ಕರಾವಳಿ

ಮಂಗಳೂರಿನ ಸಫಿಯಾರಿಗೆ ಮೆಲ್ಬೋರ್ನ್ ಆಸ್ಟ್ರೇಲಿಯಾ ಯೂನಿವರ್ಸಿಟಿಯಿಂದ ಗೌರವ ಡಾಕ್ಟರೇಟ್

Pinterest LinkedIn Tumblr

ಮಂಗಳೂರು : ಸಫಿಯಾ, ಮೇಲ್ವಿಚಾರಕಿ ಬರಕಃ ಇಂಟರ್ನ್ಯಾಷನಲ್ ಸ್ಕೂಲ್ ಅಂಡ್ ಕಾಲೇಜು , ಇವರು ಡಾ. ಜುನೈದ್ ಖಾನ್ ಇವರ ಮಾರ್ಗದರ್ಶನದಲ್ಲಿ ಮಂಡಿಸಿದ ” ಹಿಜಾಮ , ಅನ್ಸಿಯೆಂಟ್ ಹೀಲಿಂಗ್ ಥೆರಪಿ ಇನ್ ದಿ ಮೊಡರ್ನ್ ಎರ ” ಎಂಬ ಮಾಹಾ ಪ್ರಬಂಧಕ್ಕೆ ಸೈಂಟ್ ಮದರ್ ಥೆರೆಸಾ ಯೂನಿವರ್ಸಿಟಿ, ಮೆಲ್ಬೋರ್ನ್ ಆಸ್ಟ್ರೇಲಿಯಾ. ಇವರು ಕೊಡಮಾಡುವ ಗೌರವ ಡಾಕ್ಟರೇಟ್ ಪದವಿಗೆ ಭಾಜನರಾಗಿದ್ದಾರೆ.

ಇವರು ಕೆ.ಸಿ. ನಗರ. ದಿ. ಮೊಯಿದಿನ್ ಕುಞ ಮುಸ್ಲಿಯಾರ್ ಮತ್ತು ಬೀಫಾತಿಮ ಇವರ ಪುತ್ರಿ ಹಾಗೂ ಆಸೀಫ್ ಬದ್ರಿಯಾ, ಕೃಷ್ಣಾಪುರ ಇವರ ಪತ್ನಿಯಾಗಿದ್ದಾರೆ.

ಪದವಿ ಪ್ರಧಾನ ಸಮಾರಂಭವು ಇತ್ತೀಚಿಗೆ ಕ್ಯಾಪಿಟಲ್ ಹೋಟೆಲ್, ರಾಜಭವನ್ ರಸ್ತೆ ಬೆಂಗಳೂರಿನಲ್ಲಿ ಜರುಗಿತು. ಸಮಾರಂಭದಲ್ಲಿ ಡಿ .ಅರ್.ಡಿ. ಓ. ಬೆಂಗಳೂರಿನ ಪ್ರಮುಖ ವಿಜ್ಞಾನಿಗಳು ಭಾಗವಹಿಸಿದ್ದರು.

Comments are closed.