ಮನೋರಂಜನೆ

ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಕಿರುತೆರೆ ನಟಿ ರಂಜನಿ ರಾಘವನ್‌ರಿಂದ ಮತಯಾಚನೆ

Pinterest LinkedIn Tumblr

ಬಾಗಲಕೋಟೆ: ಕಿರು ತೆರೆ ನಟಿಯರ ಆಗಮನ ಹಿನ್ನೆಲೆ ಬಾಗಲಕೋಟೆ ಜಿಲ್ಲೆಯಲ್ಲಿ ಪಂಚಾಯಿತಿ ಚುನಾವಣೆ ರಂಗೇರುತ್ತಿದೆ.

ನಾಳೆ ಗ್ರಾಮ ಪಂಚಾಯಿತಿ ಚುನಾವಣೆಯ ಪ್ರಚಾರಕ್ಕೆ ಕಿರಿತೆರೆಯ ಪುಟ್ಟಗೌರಿ ಮದುವೆ ಧಾರವಾಹಿಯ ನಟಿ ರಂಜನಿ ರಾಘವನ್ ಆಗಮಿಸಿ ಮತಯಾಚಿಸಲಿದ್ದಾರೆ.

ಬಾಗಲಕೋಟೆ ಜಿಲ್ಲೆ ಬೀಳಗಿ ತಾಲೂಕಿನ ಗಿರಿಸಾಗರ ಗ್ರಾಮ ಪಂಚಾಯತಿ ಚುನಾವಣೆ ಪ್ರಚಾರದಲ್ಲಿ ವಿಜಯಲಕ್ಷ್ಮಿ ಹೂಗಾರ, ಯಂಕಪ್ಪ ನುಚ್ಚಿನ ಹಾಗೂ ಬಿ.ಎನ್. ಮೇತ್ರಿ ಪರ ಪ್ರಚಾರ ನಡೆಸಲಿದ್ದಾರೆ.
ಒಟ್ಟು 19 ಸ್ಥಾನಗಳಲ್ಲಿ 6 ಸ್ಥಾನಗಳಿಗೆ ಅವಿರೋಧ ಆಯ್ಕೆ ಆಗಿದ್ದು, ಇನ್ನುಳಿದ 13 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.
ಮೂವರು ಅಭ್ಯರ್ಥಿಗಳ ಪರವಾಗಿ ಕಿರಿತೆರೆ ತಾರೆ ನಾಳೆ ಪ್ರಚಾರ ನಡೆಸಲಿದ್ದಾರೆ.

Comments are closed.