ಕರಾವಳಿ

ಕಾಲುದಾರಿ ಅಭಿವೃದ್ಧಿಯಿಂದ ಸ್ಥಳೀಯರಿಗೆ ಸಾಕಷ್ಟು ಅನುಕೂಲ: ಶಾಸಕ ಕಾಮಾತ್

Pinterest LinkedIn Tumblr

ಮಂಗಳೂರು ; ಮಂಗಳೂರು ಮಹಾನಗರ ಪಾಲಿಕೆಯ ಬಜಾಲ್ ವಾರ್ಡಿನ ಜಯನಗರದಲ್ಲಿ ಕಾಲು ದಾರಿ ಅಭಿವೃದ್ಧಿ ಕಾಮಗಾರಿಗೆ ಶಾಸಕ ವೇದವ್ಯಾಸ್ ಕಾಮತ್ ಗುದ್ದಲಿಪೂಜೆ ನೆರವೇರಿಸಿದರು.

ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದ ಶಾಸಕ ಕಾಮತ್, ಜಯನಗರದ ಈ ಕಾಲುದಾರಿ ಅಭಿವೃದ್ಧಿಯಿಂದ ಸ್ಥಳೀಯರಿಗೆ ಸಾಕಷ್ಟು ಅನುಕೂಲವಾಗಲಿದೆ. ಪ್ರತಿನಿತ್ಯ ಓಡಾಟಕ್ಕೆ ಕಾಲುದಾರಿಯನ್ನೇ ಅವಲಂಭಿಸಿರುವ ಕಾರಣ ಸ್ಥಳೀಯರ ಮನವಿಯ ಮೇರೆಗೆ ಅನುದಾನ ಬಿಡುಗಡೆಗೊಳಿಸಲಾಗಿದೆ ಎಂದರು.

ಈ ಸಂದರ್ಭದಲ್ಲಿ ಸ್ಥಳೀಯ ಮನಪಾ ಸದಸ್ಯರಾದ ಅಶ್ರಫ್, ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ಕಾರ್ಯದರ್ಶಿ ಚಂದ್ರಶೇಖರ ಜಯನಗರ, ಶಕ್ತಿಕೇಂದ್ರ ಪ್ರಭಾರಿಗಳಾದ ಶಿವಾಜಿ ರಾವ್, ಯಶವಂತ ಶೆಟ್ಟಿ, ಸ್ಥಳೀಯರಾದ ಜ್ಯೋತೀಶ್ ನಾಯರ್, ಅಮರ್ ಶೆಟ್ಟಿ, ಗಿರೀಶ್,ಪುನೀತ್ ಶೆಟ್ಟಿ, ಯೋಗಿಶ್, ಕೇತನ್, ಉದಯ್, ನಿತಿನ್, ಪ್ರಕಾಶ್, ಧನು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

Comments are closed.