ಕರ್ನಾಟಕ

ಇದೇನಾ ಸಭ್ಯತೆ…?: ವಿಧಾನ ಪರಿಷತ್ ಕಲಾಪದಲ್ಲಿ ತಳ್ಳಾಟ, ನೂಕಾಟದ ಹೈಡ್ರಾಮ…!

Pinterest LinkedIn Tumblr

ಬೆಂಗಳೂರು: ವಿಧಾನ ಪರಿಷತ್ ಕಲಾಪ ಹೈ ಡ್ರಾಮಾಗೆ ಸಾಕ್ಷಿಯಾಗಿದ್ದು, ಕಾಂಗ್ರೆಸ್, ಬಿಜೆಪಿ ಸದಸ್ಯರು ಪರಸ್ಪರ ಎಳೆದಾಡಿದ್ದಾರೆ‌. ಮಾತ್ರವಲ್ಲ ಕಾಂಗ್ರೆಸ್ ಸದಸ್ಯರು ಸಭಾಂಗಣದ ಬಾಗಿಲು ಒದ್ದು ಸಭಾಪತಿ ಮುಂದಿನ ಗಾಜನ್ನು ಕಿತ್ತು ಹಾಕಿದ್ದಾರೆ.

ಪರಿಷತ್ ಅಧಿವೇಶನ ಆರಂಭವಾಗುವ ಕುರಿತು ಬೆಲ್ ಆಗುತ್ತಿದ್ದಂತೆ ಉಪ ಸಭಾಪತಿ ಧರ್ಮೇಗೌಡ ಆಸನದಲ್ಲಿ ಕುಳಿತರು. ಇದಕ್ಕೆ ಕಾಂಗ್ರೆಸ್ ಸದ್ಯಸ್ಯರು ವಿರೋಧ ವ್ಯಕ್ತಪಡಿಸಿದ್ದು ಪೀಠದ ಮುಂದೆ ಎರಡು ಪಕ್ಷದ ನಾಯಕರು ಪರಸ್ಪರ ಎಳೆದಾಡಿಕೊಂಡಿದ್ದಾರೆ. ತಳ್ಳಾಟ ನೂಕಾಟದ ಮಧ್ಯೆ ಬಿಜೆಪಿ ಸದಸ್ಯರು ಉಪ ಸಭಾಪತಿಗೆ ರಕ್ಷಣೆ ನೀಡಿದ್ದಾರೆ.

ಪೀಠದ ಮುಂದೆ ಎರಡೂ ಪಕ್ಷಗಳ ಸದಸ್ಯರು ಹೈ ಡ್ರಾಮಾ ಮಾಡಿದ್ದು, ಬಿಜೆಪಿ ಸದಸ್ಯರು ಸಭಾಪತಿ ಬರದಂತೆ ಸಭಾಂಗಣ ಬಾಗಿಲನ್ನು ಮುಚ್ಚಿದ್ದಾರೆ. ಈ ವೇಳೆ ಬಾಗಿಲನ್ನು ಕಾಲಿನಲ್ಲಿ ಒದ್ದಿದ್ದಾರೆ. ಬಳಿಕ ಬಾಗಿಲು ತೆರೆಯಲು ಕಾಂಗ್ರೆಸ್ ನಾಯಕರು ಮುಂದಾಗಿದ್ದಾರೆ. ಇದಕ್ಕೆ ಬಿಜೆಪಿ ಸದಸ್ಯರು ವಿರೋಧ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್, ಬಿಜೆಪಿ ಸದಸ್ಯರು ಉಪ ಸಭಾಪತಿಯವರನ್ನು ಎಳೆದಾಡಿದ್ದು, ಬಳಿಕ ಮಾರ್ಷಲ್‍ಗಳು ಆಗಮಿಸಿ ಉಪ ಸಭಾಪತಿಗಳಿಗೆ ರಕ್ಷಣೆ ನೀಡಿದ್ದಾರೆ. ಬಿಜೆಪಿ ಸದಸ್ಯರು ಸಹ ಸಭಾಪತಿ ಪೀಠಕ್ಕೆ ಬರದಂತೆ ಅಡ್ಡ ನಿಂತಿದ್ದಾರೆ. ಈ ವೇಳೆ ಪೀಠದ ಮೇಲೆ ಇಬ್ಬರು ಪಕ್ಷದ ಸದಸ್ಯರು ಕುಳಿತು ಅಪಮಾನ ಮಾಡಿದ್ದಾರೆ. ಬಳಿಕ ಪೀಠದ ಮೇಲೆಯೇ ತಳ್ಳಾಟ ನೂಕಾಟ ನಡೆದಿದೆ. ಈ ವೇಳೆ ಕಾಂಗ್ರೆಸ್ ಸದಸ್ಯ ಪೀಠದ ಮೇಲೆ ಕುಳಿತಿದ್ದಾರೆ. ಉಪ ಸಭಾಪತಿ ಕುಳಿತುಕೊಳ್ಳಲು ಕಾಂಗ್ರೆಸ್ ಸದಸ್ಯರು ಅವಕಾಶ ನೀಡಿಲ್ಲ.

ಬಳಿಕ ಸಭಾಪತಿಗಳು ಆಗಮಿಸಿ ಸಭೆಯನ್ನು ಅನಿರ್ಧಿಷ್ಠಾವಧಿ ವರೆಗೆ ಮುಂದೂಡಿದ್ದಾರೆ.

Comments are closed.