ಕರಾವಳಿ

ಕೋಟ ಸಮೀಪದ ವಡ್ಡರ್ಸೆಯಲ್ಲಿ ‘ಗೊರಿಲ್ಲಾ’ ಕಂಡು ಪತ್ರಿಕಾ ವಿತರಕ ಫುಲ್ ಶಾಕ್..!

Pinterest LinkedIn Tumblr

ಉಡುಪಿ: ಜಿಲ್ಲೆಯ ಕೋಟ ಸಮೀಪದ ವಡ್ಡರ್ಸೆ ಗ್ರಾಮಪಂಚಾಯತ್ ವ್ಯಾಪ್ತಿಯ ಸರಕಾರಿ ಪ್ರೌಢಶಾಲೆಯ ಹಿಂಭಾಗ ಅರಣ್ಯ ಪ್ರದೇಶದಲ್ಲಿ ಗೊರಿಲ್ಲವೊಂದು ಕಾಣಿಸಿಕೊಂಡ ಘಟನೆ ನಡೆದಿದೆ.

ಸ್ಥಳೀಯ ಪತ್ರಿಕಾ ವಿತರಕ ಯುವಕ ಬೆಳಿಗ್ಗೆ ಹೋಗುವಾಗ ರಸ್ತೆ ಸಮೀಪದ ಕಾಡು ಪ್ರದೇಶದಲ್ಲಿ ಗೊರಿಲ್ಲಾ ಕಾಣಿಸಿಕೊಂಡಿದೆ. ಈ ಬಗ್ಗೆ ಸ್ಥಳೀಯರು ಬ್ರಹ್ಮಾವರ ವ್ಯಾಪ್ತಿಯ ಅರಣ್ಯ ಇಲಾಖಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ಗ್ರಾಮಸ್ಥರ ಮಾಹಿತಿಯಂತೆ ಅರಣ್ಯ ಇಲಾಖಾಧಿಕಾರಿಗಳು ಸ್ಥಳಕ್ಕೆ ತೆರಳಿದ್ದು ಹುಡುಕಾಟ‌ ನಡೆಸಿದರೂ ಗೊರಿಲ್ಲಾ ಪತ್ತೆಯಾಗಿಲ್ಲ ಎಂದು ತಿಳಿದುಬಂದಿದೆ.

ಸುಮಾರು ಎಂಟು ಎಕ್ರೆ ವಿಸ್ತೀರ್ಣದ ಕಾಡು ಪ್ರದೇಶದಲ್ಲಿ ಹುಡುಕಾಟ ನಡೆಸಿದ್ದರೂ ಗೊರಿಲ್ಲ ಪತ್ತೆಯಾಗಿಲ್ಲ. ಗುರುವಾರವೂ ಶೋಧ ಕಾರ್ಯ ನಡೆಸುತ್ತೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಾಡು‌ ಪ್ರದೇಶಲ್ಲಿ ಗೊರಿಲ್ಲಾ ಪತ್ತೆಯಾದ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ.

 

Comments are closed.