ಮಂಗಳೂರು: ಹಿಂದೂ ಯುವ ಸೇನೆ, ಮಂಗಳಾದೇವಿ ಶಾಖೆಯ ವಾರ್ಷಿಕ ಮಹಾಸಭೆಯು ಇತ್ತೀಚೆಗೆ ಕೇಂದ್ರೀಯ ಮಂಡಳಿ ಉಪಾಧ್ಯಕ್ಷರಾದ ನಾಗರಾಜ್ ಆಚಾರ್ಯ ಮಂಗಳಾದೇವಿ ಅವರ ಉಪಸ್ಥಿತಿಯಲ್ಲಿ ನಗರದ ಮಂಗಳಾದೇವಿ ದೇವಸ್ಥಾನ ಬಳಿ ಇರುವ ಶ್ರೀ ದೇವಿ ನಿಲಯದ ಸೇನಾ ಕಾರ್ಯಾಲಯದಲ್ಲಿ ಜರಗಿತು.
ಪ್ರಣೀತ್ ಕುಮಾರ್ ಸ್ವಾಗತಿಸಿ ಪ್ರಾರ್ಥನೆ ಗೈದರು, ಕಾರ್ಯದರ್ಶಿ ಶರತ್ ಮಂಕೀಸ್ಟಾಂಡ್ ವರದಿ ವಾಚಿಸಿ ಕೋಶಾಧಿಕಾರಿ ನಾಗರಾಜ್ ಆಚಾರ್ಯ ಮಂಗಳಾದೇವಿ ಲೆಕ್ಕ ಪತ್ರ ಮಂಡಿಸಿದರು ನಂತರ 2020 – 21ರ ನೂತನ ಕಮಿಟಿ ರಚಿಸಿಲಾಯಿತು.
ಪ್ರಧಾನ ಸಂಚಾಲಕರಾಗಿ ನಾಗರಾಜ್ ಆಚಾರ್ಯ ಮಂಗಳಾದೇವಿ, ಸಂಚಾಲಕರಾಗಿ – ನಿರಂಜನ್ ಮಂಕೀಸ್ಟಾಂಡ್, ಗೌರವ ಅಧ್ಯಕ್ಷರಾಗಿ – ಭಾಸ್ಕರ್ ಐತಾಳ್ ಮಂಗಳಾದೇವಿ , ಜಯಪ್ರಕಾಶ್ ಗರೋಡಿಗಾರ್ಡನ್, ಅಧ್ಯಕ್ಷರಾಗಿ – ಯಶವಂತ್ ಮಂಗಳಾದೇವಿ , ಉಪಾಧ್ಯಕ್ಷರಾಗಿ – ಪುಷ್ಪರಾಜ್ ಗೋರಕ್ಷದಂಡ್ , ನಾಗರಾಜ್ ಬಂಗೇರ , ಸುಧಾಕರ ಶೆಟ್ಟಿ ಮುಳಿಹಿತ್ಲು , ರಘುನಾಥ್ ಮಂಕೀಸ್ಟಾಂಡ್ , ಶೇಖರ್ ನಾಗಬನ ಬಳಿ ಪ್ರಧಾನ ಕಾರ್ಯದರ್ಶಿಯಾಗಿ ಅಕ್ಷತ್ ಕುಮಾರ್ ಅಮರ್ ಆಳ್ವ ರಸ್ತೆ, ಪ್ರಣೀತ ಮಂಕೀಸ್ಟಾಂಡ್, ಆಕಾಶ್ ಬಪ್ಪಾಲ್ , ರಕ್ಷಿತ್ ಮಂಕೀಸ್ಟಾಂಡ್, ಪ್ರಧಾನ ಸಂಘಟನಾ ಕಾರ್ಯದರ್ಶಿಯಾಗಿ – ಶರತ್ ಮಂಕೀಸ್ಟಾಂಡ್, ಪ್ರದೀಪ್ ಮಂಕೀಸ್ಟಾಂಡ್, ಸಂಘಟನಾ ಕಾರ್ಯದರ್ಶಿಯಾಗಿ ಅಶ್ವಿನ್ ಭಂಡಾರಿ , ಅರ್ಜುನ್ ಮಂಕೀಸ್ಟಾಂಡ್ , ಪುನೀತ್ ಜೆಪ್ಪು ಮಾರ್ಕೆಟ್ , ರೋಷನ್ ಮಂಕೀಸ್ಟಾಂಡ್,ಕೋಶಾಧಿಕಾರಿಯಾಗಿ ನಾಗರಾಜ್ ಆಚಾರ್ಯ ಮಂಗಳಾದೇವಿ, ರಕ್ತನಿಧಿ ಸಂಚಾಲಕರಾಗಿ – ಪವನ್ ಮಂಕೀಸ್ಟಾಂಡ್, ಆದರ್ಶ ಮಂಗಳಾದೇವಿ, ಸಂದೀಪ್ ಮಂಗಳಾದೇವಿ, ಅನುಪ್ ಪೂಜಾರಿ ಇವರುಗಳು ಆಯ್ಕೆಗೊಂಡರು. ಪ್ರಣೀತ ಮಂಕೀಸ್ಟಾಂಡ್ ಕಾರ್ಯಕ್ರಮ ನಿರ್ವಹಿಸಿ, ವಂದನಾರ್ಪಣೆ ಗೈದರು .