ಕರಾವಳಿ

ಸುರತ್ಕಲ್ ಬಂಟರ ಸಂಘದ ಸಮಾಜಮುಖಿ ಕಾರ್ಯ ಎಲ್ಲರಿಗೂ ಮಾದರಿ : ಶಾಸಕ ಉಮಾನಾಥ್ ಕೋಟ್ಯಾನ್

Pinterest LinkedIn Tumblr

ಸುರತ್ಕಲ್ ಬಂಟರ ಸಂಘದ ವಾರ್ಷಿಕ ಸಮಾವೇಶ, ಅಭಿನಂದನೆ, ಸಹಾಯಹಸ್ತ, ಪ್ರತಿಭಾ ಪುರಸ್ಕಾರ ಸಮಾರಂಭ

ಮಂಗಳೂರು / ಸುರತ್ಕಲ್, ಡಿಸೆಂಬರ್.21 : ಸುರತ್ಕಲ್ ಬಂಟರ ಸಂಘವು ಕೇವಲ ಒಂದು ಸಂಸ್ಥೆಯಾಗದೇ ಸಮಾಜದ ಎಲ್ಲಾ ಸ್ತರದ ಸಂಸ್ಥೆಗಳನ್ನು ಒಗ್ಗೂಡಿಸುವ ಸರ್ವರನ್ನೂ ಸಮಾಜದಲ್ಲಿ ಸದೃಢರಾಗುವಂತೆ ಮಾಡುತ್ತಿದೆ. ಬಂಟರ ಸಂಘದ ಕಾರ್ಯವೈಖರಿಯೂ ಸಮಾದ ಎಲ್ಲಾ ಸಂಘಸಂಸ್ಥೆಗಳಿಗೆ ಮಾದರಿಯಾಗಿದೆ ಎಂದು ಮುಲ್ಕಿ ಮೂಡಬಿದ್ರೆ ವಿಧಾನಸಭಾ ಕ್ಷೇತ್ರ ಶಾಸಕ ಉಮಾನಾಥ್ ಎ. ಕೋಟ್ಯಾನ್ ಅವರು ನುಡಿದರು.

ಅವರು ಸುರತ್ಕಲ್ ಬಂಟರ ಸಂಘದ ವಾರ್ಷಿಕ ಸಮಾವೇಶ ಅಭಿನಂದನೆ, ಸಹಾಯಹಸ್ತ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿ, ಯುವಜನಾಂಗದ ಪ್ರತಿಭೆಯನ್ನು ಗುರುತಿಸುವ ಹಾಗೂ ಪ್ರತಿಭಾ ವೇದಿಕೆಯನ್ನು ನೀಡುವ ಮೂಲಕ ಪ್ರತಿಭೆಯನ್ನು ಹೊರತರುವ ಕೆಲಸವನ್ನು ಸುರತ್ಕಲ್ ಬಂಟರ ಸಂಘ ಮಾಡುತ್ತಿದೆ. ಅಲ್ಲದೇ ಸಮಾಜದ ಅಂಗವಿಕಲರಿಗೆ, ವಿಶೇಷಚೇತನರಿಗೆ ಆರ್ಥಿಕ ಸಹಾಯವನ್ನು ನೀಡುವ ಮೂಲಕ ಸದೃಢರಾಗುವಂತೆ ಮಾಡುವ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಶ್ಲಾಘಿಸಿದರು.

ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರ ಶಾಸಕ ಡಾ. ವೈ ಭರತ್ ಶೆಟ್ಟಿ ಮಾತನಾಡಿ ಬಂಟರ ಸಂಘವು ತನ್ನ ಸಮುದಾ ಯವನ್ನು ಮಾತ್ರವಲ್ಲದೇ ಇತರ ಸಮುದಾಯವನ್ನು ಸಮಾಜದಲ್ಲಿ ಮುಂಚೂಣಿ ತರುವಂತಹ ಕೆಲಸವನ್ನು ಮಾಡುತ್ತಿರುವುದು ಅಭಿನಂದನಾರ್ಹ ಎಂದರು.

ಮುಖ್ಯ ಅತಿಥಿ ನವಮುಂಬಯಿ ಭವಾನಿ ಶಿಪ್ಪಿಂಗ್ ಸರ್ವಿಸಸ್ ಪ್ರೈ.ಲಿ ಸಿ.ಎ೦.ಡಿ, 2020ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ( ಹೊರನಾಡು ಕನ್ನಡಿಗ) ಕುಸುಮೋದರ ದೇರಣ್ಣ ಶೆಟ್ಟಿ ಚೆಲ್ಲಡ್ಕ ಮಾತನಾಡಿ ಆರ್ಥಿಕವಾಗಿ ಹಿಂದುಳಿದ ಸಮಾಜದವರನ್ನು ಗುರುತಿಸಿ ಅವರನ್ನು ಆರ್ಥಿಕವಾಗಿ ಸದೃಢಗೊಳಿಸುತ್ತಾ ಅಲ್ಲದೇ ಭಿನ್ನ ಸಾಮಾರ್ಥ್ಯ ವಿಶೇಷ ಚೇತನರಿಗೆ ನಮ್ಮ ಸಂಘವು ಸದಾ ಬೆನ್ನೆಲುಬಾಗಿ ಇರಬೇಕು ಎಂದರು.

ಕಾರ್ಯಕ್ರಮದಲ್ಲಿ ರಾಜ್ಯೋತ್ಸವ ಪುರಸ್ಕೃತ ಕುಸುಮೋದರ ದೇರಣ್ಣ ಶೆಟ್ಟಿ ಚೆಲ್ಲಡ್ಕ ಅವರನ್ನು ಸನ್ಮಾನಿಸಲಾಯಿತು.

ಸಮಾರಂಭದ ಅಧ್ಯಕ್ಷತೆಯನ್ನು ಸುರತ್ಕಲ್ ಬಂಟರ ಸಂಘದ ಅಧ್ಯಕ್ಷ ಸುಧಾಕರ ಪೂಂಜ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಕಂಬಳ ಕ್ಷೇತ್ರದಲ್ಲಿ ಸಾಧನೆ ಮಾಡಿದ ಕ್ರೀಡಾ ರತ್ನ ಪುರಸ್ಕೃತ ಖಂಡಿಗೆ ಗೋಪಾಲಕೃಷ್ಣ ಸರ್ವೋತ್ತಮ ಪ್ರಭು ಮಾಧವನಗರ, 2020ನೇ ಸಾಲಿನ ದ. ಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಪದ್ಮನಾಭ ಕೆ ಸುರತ್ಕಲ್, ಯೋಗೀಶ್ ಕಾಂಚನ್ ಬೈಕಂಪಾಡಿ ಹಾಗೂ ಲಾಕ್ ಡೌನ್ ಸಂದರ್ಭ ದಲ್ಲಿ ವೈದ್ಯಕೀಯ ಸೇವೆ ಸಲ್ಲಿಸಿದ ಡಾ.ಸುರೇಶ್ ಸುರತ್ಕಲ್, ಕಾನ ಮಿಸ್ಕಿತ್ ಆಸ್ಪತ್ರೆ ನಿರ್ದೇಶಕ ಡಾ.ಜಿ ಕ್ಲಿಪರ್ಡ್ ಅವರುಗಳನ್ನು ಸನ್ಮಾನಿಸ ಲಾಯಿತು.

ಈ ಸಂದರ್ಭದಲ್ಲಿ ಡಾ.ಪಿವಿ ಶೆಟ್ಟಿ ಮುಂಬಯಿ ಇವರಿಂದ ವರ್ಷ೦ಪ್ರತಿ ನೀಡಲ್ಪಡುವ ವಿದ್ಯಾರ್ಥಿ ವೇತನ ವನ್ನು ಹಾಗೂ ಭಿನ್ನಸಾಮರ್ಥ್ಯ ಹಾಗೂ ವಿಕಲಚೇತನರಿಗೆ ಸಹಾಯಹಸ್ತ ನೀಡಲಾಯಿತು.

ಕಾರ್ಯಕ್ರಮದಲ್ಲಿ ಮಂಗಳೂರು ಸಣ್ಣ ನೀರಾವರಿ ವಿಭಾಗ ಕಾರ್ಯಪಾಲಕ ಅಭಿಯಂತರರು ಗೋಕುಲ್ ದಾಸ್, ಮುಂಬಯಿ ಬ೦ಟರ ಸಂಘ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಮಿತಿ ಕಾರ್ಯಾಧ್ಯಕ್ಷ ಕರ್ನೂರ್ ಮೋಹನ್ ರೈ, ಮಂಗಳೂರು ಸಂಸ್ಕಾರ ಭಾರತಿ ಅಧ್ಯಕ್ಷ ಪುರುಷೋತ್ತಮ ಕೆ ಭಂಡಾರಿ, ಬ೦ಟರ ಮಹಿಳಾ ಸಂಘದ ಅಧ್ಯಕ್ಷೆ ಬೇಬಿ ಶೆಟ್ಟಿ, ಸಂಘದ ಉಪಾಧ್ಯಕ್ಷ ನವೀನ್ ಶೆಟ್ಟಿ ಪಡ್ರೆ, ಕೋಶಾಧಿಕಾರಿ ರತ್ನಾಕರ ಶೆಟ್ಟಿ, ಸಂಘಟನಾ ಕಾರ್ಯದರ್ಶಿ ಪುಷ್ಪರಾಜ್ ಶೆಟ್ಟಿ ಕುಡುಂಬೂರು, ಜತೆ ಕಾರ್ಯ ದರ್ಶಿ ಪ್ರವೀಣ್ ಶೆಟ್ಟಿ, ನಿಕಟಪೂರ್ವ ಅಧ್ಯಕ್ಷ ಉಲ್ಲಾಸ್ ಶೆಟ್ಟಿ ಉಪಸ್ಥಿತರಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಸುಧಾಕರ್ ಎಸ್ ಪೂಂಜ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಲೋಕಯ್ಯ ಶೆಟ್ಟಿ ಪ್ರಸ್ತಾವಿಕ ಮಾತುಗಳನ್ನಾಡಿದರು. ರಾಜೇಶ್ವರಿ ಡಿ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ಗ್ರಾಮವಾರು ನೃತ್ಯ ಸ್ಪರ್ಧೆ :

ಸಭಾ ಕಾರ್ಯಕ್ರಮದ ಮೊದಲು ನಡೆದ ಗ್ರಾಮವಾರು ನೃತ್ಯ ಸ್ಪರ್ಧೆಯಲ್ಲಿ ಜ್ಯೂನಿಯರ್ ವಿಭಾಗದಲ್ಲಿ ಪ್ರಥಮ ಕುಳಾಯಿ-ಹೊಸಬೆಟ್ಟು ಗ್ರಾಮ, ದ್ವಿತೀಯ ಇಡ್ಯಾ, ಚೇಳ್ಯಾರ್ ಗ್ರಾಮ, ತೃತೀಯ ಸುರತ್ಕಲ್ ಗ್ರಾಮ ಪ್ರಶಸ್ತಿ ಪಡೆಯಿತು. ಸೀನಿಯರ್ ವಿಭಾಗದಲ್ಲಿ ಪ್ರಥಮ ಇಡ್ಯಾ, ದ್ವಿತೀಯ ಸುರತ್ಕಲ್, ತೃತೀಯ ಕಾಟಿಪಳ್ಳ ಗ್ರಾಮ ಪ್ರಶಸ್ತಿ ಪಡೆಯಿತು.

Comments are closed.