ಕರಾವಳಿ

ಮಂಗಳೂರು-ಉಡುಪಿ-ಮಂತ್ರಾಲಯ : ನಾನ್ ಎಸಿ ಸ್ಲೀಪರ್ ನೂತನ ಸಾರಿಗೆ ಆರಂಭ

Pinterest LinkedIn Tumblr

ಮಂಗಳೂರು ಜನವರಿ 11 : ಮಂಗಳೂರು ವಿಭಾಗದಿಂದ ಮಂತ್ರಾಲಯಕ್ಕೆ ಪ್ರಯಾಣಿಕರ ಅನುಕೂಲಕ್ಕಾಗಿ ಹೊಸ ನಾನ್ ಎಸಿ ಸ್ಲೀಪರ್ ನೂತನ ಸಾರಿಗೆಯು ಜನವರಿ 14 ರಿಂದ ಪ್ರಾರಂಭಗೊಳ್ಳಲಿದೆ.

ಸಾರಿಗೆಯು ಮಂಗಳೂರಿನಿಂದ ಮಧ್ಯಾಹ್ನ 3.30 ಗಂಟೆಗೆ ಹೊರಟು ಉಡುಪಿ 4.45 ಗಂಟೆ , ಕುಂದಾಪುರ 5.30 ಗಂಟೆ, ಸಿದ್ದಾಪುರ 6.30 ಗಂಟೆ, ಮಾಸ್ತಿಕಟ್ಟೆ 7 ಗಂಟೆ, ತೀರ್ಥಹಳ್ಳಿ 8.05 ಗಂಟೆ, ಶಿವಮೊಗ್ಗ 9.15-9.45 ಗಂಟೆ, ಚಿತ್ರದುರ್ಗ 12.45 ಗಂಟೆ, ಮುಂಜಾನೆ 3.15-3.20ಗಂಟೆಗೆ ಬಳ್ಳಾರಿ ಮಾರ್ಗವಾಗಿ ಮಂತ್ರಾಲಯಕ್ಕೆ ಬೆಳಿಗ್ಗೆ 6.20ಕ್ಕೆ ತಲುಪಲಿದೆ.

ಮರು ಪ್ರಯಾಣದಲ್ಲಿ ಮಂತ್ರಾಲಯದಿಂದ ಸಂಜೆ 5.30 ಗಂಟೆಗೆ ಹೊರಟು ಬಳ್ಳಾರಿ 8.30-9 ಗಂಟೆ, ಚಿತ್ರದುರ್ಗ 11.40 ಗಂಟೆ , ಶಿವಮೊಗ್ಗ ಮುಂಜಾನೆ 2.25 – 3 ಗಂಟೆ , ತೀರ್ಥಹಳ್ಳಿ 4.10 ಗಂಟೆ, ಮಾಸ್ತಿಕಟ್ಟೆ 5.15 ಗಂಟೆ, ಕುಂದಾಪುರ 6.35 ಗಂಟೆ , ಬೆಳಿಗ್ಗೆ 7.15 ಗಂಟೆಗೆ ಉಡುಪಿ ಮಾರ್ಗವಾಗಿ ಮಂಗಳೂರಿಗೆ 8.40ಕ್ಕೆ ತಲುಪಲಿದೆ.

ಈ ಸಾರಿಗೆಗೆ ಅವತಾರ್ ವ್ಯವಸ್ಥೆ ಮೂಲಕ ಮುಂಗಡ ಆಸನ ಕಾದಿರಿಸುವ ವ್ಯವಸ್ಥೆ ಇದ್ದು ಸಾರ್ವಜನಿಕರು ಸದರಿ ಸಾರಿಗೆಯ ಸದುಪಯೋಗವನ್ನು ಪಡೆದುಕೊಳ್ಳಬಹುದು ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವಿಭಾಗೀಯ ನಿಯಂತ್ರಣಾಧಿಕಾರಿಗಳು ತಿಳಿಸಿದ್ದಾರೆ.

Comments are closed.