ಕರಾವಳಿ

ನಾಳೆ ಕೇಂದ್ರ ಸಚಿವ ನಿತಿನ್ ಗಡ್ಕರಿಯವರಿಂದ ಕೂಳೂರು ಷಟ್ಪಥ ಸೇತುವೆಗೆ ಶಿಲಾನ್ಯಾಸ

Pinterest LinkedIn Tumblr

ಹಳೇ ಸೇತುವೆ

ಮಂಗಳೂರು, ಡಿಸೆಂಬರ್.18: ನಾಳೆ (19/12/2020) ಬೆಳಿಗ್ಗೆ 11 ಗಂಟೆಗೆ ಮಂಗಳೂರಿನ ಜಿಲ್ಲಾಧಿಕಾರಿಯವರ ಕಚೇರಿಯ ಸಭಾಂಗಣದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಫಾಲ್ಗುಣಿ ನದಿಗೆ ನೂತನ ಕೂಳೂರು ಸೇತುವೆ ನಿರ್ಮಾಣದ ಭೂಮಿ ಪೂಜೆ ಕಾರ್ಯಕ್ರಮ ನಡೆಯಲಿದೆ. ಈ ವೇಳೆ ಕೂಳೂರು ಷಟ್ಪಥ ಸೇತುವೆಯೂ ಸೇರಿದಂತೆ ಒಟ್ಟು ಮೊತ್ತ: 10,904 ಕೋಟಿ ವೆಚ್ಚದ ಕರ್ನಾಟಕದ 33 ರಾಷ್ಟ್ರೀಯ ಹೆದ್ದಾರಿ ಯೋಜನೆಗಳ ಶಿಲಾನ್ಯಾಸ ಹಾಗೂ ಲೋಕಾರ್ಪಣೆ ನೆರವೇರಲಿದೆ.

ಈ ಕಾರ್ಯಕ್ರಮದಲ್ಲಿ ಸನ್ಮಾನ್ಯ ಮುಖ್ಯಮಂತ್ರಿ B S ಯಡಿಯೂರಪ್ಪ , ರಾಷ್ಟ್ರೀಯ ಹೆದ್ದಾರಿಯ ಕೇಂದ್ರ ಸಚಿವರಾದ ಸನ್ಮಾನ್ಯ ನಿತಿನ್ ಗಡ್ಕರಿ ,ಸಂಸದ ನಳೀನ್ ಕುಮಾರ್ ಕಟೀಲ್, ಎಲ್ಲ ಶಾಸಕರು , ಗಣ್ಯರು ಅಧಿಕಾರಿಗಳು ಭಾಗವಹಿಸಲಿದ್ದಾರೆ.

ಹಳೇ ಸೇತುವೆ

ರಾಷ್ಟ್ರೀಯ ಹೆದ್ದಾರಿ 66ರ ಕೂಳೂರುನಲ್ಲಿ ಹೊಸದಾಗಿ ಅಂದಾಜು ರೂ. 69.02 ಕೋಟಿ ವೆಚ್ಚದಲ್ಲಿ ಪಲ್ಗುಣಿ ನದಿಗೆ ಅಡ್ಡಲಾಗಿ ನಿರ್ಮಾಣವಾಗಲಿರುವ 6 ಪಥದ ಸೇತುವೆ ನಿರ್ಮಾಣಕ್ಕೆ ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವರಾದ *ಶ್ರೀ ನಿತಿನ್ ಗಡ್ಕರಿ* ಯವರು ವಿಡಿಯೋ ಕಾನ್ಫರೆನ್ಸ್ ಮೂಲಕ ದಿನಾಂಕ 19.12.2020 ರ ಶನಿವಾರ ಪೂರ್ವಾಹ್ನ 11.00 ಗಂಟೆಗೆ ಶಿಲಾನ್ಯಾಸ ನೆರವೇರಿಸಲಿದ್ದಾರೆ. ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್. ಯಡಿಯೂರಪ್ಪನವರು ಅಧ್ಯಕ್ಷತೆ ವಹಿಸಲಿದ್ದಾರೆ.

ಸದರಿ ವಿಡಿಯೋ ಕಾನ್ಪರೆನ್ಸ್ ನ ನೇರ ಪ್ರಸಾರವನ್ನು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳ ಕಛೇರಿಯ 2ನೇ ಮಹಡಿಯಲ್ಲಿರುವ ಸಭಾಂಗಣದಲ್ಲಿ ಆಯೋಜಿಸಲಾಗಿದೆ. ದಕ್ಷಿಣ ಕನ್ನಡ ಸಂಸದ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷರಾದ ಶ್ರೀ ನಳಿನ್ ಕುಮಾರ್ ಕಟೀಲ್ ರವರು ಹಾಗೂ ಶಾಸಕರುಗಳು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ದಯಮಾಡಿ ಸದರಿ ಕಾರ್ಯಕ್ರಮದಲ್ಲಿ ಭಾಗಿಯಾಗಿ ಕಾರ್ಯಕ್ರಮದ ವರದಿ ಮಾಡುವಂತೆ ಕೋರಲಾಗಿದೆ.

ಯೋಜನೆಯ ವಿವರ:

ರಾಜ್ಯ ಹೆದ್ಡಾರಿ ಜಾಲಕ್ಕೆ ಸೇರ್ಪಡೆಗೊಳ್ಳಲಿರುವ ಉದ್ದ: 1,197 KM.
ರಾಷ್ಟ್ರೀಯ ಹೆದ್ದಾರಿ 66 ರ ಕೂಳೂರಿನಲ್ಲಿ ಷಟ್ಪಥ ಸೇತುವೆ ನಿರ್ಮಾಣ
(ಚೈನೇಜ್ KM 368.356 ರಿಂದ KM 369.132)
ಯೋಜನೆ ವೆಚ್ಚ: 69.02 ಕೋಟಿ
ಯೋಜನೆಯ ಒಟ್ಟು ಉದ್ದ: 776 ಮೀಟರುಗಳು
ಮುಖ್ಯ ಸೇತುವೆಯ ಉದ್ದ: 182.5 ಮೀಟರುಗಳು.

Comments are closed.