ಕರಾವಳಿ

ಚುನಾವಣಾ ಸೋಲಿನಿಂದ ಹತಾಶರಾಗಿ ಎಸ್.ಡಿ.ಪಿ.ಐ ಮೇಲೆ ಆರೋಪ ಮಾಡುತ್ತಿರುವ ಯು.ಟಿ.ಖಾದರ್ : ಎಸ್.ಡಿ.ಪಿ.ಐ ಆರೋಪ

Pinterest LinkedIn Tumblr

ಮಂಗಳೂರು:- ಇತ್ತೀಚೆಗೆ ನಡೆದಂತಹ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಮಂಗಳೂರು (ಉಳ್ಳಾಲ) ವಿಧಾನಸಭಾ ಕ್ಷೇತ್ರದಲ್ಲಿ ಎಸ್.ಡಿ.ಪಿ.ಐ ಪಕ್ಷವು ನಿರೀಕ್ಷೆಗಿಂತ ಹೆಚ್ಚಿನ ಸ್ಥಾನಗಳನ್ನು ಪಡೆದುಕೊಂಡು ಜಿಲ್ಲೆಯಲ್ಲಿ ಒಂದು ಪರ್ಯಾಯ ಶಕ್ತಿಯಾಗಿ ಹೊರಹೊಮ್ಮುತ್ತಿರುವುದನ್ನು ಅರಗಿಸಿಕೊಳ್ಳಳಾಗದ ಸ್ಥಳೀಯ ಶಾಸಕ ಯು.ಟಿ ಖಾದರ್ ರವರು ಎಸ್.ಡಿ.ಪಿ.ಐ ಮೇಲೆ ನಿರಾದಾರ ಆರೋಪ ಹೊರಿಸುತ್ತಿರುವುದು ಅವರ ಸೋಲಿನ ಹತಾಶ ಮನೋಭಾವವನ್ನು ತೋರಿಸುತ್ತದೆ.

ಮಾತ್ರವಲ್ಲದೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ತನ್ನ ಗೆಲುವಿಗೆ ಕಂಟಕವಾಗುವುದನ್ನು ಅರಿತ ಯು.ಟಿ.ಖಾದರ್ ರವರು ಈ ರೀತಿಯ ಸುಳ್ಳಾರೋಪಗಳನ್ನು ಹಾಗೂ ಅಪಪ್ರಚಾರಗಳನ್ನು ನಡೆಸುತ್ತಿದ್ದಾರೆ. ಇದು ಖಂಡನೀಯವಾಗಿದೆ ಇಂತಹ ಅಪಪ್ರಚಾರಗಳು ಶಾಸಕ ಸ್ಥಾನದಲ್ಲಿರುವ ಯು.ಟಿ.ಖಾದರ್ ರವರಿಗೆ ಶೋಬೆ ತರುವಂತದಲ್ಲ ಎಂದು ಎಸ್‌ಡಿಪಿಐ ಮಂಗಳೂರು ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷರಾದ ಅಬ್ಬಾಸ್ ಕಿನ್ಯಾ ತಿಳಿಸಿರುತ್ತಾರೆ.

ಮಂಗಳೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಎಸ್‌ಡಿಪಿಐ ಪಕ್ಷವು ಸಜಿಪನಡು, ಹಾಗೂ ಪಾವೂರು ಪಂಚಾಯತ್‌ಗಳಲ್ಲಿ ಆಡಳಿತ ಪಡೆದುಕೊಂಡಿದ್ದು, ಹಾಗೂ ಹಲವಾರು ಪಂಚಾಯತ್‌ಗಳಲ್ಲಿ ನಿರ್ಣಾಯಕ ಸ್ಥಾನವನ್ನು ಗಳಿಸಿಕೊಂಡಿರುತ್ತದೆ. ಅದೇ ರೀತಿ ಬಹುತೇಕ ಗ್ರಾಮ ಪಂಚಾಯತ್‌ಗಳಲ್ಲಿ ನಮ್ಮ ಶಕ್ತಿ ಮತ್ತು ಪ್ರಾಬಲ್ಯ ಹೆಚ್ಚುತ್ತಿದ್ದುರುವುದನ್ನು ಮನಗಂಡಂತಹ ಯು.ಟಿ.ಖಾದರ್ ರವರು ಇನ್ನು ಮುಂದೆ ತಮ್ಮ ಬೇಳೆ ಈ ಕ್ಷೇತ್ರದಲ್ಲಿ ಬೇಯುವುದಿಲ್ಲ ಎಂಬುದನ್ನು ಮನಗಂಡು ಈ ರೀತಿಯ ಅಪಪ್ರಚಾರಗಳನ್ನು ನಡೆಸುತ್ತಿದ್ದಾರೆ.

ಈ ರೀತಿಯ ಸುಳ್ಳಾರೋಪಗಳನ್ನು ಜಿಲ್ಲೆಯ ಜನತೆ ಈಗಾಗಲೇ ಅರ್ಥ ಮಾಡಿಕೊಂಡಿದ್ದಾರೆ. ಆದ್ದರಿಂದ ನಮ್ಮ ಶಕ್ತಿ ಇನ್ನಷ್ಟೂ ಹೆಚ್ಚಾಗುತ್ತದೆ ಮತ್ತು ಕಾಂಗ್ರೇಸ್ ನಾಯಕರ ಇಂತಹ ಹೇಳಿಕೆಗಳಿಂದ ನಮ್ಮ ಪಕ್ಷಕ್ಕೆ ಪುಕ್ಕಟೆ ಪ್ರಚಾರ ಸಿಕ್ಕಿದಂತಾಗಿದೆ. ಇದರಿಂದಾಗಿ ಈಗಿನ ಯುವಕರು ನಮ್ಮ ಪಕ್ಷದ ಕಡೆಗೆ ಹೆಚ್ಚಾಗಿ ಆಕರ್ಷಿತರಾಗುತ್ತಿದ್ದಾರೆ ಎಂಬುದರಲ್ಲಿ ಸಂಶಯವಿಲ್ಲ. ಹಾಗಾಗಿ ಇಂತಹ ನಿರಾದಾರ ಮತ್ತು ಸುಳ್ಳು ಆರೋಪಗಳನ್ನು ಮಾಡುವ ಶಾಸಕರಿಗೆ ಕ್ಷೇತ್ರದ ಜನತೆ ಮುಂದಿನ ದಿನಗಳಲ್ಲಿ ತಕ್ಕ ಉತ್ತರ ನೀಡಲಿದ್ದಾರೆ ಎಂದವರು ಆರೋಪಿಸಿದ್ದಾರೆ.

Comments are closed.