ಕರಾವಳಿ

ಗೋಲ್ಡ್ ಜುವೆಲ್ಲರಿ ಸ್ಕೀಂ ನಂಬಿ ಚಿನ್ನ, ಕೋಟಿಗಟ್ಟಲೇ ನಗದು ವಂಚನೆಗೊಳಗಾದ ಗ್ರಾಹಕರು..!

Pinterest LinkedIn Tumblr

ಕುಂದಾಪುರ: ಇಲ್ಲಿನ ಜುವೆಲ್ಲರಿ ಶಾಪ್‌ನಲ್ಲಿ ಚಿನ್ನ ಮತ್ತು ನಗದು ಹೂಡಿಕೆ ಮಾಡಿದ ಗ್ರಾಹಕರಿಗೆ ಹೂಡಿಕೆ ಮಾಡಿದ ಚಿನ್ನ ಮತ್ತು ನಗದು ಹಿಂದುರುಗಿಸದೆ ದೋಖಾ ಮಾಡಿದ ಬಗ್ಗೆ ಆರೋಪಿಸಿ ಗ್ರಾಹಕರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

ಕುಂದಾಪುರ ಮೊಹಮ್ಮದ್ ಇಪ್ತಿಕಾರ್, ಮೋಯಿನ್ ಯೂಸೆಫ್ ಆಲಿ, ಗಣೇಶ್ ಶೆಟ್ಟಿ ಮೊಳಹಳ್ಳಿ, ಭಟ್ಕಳದ ಕತೀಬ್ ಅಬ್ದುಲ್ ರೆಹಮಾನ್, ಬಿ.ಎಂ ಜಾಫರ್, ಫರಾಜ್, ಆಸೀಫ್ ಕೆ, ನಜೀರ್ ಅಹಮ್ಮದ್, ಮೊಹಮ್ಮದ್ ಮುಶ್ರಫ್, ಮೊಹಮ್ಮದ್ ಆಸೀಫ್, ಮೊಹಮ್ಮದ್ ನೂರೈಸ್, ಎಸ್. ಜೀನತ್, ಬೆಟ್ಟೆ ಬಾಷಾ, ಬೆಟ್ಟೆ ಅಕ್ಬರ್, ಬಷೀರ್ ಅಹ್ಮ್ಮದ್, ಕೆ. ಮುನೀರ್. ಅರ್ಫಾದ್, ಮೊಹಮ್ಮದ್ ಫಾಮೀಜಾ, ಸರ್ದಾರ್ ನವೀದ್ ಅಕ್ತರ್, ನೌಷಾದ್, ಮೊಹಮ್ಮದ್ ಫಾರಿಸ್, ಬಿ. ಬಾನು, ನಸೀಮಾ, ವಾಹಿದಾ ದೋಖಾ ಮಾಡಿದ ಆಪಾದಿತರಾಗಿದ್ದು, ಕುಂದಾಪುರ ನಿವಾಸಿ ಇರ್ಷಾದ್ ಗುಲ್ಜಾರ್ ಸೇರಿ ಹಲವು ಗ್ರಾಹಕರು ಚಿನ್ನ ಹಾಗೂ ನಗದು ಕಳೆದುಕೊಂಡವರು.

ಕುಂದಾಪುರ ಮುಖ್ಯರಸ್ತೆಯಲ್ಲಿರುವ ಗೋಲ್ಡ್ ಜುವೆಲ್ಲರಿ ಶ್ಯಾಪ್ ನಲ್ಲಿ ಗ್ರಾಹಕರು ಬಡ್ಡಿಯಾಸೆಗೆ ಚಿನ್ನ ಹಾಗೂ ಕ್ಯಾಶ್ ಡಿಪಾಜಿಟ್ ಇಟ್ಟಿದ್ದರು. ನಗದು ಹಾಗೂ ಚಿನ್ನದ ಮೌಲ್ಯಕ್ಕೆ ತಿಂಗಳಿಗೆ ಲಕ್ಷಕ್ಕೆ 2 ರಿಂದ 2500 ರೂ. ಬಡ್ಡಿ ನೀಡಲಾಗುತ್ತಿತ್ತು. ತಿಂಗಳಿಗೆ ೨೫೦೦ ರೂನಂತೆ ನಗದು ಹಾಗೂ ಚಿನ್ನಕ್ಕೆ ಬಡ್ಡಿ ನೀಡಲಾಗುತ್ತಿತ್ತು. ಗ್ರಾಹಕರಿಗೆ ಬಡ್ಡಿ ಮಾತ್ರ ನೀಡುತ್ತಿದ್ದು, ಹೂಡಿಕೆ ಮಾಡಿದ ಬಂಡವಾಳ ಮಾತ್ರ ಹಿಂದಕ್ಕೆ ನೀಡಿರಲಿಲ್ಲ.

56 ಲಕ್ಷದ 76 ಸಾವಿರ ಮೌಲ್ಯದ ಚಿನ್ನ, ಹಾಗೂ 35 ಲಕ್ಷದ 88 ಸಾವಿರ ನಗದು ಸೇರಿ ಒಟ್ಟು 92 ಲಕ್ಷದ 64 ಸಾವಿರ ಹೂಡಿಕೆ ಮಾಡಿದ್ದರು. ಇತ್ತೀಚೆಗೆ ಗ್ರಾಹಕರು ಮೋಸಹೋಗಿದ್ದು ಗೊತ್ತಾಗಿದೆ. ಕುಂದಾಪುರ ಕಸಬಾ ನಿವಾಸಿ ಇರ್ಷಾದ್ ಗುಲ್ಜಾರ್ ಎಂಬವರು ದೂರು ನೀಡಿದ್ದು, ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

 

Comments are closed.