ಕರಾವಳಿ

ಕಲ್ಲಿನ ಕೋರೆಯಲ್ಲಿ ಅನ್ಯಕೋಮಿನ ಯುವಕರ ಜೊತೆ ಮೋಜುಮಸ್ತಿಯಲ್ಲಿ ತೊಡಗಿದ್ದ ಹಿಂದೂ ಯುವತಿಯರು : ರಾಮ್ ಸೇನಾ ದಾಳಿ

Pinterest LinkedIn Tumblr

ಮಂಗಳೂರು : ನಗರದ ಕಾಲೇಜಿನ ಇಬ್ಬರು ಯುವತಿಯರು ಅನ್ಯಕೋಮಿನ ಮೂವರು ಯುವಕರ ಜೊತೆ ಅರೆನಗ್ನ ಸ್ಥಿತಿಯಲ್ಲಿ ಮೋಜಿಮಸ್ತಿನಲ್ಲಿ ತೊಡಗಿದ್ದು, ಈ ವೇಳೆ ಸ್ಥಳಕ್ಕೆ ಆಗಮಿಸಿದ ರಾಮ್ ಸೇನಾ ಕಾರ್ಯಕರ್ತರು ಅವರನ್ನು ಪೊಲೀಸರಿಗೆ ಒಪ್ಪಿಸಿದ ಘಟನೆ ನಗರದ ಹೊರವಲಯದ ಎಕ್ಕಾರಿನಲ್ಲಿ ನಡೆದಿದೆ.

ನಗರದ ಕಾಲೇಜಿನ ಇಬ್ಬರು ಹಿಂದೂ ಹುಡುಗಿಯರು ಅನ್ಯ ಕೋಮಿನ ಮೂವರು ಹುಡುಗರ ಜೊತೆ ನಗರದ ಹೊರವಲಯದ ಎಕ್ಕಾರಿನ ಕಲ್ಲಿನ ಕೋರೆಯ ಪಕ್ಕ ಅರೆನಗ್ನ ಸ್ಥಿತಿಯಲ್ಲಿ ಮೋಜಿಮಸ್ತಿನಲ್ಲಿ ತೊಡಗಿರುವ ಬಗ್ಗೆ ಮಾಹಿತಿ ಸಿಕ್ಕಿದ ಹಿನ್ನೆಲೆಯಲ್ಲಿ ರಾಮ್ ಸೇನಾ ಶಿವಾಜಿ ಘಟಕದ ಕಾರ್ಯಕರ್ತರು ಸ್ಥಳಕ್ಕೆ ಆಗಮಿಸಿ ಅರೆನಗ್ನ ಸ್ಥಿತಿಯಲ್ಲಿದ್ದ ಯುವತಿಯರು ಮತ್ತು ಯುವಕರನ್ನು ಪತ್ತೆ ಮಾಡಿ ಬಜ್ಪೆ ಠಾಣಾ ಪೊಲೀಸರಿಗೆ ಒಪ್ಪಿಸಿದ್ದಾರೆ.

ಪೊಲೀಸರು ಅವರನ್ನು ವಿಚಾರಣೆ ನಡೆಸಿ ಅವರ ಮನೆಯವರಿಗೆ ಮಾಹಿತಿ ನೀಡಿ ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

Comments are closed.