ಕರಾವಳಿ

“ಫುಲ್ಚಿಂ ಫುಲಾಂ ಭುರ್ಗ್ಯಾಂಚಿ ಸುಮಧುರ್ ಗಿತಾಂ” : ಕ್ಲಿಫರ್ಡ್ ಲಿಯೋ ಡಿಸೋಜರ ಕೊಂಕಣಿ ಗೀತೆಗಳ ಸಿಡಿ ಲೋಕಾರ್ಪಣೆ

Pinterest LinkedIn Tumblr

ಮಂಗಳೂರು : ಫುಲ್ಚಿಂ ಫುಲಾಂ ಭುರ್ಗ್ಯಾಂಚಿ ಸುಮಧುರ್ ಗಿತಾಂ ಮಕ್ಕಳ ಕೊಂಕಣಿ ಮನೋಲ್ಲಾಸಕರ ಗೀತೆಗಳ ಸಿಡಿಯನ್ನು ಮಂಗಳೂರು ಕದ್ರಿಯ ಶ್ರೀ ಕ್ಲಿಫರ್ಡ್ ಲಿಯೋ ಡಿಸೋಜರವರು ತಯಾರಿಸಿದ್ದಾರೆ.

ಇದರಲ್ಲಿರುವ ಗೀತೆಗಳ ರಚನೆ, ಸಂಗೀತ, ವಾದ್ಯ ಸಂಯೋಜನೆ ಹಾಗೂ ನಿರ್ದೇಶನವನ್ನು ಕ್ಲಿಫರ್ಡ್‌ರವರೇ ನಿರ್ವಹಿಸಿದ್ದಾರೆ.

ಈ ಸಿಡಿಯನ್ನು ದಶಂಬರ್ 21ರಂದು ಹಿರಿಯ ಅಂತರ್‌ಜಾಲ ಪತ್ರಕರ್ತ ಮತ್ತು ಮಾಧ್ಯಮ ಸಲಹೆಗಾರ ಶ್ರೀ ರಿಚರ್‍ಡ್ ಲಸ್ರಾದೊರವರು ಆರ್ಯಸಮಾಜ ರಸ್ತೆಯಲ್ಲಿರುವ ಕ್ಯಾಡ್ ಮೀಡಿಯ ಸಂಸ್ಥೆಯ ಕಾರ್ಯಲಯದಲ್ಲಿ ಲೋಕಾರ್ಪಣೆಗೊಳಿಸಿದರು.

ಈ ಸಂದರ್ಭದಲ್ಲಿ ಕ್ಯಾಡ್ ಸಂಸ್ಥೆಯ ಮಾಲಕರಾದ ಶ್ರೀ ಕೆ. ದಿನೇಶ್‌ರಾವ್, ಶ್ರೀ ಕ್ಲಿಫರ್ಡ್ ಲಿಯೋ ಡಿಸೋಜ, ಫಿಲೋಮೆನಾ ರೀಟಾ ಡಿಸೋಜ, ಮೆಟಿಲ್ಡಾ ಲಸ್ರಾದೊ, ಧ್ವನಿ ತಂತ್ರಜ್ಞ ಶ್ರೀ ಶಿನೋಯ್ ವಿ. ಜೋಸೆಫ್, ಬಾಲ ಕಲಾವಿದರು ಮತ್ತು ಅವರ ಪೋಷಕರು, ಹಿರಿಯ ಗಾಯಕ ಅಡೋಲ್ಫ್ ಜಯತಿಲಕ್ ಹಾಗೂ ಈ ಯೋಜನೆಗೆ ಸಹಾಯ-ಸಹಕಾರ ನೀಡಿದ ಸಹೃದಯಿ ಸಂಗೀತ ಪ್ರೇಮಿಗಳು ಉಪಸ್ಥಿತರಿದ್ದರು.

ಈ ಸಿಡಿಯಲ್ಲಿ 14 ಗೀತೆಗಳಿವೆ. 23 ಮಂದಿ ಗಾಯಕರು, 3 ಮಂದಿ ವಾದ್ಯ ವೃಂದದವರು, 2 ಮಂದಿ ತಾಂತ್ರಿಕ ವರ್ಗದವರು ಹಾಗೂ ಧ್ವನಿ ಮುದ್ರಣದಲ್ಲಿ ಶ್ರೀ ಶಿನೋಯ್ ವಿ. ಜೋಸೆಫ್ ಅವರು ಸಹಕರಿಸಿದ್ದಾರೆ.

ನಾವೀಗ ಪರಮಪವಿತ್ರ ಹಬ್ಬವಾದ ಕ್ರಿಸ್ತ ಜಯಂತಿಯ ಹೊಸ್ತಿಲಲ್ಲಿ ಇದ್ದೇವೆ. ಈ ಕಾಲಘಟ್ಟದಲ್ಲಿ ಲೋಕಾರ್ಪಣೆಗೊಳ್ಳುವ ಈ ಧ್ವನಿಮುದ್ರಿಕೆಗೆ ಸಾಂದರ್ಭಿಕ ಮೆರುಗನ್ನು ನೀಡುವ ಉದ್ದೇಶದಿಂದ ಈ ಹಬ್ಬದ ಗುಣಗಾನ ಮಾಡುವ ಕ್ರಮಸಂಖ್ಯೆ 14 ಹಾಡನ್ನು ಸಂಗೀತಪ್ರಿಯರಿಗೆ ಹೆಚ್ಚುವರಿ ಕಾಣಿಕೆಯಾಗಿ ಸೇರಿಸಲಾಗಿದೆ ಎಂದು ಈ ಸಂದರ್ಭದಲ್ಲಿ ಕ್ಲಿಫರ್ಡ್ ಲಿಯೋ ಡಿಸೋಜ ಅವರು ತಿಳಿಸಿದ್ದಾರೆ.

ಈ ಯೋಜನೆಯು ಲಾಭದ ಉದ್ದೇಶದಿಂದ ಮಾಡಿರುವುದು ಅಲ್ಲ. ಗ್ರಾಮಾಂತರ ಪ್ರದೇಶದ, ಅವಕಾಶ ವಂಚಿತರಾದ ಬಾಲಕಲಾವಿದರನ್ನು ಸಂಗೀತ ರಂಗಕ್ಕೆ ಪರಿಚಯಿಸುವ ಮತ್ತು ಪ್ರೋತ್ಸಾಹಿಸುವ ಏಕಮೇವ ಉದ್ದೇಶದಿಂದ ಈ ಸಿಡಿಯನ್ನು ಹೊರತಂದಿರುವುದಾಗಿ ಕ್ಲಿಫರ್ಡ್ ಲಿಯೋ ಡಿಸೋಜ ತಿಳಿಸಿದರು.

ಇದು ಶ್ರೀ ಕ್ಲಿಫರ್ಡ್ ಲಿಯೊ ಡಿ’ಸೋಜ ಅವರ 7ನೇ ಧ್ವನಿ ಸುರುಳಿಯಾಗಿದೆ. ಈ ಹಿಂದೆ ಮ್ಹಜಾ ಜೆಜು 2004ರಲ್ಲಿ ದಯಾಳ್ ಜೆಜು 2007ರಲ್ಲಿ. ನನ್ನ ಯೇಸು 2005ರಲಿ ಕರುಣಾಳು ಯೇಸು 2008 ರಲಿ . ಎನ್ನ ಯೇಸು 2018 ರಲಿ . ಕರುಣಾಮಯಿ ಯೇಸು 2019 ರಲಿ . ಹೊರತಂದಿದ್ದರು. ಇವೆಲ್ಲವೂ ಕ್ರೈಸ್ತ ಭಕ್ತಿ ಗೀತೆಗಳಾಗಿರುತ್ತವೆ  ಹಾಗೂ 4 ಸಿಡಿಯಲ್ಲಿ ನಿರ್ದೇಶನವನ್ನು ನಿರ್ವಹಿಸಿದ್ದಾರೆ.

Comments are closed.