ಕರಾವಳಿ

ಯಕ್ಷಗಾನ ದೈವೀಕಕಲೆ ಮಾತ್ರವಲ್ಲ ರಂಗಕಲೆಯೂ ಹೌದು : ಕಟೀಲು ಲಕ್ಷ್ಮೀನಾರಾಯಣ ಆಸ್ರಣ್ಣ

Pinterest LinkedIn Tumblr

ಮಂಗಳೂರು : ದೈವೀಕ ಕಲೆಯಾಗಿ ಜನರಿಂದ ಆರಾಧಿಸಲ್ಪಡುವ ಯಕ್ಷಗಾನವು ನಮ್ಮ ನಾಡಿನ ಶ್ರೀಮಂತ ರಂಗಕಲೆಯಾಗಿದೆ ಎಂದು ಕಟೀಲು ದೇವಳದ ಅರ್ಚಕ ಲಕ್ಷ್ಮೀ ನಾರಾಯಣ ಆಸ್ರಣ್ಣರು ನುಡಿದರು.

ಅವರು ನಗರದ ತುಳು ಭವನದಲ್ಲಿ ‘ಯಕ್ಷ ಪತಿಭೆ (ರಿ) ಮಂಗಳೂರು ಹಾಗೂ ಆಸ್ರಣ್ಣ ಸನ್ಮಾನ ಸಮಿತಿಯು ಹಮ್ಮಿಕೊಂಡಿದ್ದ ದಿ| ಗೋಪಾಲಕೃಷ್ಣ ಆಸ್ರಣ್ಣ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡುತ್ತಿದ್ದರು.

ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಕತ್ತಲ್‌ಸಾರ್, ಕನ್ನಡ ಸಾಹಿತ್ಯ ಪರಿಷತ್‌ನ ಮಾಜಿ ರಾಜಾಧ್ಯಕ್ಷ ಹರಿಕೃಷ್ಣ ಪುನರೂರು, ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ, ಉದ್ಯಮಿ ಅಗರಿ ರಾಘವೇಂದ್ರ ರಾವ್, ಚಂದ್ರಶೇಖರ ಕುಳಾಯಿ, ಡಾ| ಅರುಣೋದಯ ರೈ ಮುಂಬೈ, ರಾಜ್‌ಗೋಪಾಲ ರೈ, ಶೇಖರ್ ಕೋಟ್ಯಾನ್ ಕೊಂಪದವು, ಮೋಹನ್‌ದಾಸ್ ರೈ, ನ್ಯಾಯವಾದಿ, ಶ್ರೀಮತಿ ಪ್ರಫುಲ್ಲಾ ಸಂಜಯ್ ಕುಮಾರ್ ಶೆಟ್ಟಿ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸಹಕಾರದೊಂದಿಗೆ ಜರಗಿದ ಈ ಸಮಾರಂಭದಲ್ಲಿ ಹಿರಿಯ ಯಕ್ಷಗಾನ ಕಲಾವಿದ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಎಂ.ಕೆ ರಮೇಶ ಆಚಾರ್ಯರನ್ನು ದಿ| ಗೋಪಾಲಕೃಷ್ಣ ಆಸ್ರಣ್ಣ ಪ್ರಶಸ್ತಿ ನೀಡಿ ಗೌರವಿಸಲಾಯ್ತು. ಅದೇ ರೀತಿ ಹವ್ಯಾಸಿ ಭಾಗವತರಾದ ಭವ್ಯಶ್ರೀ ಹರೀಶ್ ಕುಲ್ಕುಂದ ಅವರಿಗೆ ಯಕ್ಷ ಸಮ್ಮಾನ’, ಡಾ| ಶ್ರೀನಿವಾಸ ಭಟ್ ಪುರೋಹಿತರು, ಲೋಕಯ್ಯ ಸೇರಾ ಅವರಿಗೆ ಗೌರವ ಸಮ್ಮಾನ ನಡೆಸಲಾಯ್ತು.

‘ಯಕ್ಷ ಪ್ರತಿಭೆ’ಯ ಸಂಚಾಲಕ ಸಂಜಯ ಕುಮಾರ್ ಶೆಟ್ಟಿ ಸ್ವಾಗತಿಸಿ, ಪ್ರಸ್ತಾವನೆಗೈದರು. ರವಿ ಅಲೆವೂರಾಯ ಅಭಿನಂದನೆ ಹಾಗೂ ಸಂಸ್ಮರಣಾ ಭಾಷಣ ಗೈದರು, ಸುನಿಲ್ ಪಲ್ಲಮಜಲು ಕಾರ್ಯಕ್ರಮ ನಿರೂಪಿಸಿದರು.

Comments are closed.