ಕರಾವಳಿ

ಆಯುಷ್ ವಿಭಾಗದ ಕೋವಿಡ್ -19 ಲಸಿಕಾ ಕಾರ್ಯಕ್ರಮಕ್ಕೆ ಚಿತ್ರನಟ ನವೀನ್.ಡಿ.ಪಡೀಲ್‌ ಚಾಲನೆ

Pinterest LinkedIn Tumblr

ಮಂಗಳೂರು : ನಗರದ ವೆನ್‍ಲಾಕ್ ಆಸ್ಪತ್ರೆಯ ಆಯುಷ್ ವಿಭಾಗದಲ್ಲಿ ಪಡೀಲ್ ಹಾಗೂ ಶಕ್ತಿನಗರದ ಆರೋಗ್ಯ ಕೇಂದ್ರದ ಸಹಭಾಗಿತ್ವದಲ್ಲಿ ಕೋವಿಡ್ -19 ಲಸಿಕಾ ಕಾರ್ಯಕ್ರಮವನ್ನು ಸೋಮವಾರ ಚಿತ್ರನಟ ಹಾಗೂ ರಂಗಭೂಮಿ ಕಲಾವಿದ ನವೀನ್ ಡಿ ಪಡೀಲ್ ರವರು ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ತಾಲೂಕು ವೈದ್ಯಾಧಿಕಾರಿ ಡಾ. ಸುಜಯ್ ಭಂಡಾರಿ, ಡಿ.ಎಂ.ಓ. ನವೀನ್ ಚಂದ್ರ ಕುಲಾಲ್, ವೈದ್ಯಾಧಿಕಾರಿ ಡಾ. ದಿನೇಶ್, ಡಾ. ನತಾರ ಫರ್ಹಾನ, ಹಿರಿಯ ಮಹಿಳಾ ಆರೋಗ್ಯ ಸಹಾಯಕಿ ರೇಣುಕಾ ಎನ್.ಎಸ್. ಹಾಗೂ ಎಲ್ಲಾ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರು ಉಪಸ್ಥಿತರಿದ್ದರು. ಕಿರಿಯ ಆರೋಗ್ಯ ಸಿಬ್ಬಂದಿಗಳು ಹಾಗೂ ಆಶಾಕಾರ್ಯಕರ್ತೆಯರು ಲಸಿಕೆಯನ್ನು ಪಡೆದುಕೊಂಡರು.

Comments are closed.