ಕರಾವಳಿ

ಪ್ರತಿಯೊಬ್ಬರು ರಸ್ತೆ ನಿಯಮಗಳನ್ನು ಪಾಲಿಸುವುದರಿಂದ ಜೀವನದ ಸುರಕ್ಷೆ ಸಾಧ್ಯ : ಇನ್‌ಸ್ಪೆಕ್ಟರ್ ಜಯಾನಂದ್

Pinterest LinkedIn Tumblr

ಮಂಗಳೂರು : ರಸ್ತೆ ನಿಯಮಗಳನ್ನು ಎಲ್ಲರೂ ಪಾಲಿಸಬೇಕು. ಅದರಿಂದ ಜೀವನದ ಸುರಕ್ಷೆ ಸಾಧ್ಯ ಎಂದು ಸಂಚಾರ ಪಶ್ಚಿಮ ಪೋಲಿಸ್ ಠಾಣೆ ಪಾಂಡೇಶ್ವರದ ಪೋಲೀಸ್ ಇನ್‌ಸ್ಪೆಕ್ಟರ್ ಶ್ರೀ ಜಯಾನಂದ ಕೆ. ಹೇಳಿದರು.

ರಥಬೀದಿಯ ಡಾ.ಪಿ.ದಯಾನಂದ ಪೈ-ಪಿ.ಸತೀಶ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮಂಗಳೂರು ಈ ಕಾಲೇಜಿನಲ್ಲಿ ಯುವ ರೆಡ್‌ಕ್ರಾಸ್ ವತಿಯಿಂದ ನಡೆದ ‘ರಸ್ತೆ ಸುರಕ್ಷತಾ ಸಪ್ತಾಹ’ದ ಬಗೆಗಿನ ಮಾಹಿತಿ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.

ವಿದ್ಯಾರ್ಥಿಗಳು ರಸ್ತೆ ನಿಯಮಗಳನ್ನು ಪಾಲಿಸಿದರೆ ಮುಂದಿನ ಬದುಕಿಗೆ ಅದು ಸಹಾಯ ಮಾಡುತ್ತದೆ ಎಂದು ಅವರು ತಿಳಿಸಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ.ಪ್ರಕಾಶ್‌ಚಂದ್ರ ಶಿಶಿಲ ‘ವಿದ್ಯಾರ್ಥಿ ದೆಸೆಯಿಂದಲೇ ರಸ್ತೆ ನಿಯಮಗಳನ್ನು ಪಾಲಿಸಿದರೆ ಮುಂದೆ ದೇಶದ ಉತ್ತಮ ನಾಗರಿಕರಾಗಲು ಸಾಧ್ಯ’ ಎಂದರು.

ಕಾರ್ಯಕ್ರಮದಲ್ಲಿ ಯುವ ರೆಡ್‌ಕ್ರಾಸ್ ಘಟಕದ ಅಧಿಕಾರಿಗಳಾದ ಡಾ.ಮಹೇಶ್ ಕೆ.ಬಿ, ಪ್ರೊ.ಮಣಿಭೂಷಣ್ ಡಿಸೋಜ ಹಾಗೂ ಸಂಚಾರ ಪಶ್ಚಿಮ ಪೋಲಿಸ್ ಠಾಣೆ ಪಾಂಡೇಶ್ವರದ ಪೋಲೀಸ್ ಕಾನ್ಸ್ಟೇಬಲ್ ಶ್ರೀ ಮಣಿಕಂಠ ಎಂ ಮತ್ತು ಶ್ರೀ ನೀಲಪ್ಪ ಉಪಸ್ಥಿತರಿದ್ದರು. ಯುವ ರೆಡ್‌ಕ್ರಾಸ್ ಘಟಕದ ಅಧಿಕಾರಿ ಪ್ರೊ.ನಯನಾ ಕುಮಾರಿ ಅವರು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

Comments are closed.