ಕರಾವಳಿ

ಉಗ್ರಪರ ಗೋಡೆಬರಹ ಪ್ರಕರಣ : ರಾಷ್ಟ್ರೀಯ ತನಿಖಾದಳ ( NIA )ಕ್ಕೆ ಒಪ್ಪಿಸಲು ವಿಎಚ್‌ಪಿ ಆಗ್ರಹ

Pinterest LinkedIn Tumblr

ಮಂಗಳೂರು, ಡಿಸೆಂಬರ್.18: ಕಳೆದ ಕೆಲವು ದಿನಗಳ ಹಿಂದೆ ಮಂಗಳೂರಿನಲ್ಲಿ ಉಗ್ರರ ಪರ ಗೋಡೆ ಬರಹದ ಮುಖಾಂತರ ಲಷ್ಕರ್ ತೋಯಿಬಾ ಉಗ್ರ ಸಂಘಟನೆಯನ್ನು ಬೆಂಬಲಿಸಿ ಮತ್ತು ಮತ್ತು ಮುಸ್ಲಿಂ ವಿರೋಧಿಗಳನ್ನು ಹತ್ಯೆ ಮಾಡುವುದಾಗಿ ಗೋಡೆ ಬರಹದ ಮುಖಾಂತರ ಇಲ್ಲಿ ಭಯೋತ್ಫಾದಕ ಚಟುವಟಿಕೆ ಪ್ರಾರಂಭ ಮಾಡಲು ಪ್ರಯತ್ನಿಸುತ್ತಿರುವುದು ಬಹಳ ಆತಂಕಕಾರಿ ವಿಷಯವಾಗಿದೆ.

ಇದರ ಹಿಂದೆ ಭಯೋತ್ಫಾದಕರ ನಂಟು ಇರುವುದು ಸಾಧ್ಯತೆ ಇದ್ದು ಈಗಾಗಲೇ 3 ಜನರನ್ನು ಬಂಧಿಸಿದ್ದು ಅವರಿಂದ ಜಾಗತಿಕ ಭಯೋತ್ಫಾದಕ ಜಮೈಕಾ ಮೂಲದ ಶೇಕ್ ಅಬ್ದುಲ್ಲಾ ಫೈಝಲ್ ಪ್ರಚೋದನಕಾರಿ ಭಾಷಣ ಮತ್ತು ಉಗ್ರರ ಅಧ್ಯಯನಕ್ಕೆ ಸಂಬಂಧಿಸಿದಂತೆ ಪುಸ್ತಕಗಳು ಸಿಕ್ಕಿರುವುದು ಬಹಳ ಆಘಾತಕಾರಿ ಯಾಗಿದೆ.

ಪೊಲೀಸರು ಶೀಘ್ರವಾಗಿ ಕ್ರಮ ಕೈಗೊಂಡು ಆರೋಪಿಗಳನ್ನು ಪತ್ತೆ ಹಚ್ಚಿ ಈ ಪ್ರಕರಣವನ್ನು ಬೇಧಿಸಿರುವುದಕ್ಕೆ ಪೊಲೀಸ್ ಕಮಿಷನರ್ ಮತ್ತು ಸಿಬ್ಬಂದಿಗಳಿಗೆ ವಿಶ್ವಹಿಂದೂ ಪರಿಷತ್ ಶ್ಲಾಘಿಸುತ್ತದೆ ಮತ್ತು ಅಭಿನಂದನೆ ಸಲ್ಲಿಸುತ್ತದೆ ಎಂದು ವಿಶ್ವ ಹಿಂದೂ ಪರಿಷದ್ ವಿಭಾಗ ಕಾರ್ಯದರ್ಶಿ ಶರಣ್ ಪಂಪವೆಲ್ ಪತ್ರಿಕಾಗೋಷ್ಠಿ ಯಲ್ಲಿ ತಿಳಿಸಿದ್ದಾರೆ.

ಈ ಪ್ರಕರಣವನ್ನು ಗಮನಿಸಿದಾಗ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಯೋತ್ಫಾದಕ ಚಟುವಟಿಕೆಗಳು ಬೇರೂರಿರುವ ಸಂಶಯ ವ್ಯಕ್ತವಾಗಿದ್ದು ಈಗಾಗಲೇ ಪೊಲೀಸ್ ಅಧಿಕಾರಿಗಳ ಗಮನಕ್ಕೆ ತಂದು NIA ತನಿಖೆಗೆ ಶಿಫಾರಸ್ಸು ಮಾಡಲು ವಿನಂತಿಸಿದ್ದೇವೆ.

ಹಾಗಾಗಿ ಈ ಪ್ರಕರಣವನ್ನು ಶೀಘ್ರವಾಗಿ ರಾಷ್ಟ್ರೀಯ ತನಿಖಾದಳಕ್ಕೆ ಹಸ್ತಾಂತರಿಸಬೇಕೆಂದು ಆಗ್ರಹಿಸಿ ವಿಶ್ವ ಹಿಂದೂ ಪರಿಷದ್ ಡಿಸೆಂಬರ್ 23 ಬುಧವಾರದಂದು ತಾಲೂಕು ಕಚೇರಿ ಮುಂದೆ ಪ್ರತಿಭಟನೆ ಹಮ್ಮಿಕೊಂಡಿದೆ ಎಂದು ಶರಣ್ ಪಂಪವೆಲ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ವಿಶ್ವ ಹಿಂದೂ ಪರಿಷದ್ ಜಿಲ್ಲಾಧ್ಯಕ್ಷ ಗೋಪಾಲ್ ಕುತ್ತಾರ್ ಉಪಸ್ಥಿತರಿದ್ದರು.

Comments are closed.