ಕರಾವಳಿ

ತ್ಯಾಗದಿಂದ ಮಾತ್ರ ಸಂತೋಷ ಪಡೆಯಲು ಸಾಧ್ಯ : ಶ್ರೀ ರಾಮಕೃಷ್ಣ ಮಠದ ಸ್ವಾಮಿ ರಘುರಾಮಾನಂದ

Pinterest LinkedIn Tumblr

ಮಂಗಳೂರು : ಕೊಲ್ಯ ಮೂಕಾಂಬಿಕಾ ದೇವಸ್ಥಾನದಲ್ಲಿ ಸಂಸ್ಕೃತ ಭಾರತಿ ಇವರಿಂದ, ನಡೆದ ಗೀತಾ ಜಯಂತಿಯ ಕಾರ್ಯಕ್ರಮದಲ್ಲಿ ” ಭಗವದ್ಗೀತೆ ಯಲ್ಲಿ ತ್ಯಾಗಕ್ಕೆ ಹೆಚ್ಚಿನ ಮಹತ್ವ ಕೊಟ್ಟಿದೆ, ಅದು ಕರ್ಮ ತ್ಯಾಗ ಇರಬಹುದು,ಅಥವಾ ಶಡ್ವೈರಿಗಳ ತ್ಯಾಗ ಇರಬಹುದು, ತ್ಯಾಗದಿಂದ ಮಾತ್ರ ಸಂತೋಷ ಪಡೆಯಬಹುದು ಎಂದು ಶ್ರೀ ರಾಮಕೃಷ್ಣ ಮಠದ ಸ್ವಾಮಿ ರಘುರಾಮಾನಂದಜಿ ಹೇಳಿದರು.

ಒಂದು ವಾರಗಳ ಕಾಲ ನಡೆದ ಗೀತಾಸಂದೇಶ ಕಾರ್ಯಕ್ರಮದ ಗೀತಾ ಜಯಂತಿಯ ಆಚರಣೆಯೊಂದಿಗೆ ಸಮಾಪನಗೊಂಡಿತು.

ಒಂದುವಾರಗಳ ಕಾಲ ಗೀತಾಸಂದೇಶ ಕಾರ್ಯಕ್ರಮವನ್ನು ನಡೆಸಿಕೊಟ್ಟ ಸಂಸ್ಕೃತ ಭಾರತಿ ಯ ಅಧ್ಯಕ್ಷರಾದ ಶ್ರೀ ಎಂ ಆರ್ ವಾಸುದೇವ ರವರನ್ನು ಸನ್ಮಾನಿಸಲಾಯಿತು.

ಮಕ್ಕಳಿಗೆ ಹಾಗೂ ಹಿರಿಯರಿಗೆ ಭಕ್ತಿಯೋಗ ಕಂಠ ಪಾಠ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.ಮಕ್ಕಳಿಗಾಗಿ ಭಗವದ್ಗೀತಾ ರಸ ಪ್ರಶ್ನೆ ಸ್ಪರ್ಧೆ ಕೂಡ ಏರ್ಪಡಿಸಲಾಗಿತ್ತು.

ಸಮಾರಂಭದ ಮುಖ್ಯ ಅತಿಥಿ ಯಾಗಿ ದೇವಾಲಯದ ಅಧ್ಯಕ್ಷರಾದ ಶ್ರೀ ಮಹಾಬಲ ಶೆಟ್ಟಿ ಯವರು ಉಪಸ್ಥಿತರಿದ್ದರು.

ಒಂದುವಾರ ಗಳ ಕಾಲ ನಡೆದ ಗೀತಾ ಸಂದೇಶ ಕಾರ್ಯಕ್ರಮವನ್ನು ಶಾರದಾ ವಿದ್ಯಾನಿ ಕೇತನದ ಸಂಸ್ಕೃತ ಶಿಕ್ಷಕಿ ಯಾದ ಶೀಲಾಶಂಕರಿ ಯವರು, ನಿರ್ವಹಿಸಿದರು.

ಸಂಸ್ಕೃತ ಭಾರತಿ ಮಂಗಳೂರು ವಿಭಾಗ ಸಂಯೋಜಕ ಶ್ರೀ ಸತ್ಯನಾರಾಯಣ ಕೆ ವಿ, ಯವರು ಉಪಸ್ಥಿತರಿದ್ದರು.

ಭಕ್ತಿಯೋಗ ಕಂಠ ಪಾಠ ಸ್ಪರ್ಧೆ ಹಿರಿಯರ ವಿಭಾಗ, ವಸುಧಾ ಪ್ರಥಮ ಬಹುಮಾನ, ಅರ್ಪಿತ ದ್ವಿತೀಯ, ಪ್ರಸನ್ನ ತೃತೀಯ,, ಕಿರಿಯರ ವಿಭಾಗ,, ಪ್ರೆರಣ ಪ್ರಥಮ,ಶ್ರೇಯಸ್ ಕೃಷ್ಣ ದ್ವಿತೀಯ, ದೀಪಾಲಿ ತೃತೀಯ.,ಅತಿಕಿರಿಯ ವಿಭಾಗ, ಪ್ರಥಮ ನಿಹಾರಿಕಾ ,,,ದ್ವಿತೀಯ ಪ್ರಥಮ ಮಲ್ಯ,,, ತೃತೀಯ ಬಹುಮಾನ ಯಶಸ್ ಕೃಷ್ಣ ಪಡೆದರು. ವಿಜೇತರಿಗೆ ಸ್ಥಳದಲ್ಲೆ ಬಹುಮಾನ ವಿತರಣೆ ಮಾಡಲಾಯಿತು.

ಶ್ರೀಮತಿ ರೆಖಾರಾಣಿ ಸ್ವಾಗತಿಸಿದರು,ಸಂಸ್ಕೃತ ಭಾರತಿ ಮಹಾನಗರ ಸಂಯೋಜಕ ಶ್ರೀ ಗಜಾನನ ಬೋವಿಕಾನ ವಂದಿಸಿದರು.

Comments are closed.