ಕರಾವಳಿ

ಶಾಲಾ-ಕಾಲೇಜು ಆರಂಭ ದಿನಾಂಕದಲ್ಲಿ ಬದಲಾವಣೆಯಿಲ್ಲ : ಗೊಂದಲಗಳಿಗೆ ತೆರೆ ಎಳೆದ ಸಿಎಂ ಬಿಎಸ್‌ವೈ

Pinterest LinkedIn Tumblr

ಬೆಂಗಳೂರು: ಶಾಲೆ ಆರಂಭದ ವಿಷಯದಲ್ಲಿ ಯಾವುದೇ ಬದಲಾವಣೆಯಿಲ್ಲ. ಜನವರಿ ಒಂದರಿಂದ ಶಾಲೆ ಆರಂಭಿಸಲಾಗುವುದು. ಜನವರಿ 1ರಿಂದ ಶಾಲೆ- ಕಾಲೇಜು ಆರಂಭಿಸುವ ಕುರಿತು (ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿ) ಸಂಪುಟ ಸಭೆಯಲ್ಲಿ ಚರ್ಚೆ ಮಾಡಲಿದ್ದೇವೆ’ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.

ಸಚಿವ ಸಂಪುಟ ಸಭೆಗೂ ಮೊದಲು ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಬ್ರಿಟನ್ ರೂಪಾಂತರ ಕೋವಿಡ್ ದಿಂದ ಇದುವರೆಗೂ ರಾಜ್ಯದಲ್ಲಿ ಯಾವುದೇ ಸಮಸ್ಯೆ ಆಗಿಲ್ಲ. ನಿಗದಿಯಂತೆ ರಾಜ್ಯದಲ್ಲಿ ಜನವರಿ 1ರಿಂದಲೇ ಶಾಲಾ-ಕಾಲೇಜು ಆರಂಭಿಸಲಾಗುತ್ತಿದೆ. ಈ ಬಗ್ಗೆ ಯಾವುದೇ ಬದಲಾವಣೆ ಇಲ್ಲ. ಯಾವುದೇ ಗೊಂದಲಕ್ಕೂ ಪೋಷಕರು ಒಳಗಾಗಬಾರದು. ಈಗಾಗಲೇ ನಿರ್ಧರಿಸಿದಂತೆ ಜನವರಿ 1ರಿಂದ ರಾಜ್ಯದಲ್ಲಿ ಎಸ್ ಎಸ್ ಎಲ್ ಸಿ ಹಾಗೂ ದ್ವಿತೀಯ ಪಿಯುಸಿ ತರಗತಿ ಆರಂಭಿಸಲಾಗುತ್ತದೆ ಎಂಬುದಾಗಿ ಸಿಎಂ ಯಡಿಯೂರಪ್ಪ ಸ್ಪಷ್ಟ ಪಡಿಸಿದ್ದಾರೆ.

ಶಾಲಾ ಆರಂಭದ ಬಗ್ಗೆ ಈಗಾಗಲೇ ನಿರ್ಧಾರ ಮಾಡಲಾಗಿದೆ. ಅದರಂತೆಯೇ ಜನವರಿ 1ರಿಂದ ಎಸ್ ಎಸ್ ಎಲ್ ಸಿ ಹಾಗೂ ದ್ವಿತೀಯ ಪಿಯುಸಿ ತರಗತಿ ಆರಂಭಿಸಲಾಗುತ್ತದೆ. ಆದರೂ ಕೂಡ ಇಂದಿನ‌ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿ ಮತ್ತೊಮ್ಮೆ ತೀರ್ಮಾನ ಮಾಡುತ್ತೇವೆ ಎಂದು ಹೇಳಿದ್ದಾರೆ.

Comments are closed.