ಕರಾವಳಿ

‘ಸಿ.ಎ.ಎ.-ಎನ್.ಆರ್.ಸಿ.’ ಆಂದೋಲನದಂತೆ ರೈತರ ಆಂದೋಲನದಿಂದ ದೇಶವನ್ನು ಅಸ್ಥಿರಗೊಳಿಸಲು ದೇಶವಿರೋಧಿ ಶಕ್ತಿಗಳ ಪಿತೂರಿ !: ಮಾಜಿ ಶಾಸಕ ಕಪಿಲ ಮಿಶ್ರ

Pinterest LinkedIn Tumblr

ಸಿಎಎ-ಎನ್‌ಆರ್‌ಸಿಯ ಮೊದಲ ವರ್ಷದ ರಾಷ್ಟ್ರೀಯ ಅವಲೋಕನ’ ಕುರಿತಾದ ಚರ್ಚಾಕೂಟದಲ್ಲಿ ಗಣ್ಯರ ಸಹಭಾಗ

ಹಿಂದಿನ ಸರಕಾರದ ಆಡಳಿತಾವಧಿಯಲ್ಲಿ ಉಗ್ರರು ನೇರ ದಾಳಿ ಮಾಡಿ ಅಥವಾ ಬಾಂಬ್‌ಸ್ಪೋಟಿಸಿ ದೇಶದಲ್ಲಿ ಅಸ್ಥಿರತೆಯನ್ನುಂಟು ಮಾಡುತ್ತಿದ್ದರು. ಈಗ ಹಾಗೆ ನೇರ ಮಾಡಲು ಸಾಧ್ಯವಿಲ್ಲದ್ದರಿಂದ ದೇಶವಿರೋಧಿ ಶಕ್ತಿಗಳು ಸಿ.ಎ.ಎ. (ಪೌರತ್ವ ತಿದ್ದುಪಡಿ ಕಾಯ್ದೆ) ಹಾಗೂ ಎನ್.ಆರ್.ಸಿ. (ರಾಷ್ಟ್ರೀಯ ನಾಗರಿಕತ್ವ ನೊಂದಣಿ)ಯ ಸಮಯದಲ್ಲಿ ಶಾಹಿನಬಾಗದಂತಹ ಆಂದೋಲನಗಳನ್ನು ಮಾಡಿದ್ದವು ಹಾಗೂ ನಂತರ ಹಿಂಸಾತ್ಮಕ ಗಲಭೆಗಳನ್ನು ಮಾಡಿದ್ದವು.

ಈಗ ಅದೇ ರೀತಿಯ ರೈತರ ಆಂದೋಲನವನ್ನು ಮಾಧ್ಯಮವನ್ನಾಗಿಸಿಕೊಂಡು ಆರಂಭಿಸಿದ್ದಾರೆ. ದೆಹಲಿಯ ನಂತರ ದೇಶಾದ್ಯಂತದ ಇತರ ರಾಜ್ಯಗಳಲ್ಲಿ ಅಸ್ಥಿರತೆಯನ್ನುಂಟು ಮಾಡುವ ಪ್ರಯತ್ನ ನಡೆಯುತ್ತಿದೆ.

ಇದರ ಹಿಂದೆ ಖಲಿಸ್ತಾನಿ ಸಂಘಟನೆ ಹಾಗೂ ಇತರ ದೇಶವಿರೋಧಿ ಶಕ್ತಿಗಳು ಸಕ್ರಿಯವಾಗಿವೆ; ಆದರೆ ಯಾವ ರೀತಿ ದೆಹಲಿಯ ಗಲಭೆಯ ನಂತರ ಎಲ್ಲ ದೋಷಿಗಳ ಮೇಲೆ ಕ್ರಮ ಕೈಗೊಳ್ಳಲಾರಂಭಿಸಲಾಯಿತೋ, ಅದೇ ರೀತಿ ರೈತರ ಆಂದೋಲನದಲ್ಲಿ ಯಾರಾದರು ದೇಶದ ಅಸ್ಥಿರತೆಯನ್ನುಂಟು ಮಾಡಲು ಪ್ರಯತ್ನಿಸಿದರೇ, ಸರಕಾರವು ಕಠಿಣ ಕ್ರಮ ಕೈಗೊಳ್ಳಬಹುದು ಎಂಬುದನ್ನು ಅವರು ಗಮನದಲ್ಲಿಟ್ಟುಕೊಳ್ಳಬೇಕು ಎಂದು ಭಾಜಪದ ನವ ದೆಹಲಿಯಲ್ಲಿ ನಾಯಕ ಹಾಗೂ ಮಾಜಿ ಶಾಸಕ ಶ್ರೀ. ಕಪಿಲ ಮಿಶ್ರ ಹೇಳಿದರು.

ಅವರು ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ‘ಚರ್ಚಾ ಹಿಂದೂ ರಾಷ್ಟ್ರ ಕೀ…’ ಈ ಕಾರ್ಯಕ್ರಮದಡಿಯಲ್ಲಿ ‘ಸಿ.ಎ.ಎ.-ಎನ್.ಆರ್.ಸಿ.ಯ ಮೊದಲ ವರ್ಷದ ರಾಷ್ಟ್ರೀಯ ಅವಲೋಕನ’ ಈ ವಿಷಯದ ಮೇಲೆ ಆನ್‌ಲೈನ್ ಚರ್ಚಾಗೋಷ್ಠಿಯಲ್ಲಿ ಮಾತನಾಡುತ್ತಿದ್ದರು.

ಈ ಕಾರ್ಯಕ್ರಮವನ್ನು ಫೇಸ್‌ಬುಕ್ ಹಾಗೂ ಯೂ-ಟ್ಯೂಬ್‌ನ ಮಾಧ್ಯಮದಿಂದ 46,166 ಜನರು ಪ್ರತ್ಯಕ್ಷವಾಗಿ ನೋಡಿದರೇ, 1,46,204 ಜನರ ತನಕ ಈ ಕಾರ್ಯಕ್ರಮ ತಲುಪಿತು.

ಈ ಸಮಯದಲ್ಲಿ ಪ್ರಸಿದ್ಧ ಲೇಖಕಿ ಹಾಗೂ ‘ಮಾನುಷಿ’ ಈ ಮಾಸಿಕನ ಸಂಪಾದಕಿ ಪ್ರಾ. ಮಧು ಪೂರ್ಣಿಮಾ ಕಿಶ್ವರರವರು ಮಾತನಾಡುತ್ತಾ, ‘ಸಿ.ಎ.ಎ.’ ಕಾಯ್ದೆ ತರುವ ಮೊದಲು ಸರಕಾರವು ವಿದೇಶದಲ್ಲಿ ಹಿಂದೂಗಳ ಮೇಲಾಗುವ ಭೀಕರ ದೌರ್ಜನ್ಯಗಳ ಬಗ್ಗೆ ಶ್ವೇತಪತ್ರವನ್ನು ಜಾರಿಗೊಳಿಸಬೇಕಿತ್ತು.

ಚಲನಚಿತ್ರ ಇತ್ಯಾದಿ ಮಾಧ್ಯಮಗಳಿಂದ ಈ ಬಗ್ಗೆ ಬೃಹತ್ ಪ್ರಮಾಣದಲ್ಲಿ ಜನಜಾಗೃತಿ ಮಾಡಬೇಕಿತ್ತು, ಆದರೆ ಸಾಕಷ್ಟು ಸಿದ್ಧತೆ ಮಾಡದೇ ಇದ್ದರಿಂದ ಮಾಹಿತಿ ತಂತ್ರಜ್ಞಾನದಲ್ಲಿ ಮುಂದಿರುವ ದೇಶವಿರೋಧಿಗಳು ಅದನ್ನು ಮುಸಲ್ಮಾನವಿರೋಧಿ ನಿರ್ಧಾರ ಎಂದು ಹೇಳಿ ಜಗತ್ತಿನಾದ್ಯಂತ ಅವಮಾನಗೊಳಿಸಲಾಯಿತು. ಓರ್ವ ಮುಸಲ್ಮಾನನ ಮೇಲೆ ಬೊಟ್ಟು ಮಾಡಿದರೂ ಅದು ಅಂತರರಾಷ್ಟ್ರೀಯ ವಿಷಯವಾಗುತ್ತದೆ. ಅದೇ ರೀತಿ ನಾವು ಹಿಂದೂಗಳ ಮೇಲಾಗುತ್ತಿರುವ ದೌರ್ಜನ್ಯಗಳ ಬಗ್ಗೆ ಜಾಗೃತಿ ಮಾಡುವುದಿಲ್ಲ ಎಂದು ಹೇಳಿದರು.

ಈ ಸಮಯದಲ್ಲಿ ಪಾಕಿಸ್ತಾನದಿಂದ ಭಾರತಕ್ಕೆ ವಲಸೆ ಬಂದ ಸಂತ್ರಸ್ತ ಹಿಂದೂಗಳಿಗೆ ಪೌರತ್ವ ನೀಡಲು ಹೋರಾಡುತ್ತಿರುವ ‘ನಿಮಿತ್ತೆಕಮ್’ನ ಅಧ್ಯಕ್ಷ ಶ್ರೀ. ಜಯ ಆಹುಜಾ ಅವರು ಮಾತನಾಡುತ್ತಾ, ‘ಸಿ.ಎ.ಎ.’ಯಿಂದ ಸಾವಿರಾರು ಶರಣಾರ್ಥಿ ಹಿಂದೂಗಳಿಗೆ ಪೌರತ್ವ ಸಿಗಲಿದೆ. ನಾವೆಲ್ಲ ಹಿಂದೂಗಳು ಒಟ್ಟಾಗಿ ರಾಷ್ಟ್ರೀಯ ಸ್ತರದಲ್ಲಿ ಹಿಂದುತ್ವದ ಧ್ವನಿಯನ್ನು ಎತ್ತಬೇಕು ಎಂದು ಹೇಳಿದರು.

ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರರಾದ ಶ್ರೀ ರಮೇಶ ಶಿಂದೆಯವರು ಮಾತನಾಡುತ್ತಾ, ‘ಸಿ.ಎ.ಎ.’, ‘ಎನ್.ಆರ್.ಸಿ.’ಯ ಮೂಲಕ ಸರಕಾರ ಹಿಂದೂ ರಾಷ್ಟ್ರದ ದಿಕ್ಕಿನತ್ತ ಸಾಗುತ್ತಿದೆ ಎಂದು ಆರೋಪಿಸಲಾಗುತ್ತಿದೆ. ಇದರಿಂದ ಹಿಂದೂ ರಾಷ್ಟ್ರವೆಂದರೆ ಅಪಾಯಕಾರಿವೆಂಬಂತೆ ಪ್ರಚಾರ ಮಾಡಲಾಗುತ್ತಿದೆ,

ಆದರೆ ಈ ಕಾನೂನನ್ನು ರೂಪಿಸಲು ಪಾಕಿಸ್ತಾನ, ಅಫ್ಘಾನಿಸ್ತಾನ ಹಾಗೂ ಬಾಂಗ್ಲಾದೇಶ ಈ ಇಸ್ಲಾಂಅನ್ನು ಆಧರಿಸಿದ ದೇಶಗಳು ಕಾರಣವಾಗಿವೆ. ಅಲ್ಲಿ ಅಲ್ಪಸಂಖ್ಯಾತರ ಮೇಲಾಗುತ್ತಿರುವ ದಾಳಿಯ ಬಗ್ಗೆ ಜಗತ್ತಿನಾದ್ಯಂತ ತಿಳಿದಿದೆ. ಇಂತಹ ಸಮಯದಲ್ಲಿ ಹಿಂದೂ ಸಿದ್ಧಾಂತಗಳನ್ನಾಧರಿಸಿದ ಆದರ್ಶ ಹಿಂದೂ ರಾಷ್ಟ್ರವೇ ನ್ಯಾಯ ನೀಡಲು ಸಾಧ್ಯ. ಆದ್ದರಿಂದ ಹಿಂದೂ ರಾಷ್ಟ್ರ ಅತ್ಯಂತ ಅಗತ್ಯವಿದೆ ಎಂದರು.

Comments are closed.