ರಾಷ್ಟ್ರೀಯ

ಬಾಲಕಿ ಮೇಲೆ ನಿರಂತರ 8 ದಿನಗಳ ಕಾಲ ಪ್ರತ್ಯೇಕ ಸ್ಥಳಗಳಲ್ಲಿ ಅತ್ಯಾಚಾರ ನಡೆಸಿದ 9 ಮಂದಿ ಕಾಮುಕರು; ತಪ್ಪಿಸಿಕೊಂಡು ಬಂದ ಬಾಲಕಿ

Pinterest LinkedIn Tumblr

ರಾಜಸ್ಥಾನ: ವಿಶ್ವ ಮಹಿಳಾ ದಿನಂದೇ ರಾಜಸ್ಥಾನದಲ್ಲೊಂದು ಹೀನ ಕೃತ್ಯ ವರದಿಯಾಗಿದ್ದು, 15 ವರ್ಷದ ಬಾಲಕಿ ಮೇಲೆ 9 ಕಾಮುಕರು ನಿರಂತರ 8 ದಿನಗಳ ಕಾಲ ಪ್ರತ್ಯೇಕ ಸ್ಥಳಗಳಲ್ಲಿ ಅತ್ಯಾಚಾರ ಎಸಗಿದ್ದಾರೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.

ಬಾಲಕಿ ಕಳೆದ ಶುಕ್ರವಾರ ಹೇಗಾದರೂ ಮಾಡಿ ಕಾಮುಕರಿಂದ ತಪ್ಪಿಸಿಕೊಂಡು ತನ್ನ ಮನೆಗೆ ತಲುಪಿದ್ದು, ನಂತರ ಪೊಲೀಸರಿಗೆ ದೂರು ನೀಡಿದ್ದಾಳೆ.

ಘಟನೆಗೆ ಸಂಬಂಧಿಸಿದಂತೆ ಇಬ್ಬರು ಅಪ್ರಾಪ್ತರು ಸೇರಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಳೆದ ಫೆಬ್ರವರಿ 25 ರಂದು ತನ್ನ ಸ್ನೇಹಿತ ಬುಲ್ಬುಲ್ ಮತ್ತು ಇನ್ನೊಬ್ಬ ಯುವಕ ಚೋಥ್ಮಲ್ ತನಗಾಗಿ ಶಾಲಾ ಬ್ಯಾಗ್ ಅನ್ನು ಖರೀದಿಸುವ ನೆಪದಲ್ಲಿ ಝಾಲಾವರ್ ನಗರಕ್ಕೆ ಕರೆದೊಯ್ದಿದ್ದಾರೆ ಎಂದು ಬಾಲಕಿ ಆರೋಪಿಸಿರುವುದಾಗಿ ಸುಕೆತ್ ಡಿಎಸ್ಪಿ ಮಂಜೀತ್ ಸಿಂಗ್ ಹೇಳಿದ್ದಾರೆ.

ಪಾರ್ಕ್ ವೊಂದರಲ್ಲಿ ಇನ್ನೆರಡು ಮೂರು ಜನರೊಂದಿಗೆ ಸೇರಿ ತನಗೆ ಡ್ರಗ್ಸ್ ನೀಡಿ ಅತ್ಯಾಚಾರ ಎಸಗಿದ್ದಾರೆ. ಎಂಟ ದಿನಗಳ ಕಾಲ ವಿವಿಧ ಸ್ಥಳಗಳಲ್ಲಿ ಅತ್ಯಾಚಾರ ಎಸಗಿರುವುದಾಗಿ ಬಾಲಕಿ ಆರೋಪಿಸಿದ್ದಾಳೆ ಎಂದು ಮಂಜೀತ್ ಸಿಂಗ್ ತಿಳಿಸಿದ್ದಾರೆ.

ಬಾಲಕಿಯನ್ನು ತಕ್ಷಣ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು, ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಮಂಜೀತ್ ಸಿಂಗ್ ಹೇಳಿದ್ದಾರೆ.

Comments are closed.