ್ರಮಾಣದಲ್ಲಿ ಬಳಕೆಯಾಗುತ್ತಿಲ್ಲ ಎಂದರು.

ವ್ಯಾಕ್ಸಿನ್ ವೇಸ್ಟ್ ಟಾರ್ಗೆಟ್ ಹಾಕಿಕೊಳ್ಳಬೇಕು. ಕೊರೊನಾ ಚಿಕಿತ್ಸೆ ಬಳಿಕವೂ ನಾವು ಕೊರೊನಾ ಬಗ್ಗೆ ಜಾಗೃತರಾಗಿರಬೇಕು. ಜಿನೊಮ್ ಟೆಸ್ಟಿಂಗ್ ಗಳನ್ನು ನಡೆಸಬೇಕು. ಇದರಿಂದ ವೈರಸ್ ರೂಪಾಂತರಿವಾಗಿರುವ ಬಗ್ಗೆ ಮಾಹಿತಿ ಸಿಗಲಿದೆ. ತೆಲಂಗಾಣ, ಆಂಧ್ರಪ್ರದೇಶ ಮತ್ತು ಉತ್ತರ ಪ್ರದೇಶದಲ್ಲಿ ವ್ಯಾಕ್ಸಿನ್ ವ್ಯರ್ಥವಾಗುತ್ತಿದೆ. ವ್ಯಾಕ್ಸಿನ್ ವ್ಯರ್ಥ ವಾಗಲು ಬಿಡಬಾರದು. ರಾಜ್ಯ ಸರ್ಕಾರ ಇದನ್ನು ಟ್ರ್ಯಾಕ್ ಮಾಡಬೇಕು ಎಂದು ಮೋದಿ ಕರೆ ನೀಡಿದರು.

Comments are closed.