ಕರ್ನಾಟಕ

ಆನ್‌ಲೈನ್ ಕ್ಲಾಸಿಗೆ ಮಕ್ಕಳಿಗೆ ಮೊಬೈಲ್ ನೀಡುವ ಪೋಷಕರೆ ಎಚ್ಚರ: ಬೆಚ್ಚಿಬೀಳಿಸುತ್ತೆ ಈ ಸ್ಟೋರಿ..!

Pinterest LinkedIn Tumblr

K.W ವಿಶೇಷ ವರದಿ: ಸಾರ್ವಜನಿಕರಲ್ಲಿ ಮತ್ತು ಶಾಲಾ ಕಾಲೇಜು ವಿದ್ಯಾರ್ಥಿಗಳಲ್ಲಿ, ಪೋಷಕರಲ್ಲಿ, ಶಾಲಾ / ಕಾಲೇಜು ಮುಖ್ಯಸ್ಥರು, ಶಿಕ್ಷಕರಿಗೆ ಪೊಲೀಸ್ ಇಲಾಖೆ ಮಹತ್ವದ ಸಂದೇಶ ನೀಡಿದೆ.

(ಸಾಂದರ್ಭಿಕ ಚಿತ್ರ)

ಇತ್ತಿಚೀನ ದಿನಗಳಲ್ಲಿ ಮಕ್ಕಳು ಆನ್ ಲೈನ್ ಕ್ಲಾಸ್ ಸಂಬಂಧ ಮೊಬೈಲ್ ಬಳಕೆ ಮಾಡುತ್ತಿದ್ದು ಇದನ್ನು ಕೆಲವು ದುರುಳರು ದುರುಪಯೋಗ ಮಾಡಿಕೊಂಡು ಮಕ್ಕಳನ್ನು ಮೊಬೈಲ್ ಮೂಲಕ ಕರೆ ಮಾಡಿ ಮಾತನಾಡಿಸಿ ಅವರನ್ನು ನಂಬಿಸಿ ಹೆಣ್ಣು ಮಕ್ಕಳ ಫೋಟೋಗಳನ್ನು ವಿವಿಧ ಭಂಗಿಯಲ್ಲಿ ವಿನಿಮಯ ಮಾಡಿಕೊಂಡು ನಂತರ ಮಕ್ಕಳನ್ನು ಬ್ಲಾಕ್ ಮೇಲ್ (ಬೆದರಿಸಿ) ಮಾಡಿ ಲೈಂಗಿಕ ಕಿರುಕುಳ ಮತ್ತು ಲೈಂಗಿಕ ದೌರ್ಜನ್ಯ ಮಾಡುತ್ತಿದ್ದು ಮಕ್ಕಳು ಇವರ ಆಮಿಷಗಳಿಗೆ ಒಪ್ಪದಿದ್ದಾಗ ಮಕ್ಕಳ ವಿವಿಧ ಭಂಗಿಯ ಫೋಟೋವನ್ನು ಸಾರ್ವಜನಿಕವಾಗಿ ವೈರಲ್ ಮಾಡುತ್ತಿದ್ದು ಇದರಿಂದ ಮಕ್ಕಳ ಭವಿಷ್ಯಕ್ಕೆ ತೊಂದರೆ ಯಾಗುತ್ತಿರುತ್ತದೆ. ಈ ಸಂಬಂಧ ಈಗಾಗಲೇ ಕಳೆದೆರಡು ದಿನಗಳ ಹಿಂದೆ ಕೊಡಗು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯದ ಅದೇಶದಂತೆ ಆರೋಪಿಯು ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾನೆ.

ಈ ರೀತಿ ದುರುಳರು ಮಕ್ಕಳನ್ನು ನಂಬಿಸಿ ಹೆಣ್ಣು ಮಕ್ಕಳ ಫೋಟೋ ಗಳನ್ನು ವಿವಿಧ ಭಂಗಿಯಲ್ಲಿ ವಿನಿಮಯ ಮಾಡಿಸಿಕೊಂಡು ಇತರರಿಗೆ ವೈರಲ್ ಮಾಡುವುದು ಅಪರಾಧವಾಗಿದ್ದು ಇದಕ್ಕೆ ಕಾನೂನಡಿಯಲ್ಲಿ 67(ಎ), 67(ಬಿ) ಐ.ಟಿ ಆಕ್ಟ್ ಅಡಿಯಲ್ಲಿ ಮೊದಲ ಬಾರಿಗೆ 5 ವರ್ಷಗಳ ವರೆಗಿನ ಸೆರೆವಾಸ ಮತ್ತು 10 ಲಕ್ಷ ರೂ ದಂಡ, 2 ನೆ ಬಾರಿಗೆ ಮತ್ತು ನಂತರದಲ್ಲಿ 7 ವರ್ಷಗಳ ವರೆಗಿನ ಸೆರೆವಾಸ 10 ಲಕ್ಷ ರೂ. ದಂಡದ ಶಿಕ್ಷೆ ಇದ್ದು ಅಲ್ಲದೆ ಪೋಕ್ಸೋ ಕಲಂ 8, 10, 12 ರಡಿಯಲ್ಲಿ 3 ರಿಂದ 7 ವರ್ಷಗಳ ವರೆಗಿನ ಸೆರೆವಾಸ ಮತ್ತು ದಂಡದ ಶಿಕ್ಷೆ ಇರುವುದಾಗಿದೆ.

ಆದ್ದರಿಂದ ಪ್ರತಿಯೊಬ್ಬ ಪೋಷಕರು ತಮ್ಮ ಮಕ್ಕಳ ಕಡೆ ಹೆಚ್ಚಿನ ಕಾಳಜಿವಹಿಸಿ ಅವರ ಕಡೆ ಗಮನಹರಿಸಬೇಕು. ಅಲ್ಲದೆ ಈ ರೀತಿ ಫೋಟೋಗಳು ವೈರಲ್ ಅಗಿರುವುದು ಸಾರ್ವಜನಿಕರು, ಶಾಲಾ / ಕಾಲೇಜು ಮುಖ್ಯಸ್ಥರು, ಶಿಕ್ಷಕರು, ಪೋಷಕರ ಗಮನಕ್ಕೆ ಕಂಡು ಬಂದಲ್ಲಿ ಕೂಡಲೇ ಸ್ಥಳೀಯ ಪೊಲೀಸ್ ಠಾಣೆಗಾಗಲೀ, ಮಕ್ಕಳ ವಿಶೇಷ ಪೊಲೀಸ್ ಘಟಕಕ್ಕೆ (SJPU) ಆಗಲೀ, Child help Line 1098 ಕ್ಕಾಗಲಿ ಅಥವಾ ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ಕೂಡಲೇ ಮಾಹಿತಿಯನ್ನು ನೀಡಿ ಇತಂಹ ದುರುಳರನ್ನು ಮಟ್ಟ ಹಾಕಲು ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಬೇಕೆಂದು ಕೋರಲಾಗಿದೆ.

Comments are closed.