ಕರಾವಳಿ

ಪವರ್‌ಲಿಫ್ಟಿಂಗ್ ಚಾಂಪಿಯನ್‌ಷಿಪ್ : ಮಂಗಳೂರಿನ ಪ್ರದೀಪ್ ಕುಮಾರ್‌ರಿಗೆ ಚಿನ್ನದ ಪದಕ

Pinterest LinkedIn Tumblr

ಮಂಗಳೂರು: ತಮಿಳುನಾಡಿನ ಕೊಯಂಬತ್ತೂರಿನಲ್ಲಿ ನಡೆದ ನ್ಯಾಷನಲ್ ಸೀನಿಯರ್ ಪವರ್‌ ಲಿಫ್ಟಿಂಗ್ ಚಾಂಪಿಯನ್‌ಷಿಪ್ 2021ರಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿದ ಮಂಗಳೂರಿನ ಪ್ರದೀಪ್ ಕುಮಾರ್ ಆಚಾರ್ಯ 83 ಕೆ.ಜಿ. ದೇಹತೂಕ ವಿಭಾಗದಲ್ಲಿ ಒಂದು ಚಿನ್ನ, ಒಂದು ಬೆಳ್ಳಿ, ಒಂದು ಕಂಚಿನ ಪದಕ ಪಡೆದ್ದಾರೆ.

ಇವರು ಸ್ಕ್ವಾಟ್ ವಿಭಾಗದಲ್ಲಿ 312.5 ಕೆ.ಜಿ., ಬ್ರೆಂಚ್‌ಪ್ರೆಸ್ ವಿಭಾಗದಲ್ಲಿ 220 ಕೆ.ಜಿ., ಡೆಡ್ ಲಿಫ್ಟ್ ವಿಭಾಗದಲ್ಲಿ 275 ಕೆ.ಜಿ. ಒಟ್ಟು 807 ಕೆ.ಜಿ. ಭಾರ ಎತ್ತುವ ಮೂಲಕ ಮೂರು ಪದಕಗಳನ್ನು ಗಳಿಸಿದ್ದಾರೆ.

ಇವರು ಮಂಗಳೂರಿನ ಬಾಲಾಂಜನೇಯ ಜಿಮ್ನೇಷಿಯಂನಲ್ಲಿ ಸತೀಶ್ ಕುಮಾರ್ ಕುದ್ರೋಳಿ ಅವರಲ್ಲಿ ತರಬೇತಿ ಪಡೆಯುತ್ತಿದ್ದಾರೆ.

Comments are closed.