
ಮಂಗಳೂರು/ ಸುರತ್ಕಲ್: ಡಿ.28ರಂದು ಸಸಿಹಿತ್ಲು ಹಳೇ ವಿದ್ಯಾರ್ಥಿ ಸಂಘದ ವಠಾರದಲ್ಲಿ ಜಿಲ್ಲಾ ಮಟ್ಟದ ಯುವಜನೋತ್ಸವ ನಡೆಯಲಿದೆ ಎಂದು ಸಂಘದ ಪದಾಧಿಕಾರಿ ನರೇಶ್ ಕುಮಾರ್ ಸಸಿಹಿತ್ಲು ಮಾಧ್ಯಮಗಳಿಗೆ ಮಾಹಿತಿ ನೀಡಿದರು.
ಜಿಲ್ಲಾಡಳಿತ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮಂಗಳೂರು, ದಕ್ಷಿಣ ಕನ್ನಡ ಜಿಲ್ಲಾ ಯುವಜನ ಒಕ್ಕೂಟ, ತಾಲೂಕು ಯುವಜನ ಒಕ್ಕೂಟ ಮಂಗಳೂರು ಹಾಗೂ ಸಸಿಹಿತ್ಲು ಯುವಕ ಯುವತಿ ಮಂಡಲ, ನವೋದಯ ಮಹಿಳಾ ಮಂಡಲ ಇವರ ಸಂಯುಕ್ತ ಆಶ್ರಯದಲ್ಲಿ ಕಾರ್ಯಕ್ರಮ ನಡೆಯಲಿದ್ದು ಜಾನಪದ ಗೀತೆ, ಜಾನಪದ ನೃತ್ಯ, ಏಕಾಂಕ ನಾಟಕ, ಶಾಸ್ತ್ರೀಯ ಸಂಗೀತ, ಹಾರ್ಮೋನಿಯಂ, ಗಿಟಾರ್, ಅಶು ಭಾಷಣ ಮತ್ತು ಶಾಸ್ತ್ರೀಯ ನೃತ್ಯ ವಿಭಾಗದಲ್ಲಿ ಸ್ಪರ್ಧೆ ನಡೆಯಲಿದೆ ಎಂದರು.
ಮುಂಜಾನೆ 9 ಗಂಟೆಗೆ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ. ವಿ. ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ. ಸೆಲ್ವಮಣಿ ಆರ್. ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಸಿಹಿತ್ಲು ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಮಾಧವ ಶೆಟ್ಟಿಗಾರ್, ಯುವಕ ಮಂಡಲದ ಅಧ್ಯಕ್ಷ ಪ್ರವೀಣ್, ಸಂಘದ ಉಪಾಧ್ಯಕ್ಷ ಸತೀಶ್ ತಿಂಗಳಾಯ, ಸಂಘದ ಮಾಜಿ ಕಾರ್ಯದರ್ಶಿ ಅನಿಲ್ ಕಾಂಚನ್, ಪ್ರದೀಪ್ ಎಸ್. ಆರ್., ಪದಾಧಿಕಾರಿ ನರೇಶ್ ಕುಮಾರ್ ಸಸಿಹಿತ್ಲು ಉಪಸ್ಥಿತರಿದ್ದರು.
Comments are closed.