ಕರಾವಳಿ

ಕ್ಷೇತ್ರಗಳನ್ನು ಅಪವಿತ್ರಗೊಳಿಸುವ ಸಂಚು ಖಂಡಿಸಿ ಮಾರ್ಚ್ 9ರಂದು ದೈವಸ್ಥಾನ ದೇವಸ್ಥಾನ ಭಜನಾ ಮಂದಿರಗಳ ಪ್ರಮುಖರ ಸಭೆ

Pinterest LinkedIn Tumblr

ಮಂಗಳೂರು, ಮಾರ್ಚ್.07: ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ದೈವಸ್ಥಾನ ದೇವಸ್ಥಾನ ಭಜನಾ ಮಂದಿರ ಗಳನ್ನು ಅಪವಿತ್ರಗೊಳಿಸುವ ಸಂಚು ನಡೆಯುತ್ತಿದ್ದು ಹಿಂದುಗಳ ಧಾರ್ಮಿಕ ಭಾವನೆಗೆ ತೊಂದರೆಯನ್ನು ಕೊಡುವ ಕೆಲಸ ನಡೆಯುತ್ತಿದೆ.

ಈ ಹಿನ್ನೆಲೆಯಲ್ಲಿ ಕದ್ರಿ ಶ್ರೀ ಮಂಜುನಾಥೇಶ್ವರ ದೇವಸ್ಥಾನ ಬಳಿ ಇರುವ ವಿಶ್ವ ಹಿಂದು ಪರಿಷತ್ತಿನ ಕಾರ್ಯಾಲಯ ವಿಶ್ವಶ್ರೀ ಯಲ್ಲಿ ಮಾರ್ಚ್ 9ರಂದು ಮಂಗಳವಾರ ಸಂಜೆ 3 ಗಂಟೆಗೆ ಸಮಾಲೋಚನಾ ಸಭೆಯನ್ನು ಕರೆಯಲಾಗಿದೆ ಎಂದು ವಿಶ್ವ ಹಿಂದು ಪರಿಷತ್ತಿನ ವಿಭಾಗ ಕಾರ್ಯದರ್ಶಿಯಾದ ಶರಣ್ ಪಂಪುವೆಲ್ ತಿಳಿಸಿದ್ದಾರೆ.

ಕೊರಗಜ್ಜನ ಕ್ಷೇತ್ರ, ಬಬ್ಬುಸ್ವಾಮಿ ಕ್ಷೇತ್ರ ದೈವಸ್ಥಾನ, ದೇವಸ್ಥಾನ ಭಜನಾಮಂದಿರಗಳನ್ನು ಗುರಿಯಾಗಿಸಿಕೊಂಡು ದುಷ್ಕೃತ್ಯಗಳನ್ನು ನಡೆಸುತ್ತಿರುವುದು ಬಹಳ ಆತಂಕಕಾರಿಯಾದ ವಿಷಯವಾಗಿದೆ.

ಇಂತಹ ಕೃತ್ಯಗಳನ್ನು ತಡೆಯಲು ಎಲ್ಲಾ ದೈವಸ್ಥಾನ ದೇವಸ್ಥಾನ ಭಜನಾಮಂದಿರಗಳ ಪ್ರಮುಖರು ಒಟ್ಟು ಸೇರಿ ಯೋಚಿಸುವುದು ಅನಿವಾರ್ಯವಾಗಿದ್ದು, ನಮ್ಮ ಧಾರ್ಮಿಕ ಕ್ಷೇತ್ರಗಳನ್ನು ಸಂರಕ್ಷಿಸುವುದು ನಮ್ಮ ಕರ್ತವ್ಯವಾಗಿದೆ.

ಈ ನಿಟ್ಟಿನಲ್ಲಿ ಸಮಾಲೋಚನಾ ಸಭೆಯನ್ನು ದಿನಾಂಕ 09 03 2021 ನೇ ಮಂಗಳವಾರ ಸಂಜೆ 3 ಗಂಟೆಗೆ ಕದ್ರಿ ಶ್ರೀ ಮಂಜುನಾಥೇಶ್ವರ ದೇವಸ್ಥಾನ ಬಳಿ ಇರುವ ವಿಶ್ವ ಹಿಂದು ಪರಿಷತ್ತಿನ ಕಾರ್ಯಾಲಯ ವಿಶ್ವಶ್ರೀ ಯಲ್ಲಿ ಸಭೆಯನ್ನು ಕರೆಯಲಾಗಿದೆ,

ವಿಶ್ವ ಹಿಂದು ಪರಿಷದ್ ಪ್ರಾಂತ ಅಧ್ಯಕ್ಷರಾದ ಪ್ರೊ ಎಂಬಿ ಪುರಾಣಿಕ್ ನೇತೃತ್ವದಲ್ಲಿ ಈ ಸಭೆ ನಡೆಯಲಿದ್ದು. ಎಲ್ಲಾ ದೈವಸ್ಥಾನ ದೇವಸ್ಥಾನ ಭಜನಾಮಂದಿರದ ಆಡಳಿತ ಮಂಡಳಿಯವರು, ಪ್ರಮುಖರು ಹಾಜರಿದ್ದು ಸೂಕ್ತ ಸಲಹೆ ಸೂಚನೆಗಳನ್ನು ನೀಡಲು ವಿನಂತಿಸಲಾಗಿದೆ ಎಂದು ಶರಣ್ ಪಂಪುವೆಲ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Comments are closed.