ಕರಾವಳಿ

ಎಟಿಎಂಗಳಲ್ಲಿ ಸ್ಕಿಮ್ಮಿಂಗ್ ಯಂತ್ರ ಅಳವಡಿಸಿ ನಗದು ವಿಡ್ರಾ : ಸೊತ್ತು ಸಹಿತಾ ನಾಲ್ವರು ವಂಚಕರ ಬಂಧನ

Pinterest LinkedIn Tumblr

ಮಂಗಳೂರು, ಫೆಬ್ರವರಿ 24: ಎಟಿಎಂಗಳಲ್ಲಿ ಸ್ಕಿಮ್ಮಿಂಗ್ ಯಂತ್ರದ ಉಪಕರಣ ಅಳವಡಿಸಿ ಹಣ ಲೂಟಿ ಮಾಡುತ್ತಿದ್ದ ಬೃಹತ್ ಜಾಲವನ್ನು ಪತ್ತೆ ಹಚ್ಚಿರುವ ಮಂಗಳೂರು ಸೈಬರ್ ಕ್ರೈಂ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಿದ್ದಾರೆ.

2020ರ ನವೆಂಬರ್‌ನಿಂದ ಹಾಗೂ 2021ರ ಇಲ್ಲಿಯವರೆಗೆ ಕುಳಾಯಿ ಬ್ಯಾಂಕ್‌‌ ಆಫ್‌ ಇಂಡಿಯಾ ಎಟಿಎಂ, ಚಿಲಿಂಬಿ, ನಾಗುರಿ, ಕಪಿತಾನಿಯೋ ಎಂಬಲ್ಲಿರುವ ಕೆನರಾ ಬ್ಯಾಂಕ್‌‌‌‌ ಆಫ್‌ ಇಂಡಿಯಾ ಎಟಿಎಂ, ಮಂಗಳಾದೇವಿಯ ಎಸ್‌‌ಬಿಐ ಎಟಿಂಗಳಲ್ಲಿ ಸ್ಕಿಮ್ಮಿಂಗ್‌ ಉಪಕರಣಗಳನ್ನು ಅಳವಡಿಸಿ ಎಟಿಎಂ ಗ್ರಾಹಕರ ಡಾಟಾವನ್ನು ಪಡೆದುಕೊಂಡು ನಕಲಿ ಎಟಿಎಂ ಕಾರ್ಡ್‌ಗಳನ್ನು ತಯಾರಿಸಿ ದೆಹಲಿ ಸೇರಿದಂತೆ ಬೆಂಗಳೂರು, ಮೈಸೂರು, ಕಾಸರಗೋಡು, ಮಡಿಕೇರಿ, ಗೋವಾ ಮುಂತಾದ ಕಡೆಗಳಲ್ಲಿ ಗ್ರಾಹಕರ ಗಮನಕ್ಕೆ ಬಾರದಂತೆ ಹಣವನ್ನು ವಿಡ್ರಾ ಮಾಡಿಕೊಂಡು ಮೋಸ ಮಾಡುತ್ತಿದ್ದ ಬಗ್ಗೆ ಮಂಗಳೂರು ನಗರ ಸೈಬರ್‌ ಕ್ರೈಂ ಪೊಲೀಸ್‌‌ ಠಾಣೆಯಲ್ಲಿ 22 ಸ್ಕಿಮ್ಮಿಂಗ್‌ ಪ್ರಕರಣಗಳು ದಾಖಲಾಗಿವೆ.

ಈ ಸಂಬಂಧ ಕೇರಳದ ತ್ರಿಶ್ಯೂರ್ ಜಿಲ್ಲೆಯ ಚಲಕಾಡಿಯ ಗ್ಲಾಡಿವಿನ್ ಜಿಂಟೋ ಜೋಯ್ (37), ದಿಲ್ಲಿಯ ಪ್ರೇಮ್‌ನಗರದ ದಿನೇಶ್ ಸಿಂಗ್ ರಾವತ್ (44), ಕಾಸರಗೋಡು ಜಿಲ್ಲೆಯ ಅಬ್ದುಲ್ ಮಜೀದ್ (27), ಆಲಪ್ಪುಝ ಜಿಲ್ಲೆಯ ರಾಹುಲ್ ಟಿ.ಎಸ್. (24) ಎಂಬವರನ್ನು ಬಂಧಿಸಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.

ಬಂಧಿತ ಆರೋಪಿಗಳಿಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಕಿಮ್ಮಿಂಗ್‌‌ ಡಿವೈಸ್‌, ಕೃತ್ಯಕ್ಕೆ ಬಳಸಿದ 2 ಕಾರು, ನಕಲಿ ಎಟಿಎಂ ಕಾರ್ಡ್‌ಗಳು, ಐದು ಮೊಬೈಲ್‌‌, ಎರಡು ಆಪಲ್‌ ವಾಚ್‌ ಸೇರಿದಂತೆ ಸುಮಾರು 25,00,000 ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಈ ಮಧ್ಯೆ ಕೃತ್ಯ ಎಸಗಿ ಪರಾರಿಯಾಗುವ ಯತ್ನದಲ್ಲಿ ಬಿದ್ದು ಗಾಯಗೊಂಡಿರುವ ಕಾಸರಗೋಡಿನ ಅಝ್ಮಾಲ್ ಎಂಬ ಆರೋಪಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ ಎಂದು ಕಮಿಷನರ್ ತಿಳಿಸಿದ್ದಾರೆ.

ಆರೋಪಿಗಳು ಕುಳಾಯಿಯ ಬ್ಯಾಂಕ್ ಆಫ್ ಇಂಡಿಯಾ ಎಟಿಎಂ, ಚಿಲಿಂಬಿ ಮತ್ತು ನಾಗುರಿ ಹಾಗೂ ಕಪಿತಾನಿಯೋದಲ್ಲಿರುವ ಕೆನರಾ ಬ್ಯಾಂಕ್‌ನ ಎಟಿಎಂ, ಮಂಗಳಾದೇವಿಯ ಎಸ್‌ಬಿಐ ಎಟಿಎಂಗಳಲ್ಲಿ ಸ್ಕಿಮ್ಮಿಂಗ್ ಡಿವೈಎಸ್ ಅಳವಡಿಸಿ ಗ್ರಾಹಕರ ಟಾಟಾವನ್ನು ಪಡೆದುಕೊಂಡು ನಕಲಿ ಎಟಿಎಂ ಕಾರ್ಡ್‌ಗಳನ್ನು ತಯಾರಿಸಿ ದೆಹಲಿ, ಬೆಂಗಳೂರು, ಮೈಸೂರು, ಮಡಿಕೇರಿ, ಗೋವಾ ಮತ್ತಿತರ ಕಡೆ ಗ್ರಾಹಕರ ಗಮನಕ್ಕೆ ಬಾರದಂತೆ ಹಣವನ್ನು ವಿಡ್ರಾ ಮಾಡಿದ್ದಾರೆ. ಮಂಗಳೂರಿನಲ್ಲೇ ಸುಮಾರು 22 ಪ್ರಕರಣದಲ್ಲಿ ಹಣವನ್ನು ದೋಚಿರುವ ಈ ಆರೋಪಿಗಳು ದೇಶಾದ್ಯಂತ ಸುಮಾರು 60ಕ್ಕೂ ಅಧಿಕ ಪ್ರಕರಣದಲ್ಲಿ ಭಾಗಿಯಾಗಿರುವ ಶಂಕೆ ಇದೆ ಎಂದರು.

ಮಂಗಳೂರು ನಗರ ಪೊಲೀಸ್‌ ಉಪ ಆಯುಕ್ತ(ಕಾನೂನು ಹಾಗೂ ಸುವ್ಯವಸ್ಥೆ) ಹಾಗೂ ನಗರ ಪೊಲೀಸ್‌ ಉಪ ಆಯುಕ್ತ (ಅಪರಾಧ ಹಾಗೂ ಸಂಚಾರ) ಇವರ ನಿರ್ದೇಶನದಂತೆ ಸೈಬರ್‌ ಕ್ರೈಂ ಪೊಲೀಸ್‌ ಠಾಣೆಯ ಪೊಲೀಸ್‌ ನಿರೀಕ್ಷರು ಹಾಗೂ ಸಿಬ್ಬಂದಿಗಳು ಆರೋಪಿಗಳನ್ನು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

Comments are closed.