ಕರಾವಳಿ

ದ.ಕ.ಜಿಲ್ಲೆಯ 65 ದೇವಸ್ಥಾನಗಳಿಗೆ ವ್ಯವಸ್ಥಾಪನಾ ಸಮಿತಿ ರಚನೆ: ಇಲ್ಲಿದೆ ದೇವಸ್ಥಾನಗಳ ವಿವರ

Pinterest LinkedIn Tumblr

ಮಂಗಳೂರು, ಫೆಬ್ರವರಿ 20 : ದ.ಕ. ಜಿಲ್ಲೆಯ ಪ್ರವರ್ಗ ‘ಬಿ’ ಮತ್ತು ‘ಸಿ’ ಗೆ ಸೇರಿದ ಒಟ್ಟು 65 ದೇವಸ್ಥಾನ/ದೈವಸ್ಥಾನಗಳಿಗೆ 3 ವರ್ಷದ ಅವಧಿಗೆ ವ್ಯವಸ್ಥಾಪನಾ ಸಮಿತಿ ರಚಿಸಲಾಗಿದೆ.

ಮಂಗಳೂರು ತಾಲೂಕಿನ ಪ್ರವರ್ಗ ಬಿ ಮತ್ತು ಸಿ ಗೆ ಸೇರಿದ ಒಟ್ಟು 19 ದೇವಸ್ಥಾನಗಳ ವಿವರ ಇಂತಿವೆ:- ಶ್ರೀ ಕರಿಂಬಭೂತಸ್ಥಾನ ಜಪ್ಪಿನಮೊಗರು, ಶ್ರೀ ಮುಂಡಿತ್ತಾಯ ದೈವಸ್ಥಾನ ಗುರುಪುರ, ಶ್ರೀ ಅಲಂಕಾರುಗುಡ್ಡೆ ಮಲರಾಯ ದೈವಸ್ಥಾನ ತಲಪಾಡಿ, ಶ್ರೀ ದುರ್ಗಾಂಬಾ ದೇವಸ್ಥಾನ ತಡಂಬೈಲ್ ಸುರತ್ಕಲ್, ಶ್ರೀ ಕಲ್ಲುಡೇಲು ಸದಾಶಿವ ದೇವಸ್ಥಾನ ಬೊಂಡಂತಿಲ, ಶ್ರೀ ಕೊಂಡಾಣ ಪಿಲಿಚಾಮುಂಡಿ ದೈವಸ್ಥಾನ ಕೋಟೆಕಾರು, ಶ್ರೀ ಆದಿಜನಾರ್ಧನ ದೇವಸ್ಥಾನ ಶೀಮಂತೂರು, ಶ್ರೀ ವಿಶ್ವನಾಥ ದೇವಸ್ಥಾನ ಕಾಟಿಪಳ್ಳ, ಶ್ರೀ ಅನಂತಪದ್ಮನಾಭ ದೇವಸ್ಥಾನ ಮಾಣೂರು ನೀರುಮಾರ್ಗ, ಶ್ರೀ ನೆಲ್ಲಿತೀರ್ಥ ಸೋಮನಾಥೇಶ್ವರ ದೇವಸ್ಥಾನ ನೀರುಡೆ, ಶ್ರೀ ಪೋರ್ಕೋಡಿ ಸೋಮನಾಥೇಶ್ವರ ದೇವಸ್ಥಾನ ಕೆಂಜಾರು, ಶ್ರೀ ಬೆಂಕಿನಾಥೇಶ್ವರ ದೇವಸ್ಥಾನ ಕಳವಾರು, ಶ್ರೀ ಧೂಮಾವತಿ ದೈವಸ್ಥಾನ ಕೊಂಪದವು, ಶ್ರೀ ನೀಲಕಂಠ ದೇವಸ್ಥಾನ ಕಂದಾವರ, ಶ್ರೀ ಶಾಸ್ತಾವು ಬ್ರಹ್ಮದೇವಸ್ಥಾನ ಪಡುಪೆರಾರ, ಶ್ರೀ ಸಾವಿರಾಳು ಧೂಮಾವತಿ ದೈವಸ್ಥಾನ ಕವತ್ತಾರು, ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಇರುವೈಲು, ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಕೊಂಪದವು, ಪೆರ್ಮಂಕಿ ಸದಾಶಿವ ದೇವಸ್ಥಾನ ಉಳಾಯಿಬೆಟ್ಟು.

ಬಂಟ್ವಾಳ ತಾಲೂಕಿನ ಪ್ರವರ್ಗ ಸಿ ಗೆ ಸೇರಿದ ಒಟ್ಟು 15 ದೇವಸ್ಥಾನಗಳ ವಿವರ ಇಂತಿವೆ:- ಶ್ರೀ ಲಕ್ಷ್ಮೀನರಸಿಂಹ ದೇವಸ್ಥಾನ ಕಡೇಶಿವಾಲಯ, ಶ್ರೀ ಸೋಮನಾಥೇಶ್ವರ ದೇವಸ್ಥಾನ ಕುಂಡಾವು ಇರಾ, ಶ್ರೀ ಮಲರಾಯ ದೈವಸ್ಥಾನ ಕನ್ಯಾನ, ಶ್ರೀ ನೀಲಿಕೊಡಮಂತ್ತಾಯ ದೈವಸ್ಥಾನ ಅಜ್ಜಿಬೆಟ್ಟು, ಶ್ರೀ ದೇಲಂತಬೆಟ್ಟು ವಿಷ್ಣುಮೂರ್ತಿ ದೇವಸ್ಥಾನ ಕನ್ಯಾನ, ಶ್ರೀ ಲಕ್ಷ್ಮೀವಿಷ್ಣುಮೂರ್ತಿ ದೇವಸ್ಥಾನ ದೇಲಂತಬೆಟ್ಟು ಕಳ್ಳಿಗೆ, ಶ್ರೀ ವಿನಾಯಕ ದೇವಸ್ಥಾನ ಅಮ್ಮುಂಜೆ, ಶ್ರೀ ಗುಡ್ಡೆಚಾಮುಂಡಿ ದೇವರ ದೇವಸ್ಥಾನ ಪೆರಾಜೆ, ಶ್ರೀ ಕೋಡಂದರಾಮಚಂದ್ರ ದೇವಸ್ಥಾನ ನರಿಕೊಂಬು, ಶ್ರೀ ಭಯಂಕೇಶ್ವರ ದೇವಸ್ಥಾನ ನರಿಕೊಂಬು, ಶ್ರೀ ಸುಬ್ರಾಯ ದೇವಸ್ಥಾನ ಸಜೀಪ ಮುನ್ನೂರು, ಶ್ರೀ ಬೈದ್ಯಾರಿ ಭಟ್ಟಣ್ಣಾಯ ದೈವಸ್ಥಾನ ಕನ್ಯಾನ, ಶ್ರೀ ಕನಪಡಿತ್ತಾಯ ದೈವಸ್ಥಾನ ಕಳ್ಳಿಗೆ, ಶ್ರೀ ಕಾಪಿನ ಮಲರಾಯ ದೈವಸ್ಥಾನ ವಿಟ್ಲ ಪಡ್ನೂರು, ಶ್ರೀ ನರಹರಿಪರ್ವತ ಸದಾಶೀವ ದೇವಸ್ಥಾನ ಅಮ್ಟೂರು, ಶ್ರೀ ಗೋಪಾಲಕೃಷ್ಣ ದೇವಸ್ಥಾನ ಕೊಳ್ನಾಡು ಮಂಚಿ.

ಬೆಳ್ತಂಗಡಿ ತಾಲೂಕು ಪ್ರವರ್ಗ ಬಿ ಮತ್ತು ಸಿ ಗೆ ಸೇರಿದ ಒಟ್ಟು 8 ದೇವಸ್ಥಾನಗಳ ವಿವರ ಇಂತಿವೆ:-ಕಕ್ಕಿಂಜೆ ಇಷ್ಟದೇವತಾ ದೇವಸ್ಥಾನ ಬೆಟ್ಟುಚಾರ್ಮಾಡಿ, ಗೋಪಾಲಕೃಷ್ಣ ದೇವಸ್ಥಾನ ಉಜಿರೆ ಮುಂಡತ್ತೋಡಿ, ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಕರಾಯ, ಶ್ರೀ ಮಹಿಷಮರ್ಧಿನಿ ದುರ್ಗಾಪರಮೇಶ್ವರಿ ದೇವಸ್ಥಾನ ಪಾರೆಂಕಿ, ಶ್ರೀ ಓಡೀಲ್ ಮಹಾಲಿಂಗೇಶ್ವರ ದೇವಸ್ಥಾನ ಪದಂಗಡಿ, ಶ್ರೀ ಮೊಂಟೆತ್ತಡ್ಕ ದುರ್ಗಾಪರಮೇಶ್ವರಿ ದೇವಸ್ಥಾನ ಶಿಬಾಜೆ, ಶ್ರೀ ಮಾಯಾ ಮಹಾದೇವಿ ದೇವಸ್ಥಾನ ಬೆಳಾಲು, ಶ್ರೀ ಲೋಕನಾಥೇಶ್ವರ ದೇವಸ್ಥಾನ ನಿಡಿಗಲ್ ಕನ್ಯಾಡಿ.

ಪುತ್ತೂರು ತಾಲೂಕು ಪ್ರವರ್ಗ ಬಿ ಮತ್ತು ಸಿ ಗೆ ಸೇರಿದ ಒಟ್ಟು 18 ದೇವಸ್ಥಾನಗಳ ವಿವರ ಇಂತಿವೆ:- ಶ್ರೀ ಬರೆಪ್ಪಾಡಿ ಪಂಚಲಿಂಗೇಶ್ವರ ದೇವಸ್ಥಾನ ಕುದ್ಮಾರು, ಶ್ರೀ ಜನಾರ್ಧನ ದೇವಸ್ಥಾನ ಕೊಡಿಪಾಡಿ, ಶ್ರೀ ಗೋಪಾಲಕೃಷ್ಣ ದೇವಸ್ಥಾನ ಬಿಳಿನೆಲೆ, ಶ್ರೀ ಮದಗಜನಾರ್ಧನ ದೇವಸ್ಥಾನ ಪಡ್ನೂರು, ಶ್ರೀ ವಿಷ್ಣುಮೂರ್ತಿ ದೇವಸ್ಥಾನ, ಶಾಂತಿಗೋಡು, ಶ್ರೀ ಶಾಸ್ತಾವು ದೇವರು ದೇವಸ್ಥಾನ ಶಾಂತಿಗೋಡು, ಅಗಳಿ ಶ್ರೀ ಸದಾಶಿವ ದೇವಸ್ಥಾನ, ಕ್ಯಾಮಣ, ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಕುರಿಯ, ಶ್ರೀ ಅಂಗಾಜ ವಿಷ್ಣುಮೂರ್ತಿ ದೇವಸ್ಥಾನ ಕುರಿಯ, ಆಲಡ್ಕ ಶ್ರೀ ಸದಾಶಿವ ದೇವಸ್ಥಾನ ಮುಡ್ನೂರು, ಶ್ರೀ ಕುಕ್ಕಿನಡ್ಕ ಸುಬ್ರಾಯ ದೇವಸ್ಥಾನ ಮುಡ್ನೂರು, ಶ್ರೀ ಸುಬ್ರಾಯ ದೇವಸ್ಥಾನ ಸರ್ವೆ, ಶ್ರೀ ಮಣಿಕಂಠ ವಿಷ್ಣುಮೂರ್ತಿ ದೇವಸ್ಥಾನ ಕೊಳ್ತಿಗೆ, ಕುಂಟ್ಲಾಡಿ ಶ್ರೀ ಕುಕ್ಕೆನಾಥ ದೇವರು ದೇವಸ್ಥಾನ ಚಾರ್ವಾಕ, ಶ್ರೀ ಮರಕ್ಕೂರು ವಿಷ್ಣುಮೂರ್ತಿ ದೇವಸ್ಥಾನ ಶಾಂತಿಗೋಡು, ಶ್ರೀ ದುರ್ಗಾಂಬಾ ದೇವಸ್ಥಾನ, ಕಡಬ, ಪುತ್ತೂರು, ಶ್ರೀ ಶ್ರೀಕಂಠ ಮಹಾಗಣಪತಿ ದೇವಸ್ಥಾನ ಬಲ್ನಾಡು ಪುತ್ತೂರು.
ಸುಳ್ಯ ತಾಲೂಕು ಪ್ರವರ್ಗ ಸಿ ಗೆ ಸೇರಿದ ಒಟ್ಟು 4 ದೇವಸ್ಥಾನಗಳ ವಿವರ ಇಂತಿವೆ:- ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನ ವಳಲಂಬೆ ಗುತ್ತಿಗಾರು, ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ಎಡಮಂಗಲ, ಶ್ರೀ ಕೊಚ್ಚಿಲ ಸುಬ್ರಹ್ಮಣ್ಯ ದೇವಸ್ಥಾನ ಕೊಲ್ಲಮೊಗ್ರು, ಶ್ರೀ ಚೊಕ್ಕಾಡಿ ಉಳ್ಳಾಕುಲು ಯಾನೆನಾಯರ್ ಭೂತ ದೈವಸ್ಥಾನ ಅಮರಪಡ್ನೂರು.

ಒಟ್ಟು 65 ದೇವಸ್ಥಾನ/ದೈವಸ್ಥಾನಗಳಿಗೆ 3 ವರ್ಷದ ಅವಧಿಗೆ ವ್ಯವಸ್ಥಾಪನಾ ಸಮಿತಿ ರಚನೆಯನ್ನು ಸ್ವೀಕರಿಸಿ ಆದೇಶಿಸಲಾಗಿದೆ ಎಂದು ಜಿಲ್ಲಾ ಧಾರ್ಮಿಕ ಪರಿಷತ್, ಮಂಗಳೂರು ಹಾಗೂ ಸಹಾಯಕ ಆಯುಕ್ತರು, ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯದತ್ತಿ ಇಲಾಖೆಯ ಪದನಿಮಿತ್ತ ಕಾರ್ಯದರ್ಶಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Comments are closed.