ಕರಾವಳಿ

ಮಂಗಳೂರು ಮೂಡಾ ಅಧ್ಯಕ್ಷರ ವಿರುದ್ಧ ವರದಕ್ಷಿಣೆ ಕಿರುಕುಳ ದೂರು ನೀಡಿದ ಬೆನ್ನಲ್ಲೇ ದಿಢೀರ್ ನಾಪತ್ತೆ

Pinterest LinkedIn Tumblr

ಮಂಗಳೂರು, ಜನವರಿ25: ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ (ಮೂಡಾ) ಆಯುಕ್ತ ಜಿ.ಟಿ. ದಿನೇಶ್ ಕುಮಾರ್ ಅವರ ವಿರುದ್ಧ ವರದಕ್ಷಿಣೆ ಕಿರುಕುಳ ದೂರು ದಾಖಲಾಗಿದ್ದು,ಇದರ ಬೆನ್ನಲ್ಲೇ ಅವರು ಯಾರ ಸಂಪರ್ಕಕ್ಕೂ ಸಿಗದೆ ನಾಪತ್ತೆಯಾಗಿದ್ದಾರೆ.

ಮೂಲತಃ ದಾವಣಗೆರೆಯವರಾದ 2012ರ ಕೆಎಎಸ್ ಬ್ಯಾಚ್ ಅಧಿಕಾರಿ ಜಿ.ಟಿ. ದಿನೇಶ್ ಕುಮಾರ್ (38) ಅವರು ತಿಂಗಳ ಹಿಂದೆಯಷ್ಟೇ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ (ಮೂಡಾ) ಆಯುಕ್ತರಾಗಿ ನೇಮಕಗೊಂಡಿದ್ದರು. ಅವರು ಮಂಗಳೂರಿನ ಉರ್ವ ಮಾರ್ಕೆಟ್ ಬಳಿಯ ಅಪಾರ್ಟ್ ಮೆಂಟ್ ನಲ್ಲಿ ವಾಸವಿದ್ದರು. ಅವರ ಪತ್ನಿ ಬೆಂಗಳೂರಿನಲ್ಲಿ ವಾಸವಿದ್ದರು.

ಇದೀಗ ಅಯುಕ್ತರ ವಿರುದ್ಧ ಪತ್ನಿಗೆ ಕಿರುಕುಳ ನೀಡಿದ ಹಾಗೂ ಕೊಲೆಯತ್ನ ಆರೋಪ ಮಾಡಿ ಠಾಣೆಯಲ್ಲಿ ದೂರು ನೀಡಲಾಗಿದೆ. ಇದರ ಬೆನ್ನಲ್ಲೇ ಅವರು ಯಾರ ಸಂಪರ್ಕಕ್ಕೂ ಸಿಗದೆ ನಾಪತ್ತೆಯಾಗಿದ್ದಾರೆ.

ಪತ್ನಿ ದೀಪ್ತಿ ಅವರು ಕೊಲೆಯತ್ನ ಹಾಗೂ ವರದಕ್ಷಿಣೆ ಕಿರುಕುಳ ಆರೋಪ ಮಾಡಿ ಬೆಂಗಳೂರಿನ ಆರ್.ಆರ್.ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿರುವುದರಿಂದ ದಿನೇಶ್‌ಕುಮಾರ್ ದಿಢೀರ್ ನಾಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ.

ಶುಕ್ರವಾರ ಹಗಲು ವೇಳೆ ಕಚೇರಿಗೆ ಬಂದಿದ್ದ ದಿನೇಶ್ ಕುಮಾರ್ ರಾತ್ರಿಯಿಂದ ಮನೆಗೆ ಬೀಗ ಹಾಕಿ ನಾಪತ್ತೆಯಾಗಿದ್ದಾರೆ. ಎರಡನೇ ಶನಿವಾರ ರಜೆ ಇದ್ದು, ರವಿವಾರ ರಜೆ. ಹೀಗಾಗಿ ಅವರು ಬೆಂಗಳೂರಿಗೆ ಹೋಗಿರಬಹುದು ಎಂದು ಶಂಕೆ ವ್ಯಕ್ತವಾಗಿದೆ. ಆದರೆ ಮೂಡ ಅಧ್ಯಕ್ಷರ ಸೇರಿದಂತೆ ಯಾರು ಕರೆ ಮಾಡಿದರೂ ದಿನೇಶ್ ಕುಮಾರ್ ಸಂಪರ್ಕಕ್ಕೆ ಸಿಗುತ್ತಿಲ್ಲ. ಅವರ ಮೊಬೈಲ್ ಸ್ವಿಚ್ಡ್ ಆಫ್ ಆಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

Comments are closed.