ಮುಂಬೈಯ ಅಂಬರ್ನಾಥ್‌ನ ನಿವಾಸಿ ಸತೀಶ್ ಜಿ ಕುಲಾಲ್ (46) ಅವರು ಡಿಸೆಂಬರ್ 18ರಂದು ಉಡುಪಿಯ ಪೆರ್ಡೂರಿನ ಕುಕ್ಕೆಹಳ್ಳಿಯ ಬಳಿ ವಾಹನ ಅಪಘಾತದಲ್ಲಿ ಮೃತಪಟ್ಟಿದ್ದಾರೆ.
ಮೂಲತಃ ಉಡುಪಿಯ ಪಟ್ಲದ ತುಂಗ ನಿಲಯದ ನಿವಾಸಿಯಾಗಿದ್ದು, ಮುಂಬಯಿ ಕುಲಾಲ ಸಂಘದ ಥಾಣೆ -ಕಸರಾ -ಕರ್ಜತ್ – ಭಿವಂಡಿ ಸ್ಥಳೀಯ ಸಮಿತಿಯ ಸಕ್ರಿಯ ಕಾರ್ಯಕರ್ತರಾಗಿದ್ದರು.
ಮೃತರು ತಂದೆ ಗಿರಿಯ ಕುಲಾಲ್, ಪತ್ನಿ ಸುಜಾತ ಎಸ್ ಕುಲಾಲ್, ಅವಳಿ ಗಂಡು ಮಕ್ಕಳಾದ ನಯನ್ ಕುಲಾಲ್, ನಮನ ಕುಲಾಲ್ ಮತ್ತು ಹಿರಿಯ ಸಹೋದರ ಬೆಂಗಳೂರಿನ ಡಾಕ್ಟರ್ ಆನಂದ ಕುಲಾಲ್ ಹಾಗೂ ಮೂವರು ಸಹೋದರಿಯರನ್ನು ಅಗಲಿದ್ದಾರೆ.
ಸಂತಾಪ:
ಸತೀಶ್ ಕುಲಾಲ್ ರವರ ನಿಧನಕ್ಕೆ ಮುಂಬಯಿ ಕುಲಾಲ ಸಂಘದ ಅಧ್ಯಕ್ಷ ದೇವದಾಸ್ ಕುಲಾಲ್ ಮತ್ತು ಪದಾಧಿಕಾರಿಗಳು ಥಾಣಾ- ಬಿವಂಡಿ ಸ್ಥಳೀಯ ಸಮಿತಿಯ ಕಾರ್ಯಧ್ಯಕ್ಷ ಡಿ ಐ ಮೂಲ್ಯ ಮತ್ತು ಸರ್ವ ಸದಸ್ಯರು ದುಃಖ ಸಂತಾಪ ಸೂಚಿಸಿರುವರು.
ವರದಿ : ಅಮೂಲ್ಯ, ಮುಂಬೈ.