2021ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಹರಾಜು ಪ್ರಕ್ರಿಯೆಯು ಪ್ರಾರಂಭವಾಗಿದ್ದು, ಹಲವಾರು ಆಟಗಾರರು ಮತ್ತು ತಂಡಗಳು ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿದೆ. ಐಪಿಎಲ್ ನ 14ನೇ ಆವೃತ್ತಿಯಲ್ಲಿ ಒಟ್ಟು 292 ಆಟಗಾರರು ಹರಾಜಿನ ಕಣದಲ್ಲಿದ್ದು, ಎಂಟು ಪ್ರಾಂಚೈಸಿಗಳು ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸುತ್ತಿದೆ.
ಕಳೆದ ವರ್ಷ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದಲ್ಲಿದ್ದು, ಪಂದ್ಯಾಕೂಟದುದ್ದಕ್ಕೂ ನೀರಸ ಪ್ರದರ್ಶನ ತೋರಿದ್ದ ಗ್ಲೆನ್ ಮ್ಯಾಕ್ಸ್ ವೆಲ್ 14.25ಕೋಟಿ ರೂ.ಗೆ ರಾಐಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಹರಾಜಾಗಿದ್ದಾರೆ. ಅವರ ಮೂಲಬೆಲೆಯು 2ಕೋಟಿ ರೂ. ಆಗಿತ್ತು. ಇನ್ನು ಕ್ರಿಸ್ ಮೋರಿಸ್ ಮೂಲಬೆಲೆ 75 ಲಕ್ಷ ರೂ. ಇದ್ದು, 16.25ಕೋಟಿ ರೂ. ಗೆ ಆಜಸ್ಥಾನ ರಾಯಲ್ಸ್ ತಂಡಕ್ಕೆ ಹರಾಜಾಗಿದ್ದಾರೆ.
ಇನ್ನುಳಿದಂತೆ ಆರ್ಸಿಬಿ ತಂಡವು ಕೈಬಿಟ್ಟಿದ್ದ ಮೊಯಿನ್ ಅಲಿ 7ಕೋಟಿ ರೂ.ಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಮಾರಾಟವಾದರೆ, ಶಿವಂ ದುಬೆ ರಾಜಸ್ಥಾನ ತಂಡದ ಪಾಲಾದರು.