ಕರಾವಳಿ

ತ್ರಾಸಿಯಲ್ಲಿ ಕಾರು-ರಿಕ್ಷಾ ನಡುವೆ ಭೀಕರ ಅಪಘಾತ: ಇಬ್ಬರಿಗೆ ಗಂಭೀರ ಗಾಯ: ಹೆದ್ದಾರಿ ಅವ್ಯವಸ್ಥೆ ವಿರುದ್ಧ ಆಕ್ರೋಷ

Pinterest LinkedIn Tumblr

ಕುಂದಾಪುರ: ಕಾರು ಮತ್ತು ರಿಕ್ಷಾ ನಡುವೆ ನಡೆದ ಅಪಘಾತದಲ್ಲಿ ಇಬ್ಬರು ಪ್ರಯಾಣಿಕರು ಗಾಯಗೊಂಡಿರುವ ಘಟನೆ ತ್ರಾಸಿಯ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಶನಿವಾರ ನಡೆದಿದೆ. ಪ್ರತಾಪ್ ಕ್ರಾಸ್ತಾ ಹಾಗೂ ರಿಕ್ಷಾ ಚಾಲಕ ಗಣೇಶ ಪೂಜಾರಿ‌ ಗಾಯಾಳುಗಳು.

ತ್ರಾಸಿಯಿಂದ ಮೊವಾಡಿ ಕಡೆಗೆ ಸಂಚರಿಸುತ್ತಿದ್ದ ರಿಕ್ಷಾಕ್ಕೆ ಬೈಂದೂರು ಕಡೆಯಿಂದ ವೇಗವಾಗಿ ಬರುತ್ತಿದ್ದ ಕಾರು ಢಿಕ್ಕಿ ಹೊಡೆದಿದೆ. ಢಿಕ್ಕಿ ಹೊಡೆದ ಪರಿಣಾಮ ರಿಕ್ಷಾ ಚಾಲಕನಿಗೆ ತೀವ್ರ ತರದ ಗಾಯವಾಗಿದೆ. ರಿಕ್ಷಾದಲ್ಲಿದ್ದ ಇಬ್ಬರು ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಾಗಳಾಗಿದೆ.
ಕ್ಷಣಾರ್ಧದಲ್ಲಿ ಸ್ಥಳಕ್ಕೆ ಧಾವಿಸಿದ ಗಂಗೊಳ್ಳಿ 24*7 ಆಪತ್ಭಾಂದವ ಆಂಬುಲೆನ್ಸ್ ಮೂಲಕ ಇಬ್ಬರು ಗಾಯಾಳುಗಳನ್ನು ಸದ್ಯ ಕುಂದಾಪುರ ಆಸ್ಪತ್ರೆಗೆ ಕೊಂಡೊಯ್ದು ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಹೆದ್ದಾರಿ ಅವ್ಯವಸ್ಥೆ ವಿರುದ್ಧ ಆಕ್ರೋಷ..
ಹೆದ್ದಾರಿ ಅವ್ಯವಸ್ಥೆಯೇ ಘಟನೆಗೆ ಕಾರಣ ಎನ್ನಲಾಗಿದ್ದು,ಇದರ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಉದ್ರಿಕ್ತ ಸಾರ್ವಜನಿಕರು ಹಾಗೂ ನಾಗರಿಕರಿಂದ ಸ್ಥಳದಲ್ಲಿ ಪ್ರತಿಭಟನೆ ನಡೆದಿದ್ದು ಕೆಲಕಾಲ ಹೆದ್ದಾರಿ ತಡೆ ನಡೆಸಲಾಯಿತು.

ಸ್ಥಳಕ್ಕೆ ಆಗಮಿಸಿದ ಗಂಗೊಳ್ಳಿ ಠಾಣಾಧಿಕಾರಿ ಭೀಮಾಶಂಕರ ಹಾಗೂ ಸಿಬ್ಬಂದಿ, ಹೈವೆ ಪೆಟ್ರೊಲ್ ಉಸ್ತುವಾರಿ ಎಎಸ್ಸೈ ಆನಂದ್ ಬೈಂದೂರು ಪ್ರತಿಭಟನಾಕಾರರ ಬಳಿ ಮಾತುಕತೆ ನಡೆಸಿದ್ದು ಬಳಿಕ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.

ಗಂಗೊಳ್ಳಿ ಆಪತ್ಪಾಂಧವ 24*7 ಅಂಬುಲೆನ್ಸ್ ಇಬ್ರಾಹಿಂ ಗಂಗೊಳ್ಳಿ ಹಾಗೂ ಅಕ್ಷಯ್ ಖಾರ್ವಿ ಅವರ ತುರ್ತು ಸ್ಪಂದನೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ.

 

Comments are closed.