ಉಡುಪಿ: ಇಂದಿನಿಂದ ಫಾಸ್ಟ್ ಟ್ಯಾಗ್ ಕಡ್ಡಾಯಗೊಳಿಸಿ ಆದೇಶದ ಹಿನ್ನೆಲೆ ಈ ಆದೇಶ ಪಾಲನೆಗೆ ನವಯುಗ ಕಂಪೆನಿ ಮುಂದಾಗಿದೆ. ಕಂಪೆನಿಯ ಈ ನಿರ್ಧಾರಕ್ಕೆ ಸಾಸ್ತಾನ ಆಸುಪಾಸಿನ ನಾಗರಿಕರರು ವಿರೋಧ ವ್ಯಕ್ತಪಡಿಸಿದರು.
ವಾಹನ ಸಹಿತ ಸಾಸ್ತಾನ ಪೇಟೆಯಲ್ಲಿರುವ ಟೋಲ್ ಗೇಟ್ ಬಳಿ ಜಮಾಯಿಸುತ್ತಿರುವ ಜನರು ಪಾಸ್ಟ್ ಟ್ಯಾಗ್ ನಿಂದ ಸ್ಥಳೀಯ ವಾಹನ ಸವಾರರಿಗೆ ವಿನಾಯತಿ ನೀಡುವಂತೆ ಆಗ್ರಹಿಸಿದರು. ಜನರು ಜಮಾಯಿಸಿ ಪ್ರತಿಭಟಿಸಿದ ಹಿನ್ನೆಲೆ ನವಯುಗ ಕಂಪೆನಿ ಕಾದು ನೋಡುವ ತಂತ್ರಕ್ಕೆ ಮುಂದಾಗಿತ್ತು. ಒಂದಷ್ಟು ಹೊತ್ತು ಟ್ರಾಫಿಕ್ ಜಾಮ್ ಉಂಟಾಗಿದ್ದು ಬಳಿಕ ಟೋಲ್ ಇಲ್ಲದೆ ವಾಹನ ಹೋಗಲು ಪ್ರತಿಭಟನಾಕಾರರು ಅನುವು ಮಾಡಿಕೊಡಲಾಯಿತು.
ಫಾಸ್ಟ್ ಟ್ಯಾಗ್ ಕಡ್ಡಾಯಗೊಳಿಸಿದರೆ ಸ್ಥಳೀಯ ಗ್ರಾಮಸ್ಥರಿಗೆ ಸಂಕಷ್ಟ ಸ್ಥಳೀಯರಿಂದ ಸುಂಕ ಪಡೆಯಬಾರದು ಎಂದು ನಡೆಯುತ್ತಿರುವ ಹೋರಾಟ ತೀವೃಗೊಂಡಿದೆ. ಮಧ್ಯಾಹ್ನದವರೆಗೂ ಪ್ರತಿಭಟನೆ ನಡೆಯುತ್ತಿದ್ದು ಟೋಲ್ ಗೇಟ್ ಗೆ ಅಡ್ಡಲಾಗಿ ಕುಳಿತು ಧಿಕ್ಕಾರ ಕೂಗುತ್ತಿದ್ದಾರೆ.
ಹೆದ್ದಾರಿ ಜಾಗೃತಿ ಸಮಿತಿ ನೇತೃತ್ವದಲ್ಲಿ ಈ ಪ್ರತಿಭಟನೆ ನಡೆದಿದ್ದು ನೂರಾರು ಮಂದಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
(ವರದಿ- ಯೋಗೀಶ್ ಕುಂಭಾಸಿ)