ಕರಾವಳಿ

ಲೇಡೀಗೋಶನ್ ಆಸ್ಪತ್ರೆಯಲ್ಲಿ ಮಹಿಳಾ ದಿನಾಚರಣೆ : 21 ಬಾಣಂತಿ ಮಹಿಳೆಯರಿಗೆ ನ್ಯೂಟ್ರೀಶನ್ ಕಿಟ್ ವಿತರಣೆ

Pinterest LinkedIn Tumblr

ಮಂಗಳೂರು : ಸರಕಾರೀ ಲೇಡೀಗೋಶನ್ ಆಸ್ಪತ್ರೆಯಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಯನ್ನು ರೆಡ್ ಕ್ರಾಸ್ ಸೊಸೈಟಿ ದಕ್ಷಿಣ ಕನ್ನಡ ಜಿಲ್ಲಾ ಶಾಖೆ ಇದರ ಸಹಯೋಗದೊಂದಿಗೆ ವೈಶಿಷ್ಟ್ಯಪೂರ್ಣವಾಗಿ ಆಚರಿಸಲಾಯಿತು.

ರೆಡ್ ಕ್ರಾಸ್ ಸೊಸೈಟಿ ವತಿಯಿಂದ 21 ಜನ ಬಾಣಂತಿ ಮಹಿಳೆಯರಿಗೆ ನ್ಯೂಟ್ರೀಶನ್ ಕಿಟ್(ಪೌಷ್ಟಿಕ ಆಹಾರ ಪದಾರ್ಥ) ಗಳನ್ನು ವಿತರಿಸಲಾಯಿತು.

ಕಳೆದ 48 ಗಂಟೆಗಳಲ್ಲಿ ಸರಕಾರೀ ಲೇಡೀಗೋಶನ್ ಆಸ್ಪತ್ರೆಯಲ್ಲಿ ಹೆಣ್ಣು ಮಗುವನ್ನು ಹೆತ್ತ ಬಾಣಂತಿ ಯರನ್ನೇ  ಫಲಾನುಭವಿಗಳನ್ನಾಗಿ ಆಯ್ಕೆ ಮಾಡಿರುವುದು ವಿಶೇಷವಾಗಿತ್ತು.

ಹಿರಿಯ ಪ್ರಸೂತಿ ತಜ್ಞೆ ಡಾ.ಶಕುಂತಲಾ ಮುಗದೂರ್ ಸಂಪನ್ಮೂಲ ವ್ಯಕ್ತಿಯಾಗಿ ಮಹಿಳೆಯರ ಹಕ್ಕುಗಳ ಬಗ್ಗೆ ಸವಿಸ್ತಾರವಾಗಿ ತಿಳಿ ಹೇಳಿದರು.

ಶುಶ್ರೂಷಾ ಅಧೀಕ್ಷಕಿ ಶ್ರೀಮತಿ ದೇವಕಿ ಗಾಣಗಿತ್ತಿ ಮಹಿಳೆಯ ಜೀವನದ ವಿವಿಧ ಹಂತಗಳ ತ್ಯಾಗಮಯಿ ವ್ಯಕ್ತಿತ್ವ ಮತ್ತು ಗುರುತರ ಜವಾಬ್ದಾರಿಗಳ ಬಗ್ಗೆ ಮಾಹಿತಿ ಕೊಟ್ಟರು.

ಪ್ರಥಮ ದರ್ಜೆ ಸಹಾಯಕಿ ಶ್ರೀಮತಿ ರಜನಿ ಮಹಿಳೆಯ ಹಿರಿಮೆಯ ಬಗೆಗೆ ಗೀತೆಯನ್ನು ಹಾಡಿದರು. ಕಾರ್ಯಕ್ರಮದಲ್ಲಿ ರೆಡ್ ಕ್ರಾಸ್ ಚೆಯರ್ ಮ್ಯಾನ್ ಸಿ. ಎ. ಶಾಂತಾರಾಮ್ ಶೆಟ್ಟಿ, ರೆಡ್ ಕ್ರಾಸ್ ಗೌರವ ಕಾರ್ಯದರ್ಶಿ ಶ್ರೀ. ಪ್ರಭಾಕರ್ ಶರ್ಮ ,ಬ್ಲಡ್ ಬ್ಯಾಂಕ್ ವೈದ್ಯಾಧಿಕಾರಿಗಳಾದ ಡಾ/ಜೆ.ಎನ್.ಭಟ್,ಡಾ/ಸುಂದರಿ,ಡಾ/ಗಿರೀಶ್ ಭಂಡಾರಿ,ಬ್ಲಡ್ ಬ್ಯಾಂಕ್ ಕೋ ಆರ್ಡಿನೇಟರ್ ಶ್ರೀ ಪ್ರವೀಣ್, ನಿವಾಸಿ ವೈದ್ಯಾಧಿಕಾರಿ ಗಳಾದ ಡಾ/ಬಾಲಕೃಷ್ಣ ರಾವ್,ನಾಗರಿಕ ಸಹಾಯವಾಣಿ ವ್ಯವಸ್ಥಾಪಕ ಗುರುಪ್ರಸಾದ್ ಉಪಸ್ಥಿತರಿದ್ದರು.

ಸರಕಾರೀ ಲೇಡೀಗೋಶನ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡಾ/ದುರ್ಗಾಪ್ರಸಾದ್.ಎಂ.ಆರ್. ಅಧ್ಯಕ್ಷತೆ ವಹಿಸಿದ್ದರು.

ಶ್ರೀಮತಿ ಉಷಾ ಪ್ರಾರ್ಥಿಸಿದರು. ಶ್ರೀಮತಿ ತ್ರೇಸಿಯಮ್ಮ ಸ್ವಾಗತಿಸಿದರು. ಶುಶ್ರೂಷಾಧಿಕಾರಿ ಶ್ರೀಮತಿ ಅಂಬಿಕಾ ಪ್ರಸ್ತಾಪಿಸಿ ಕಾರ್ಯಕ್ರಮ ನಿರೂಪಿಸಿದರು.ಶ್ರೀಮತಿ ಹರಿಣಾಕ್ಷಿಯವರ ವಂದನಾರ್ಪಣೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.

Comments are closed.