ರಾಷ್ಟ್ರೀಯ

ಕಿರಿ ಸೊಸೆಯೊಂದಿಗೆ ಮಾವನ ಅನೈತಿಕ ಸಂಬಂಧ; ಹಿರಿ ಸೊಸೆ, ಅತ್ತೆ ಮಾಡಿದ ಕೃತ್ಯ ಭಯಾನಕ!

Pinterest LinkedIn Tumblr


ಲಖನೌ:  ಉತ್ತರ ಪ್ರದೇಶದ ಭದೋಹಿಯಲ್ಲಿರುವ ಕುಟುಂಬವೊಂದರಲ್ಲಿ ಅಪ್ಪ ಅಮ್ಮ ಮತ್ತು ನಾಲ್ವರು ಗಂಡು ಮಕ್ಕಳು. ಅದರಲ್ಲಿ ಇಬ್ಬರು ಗಂಡು ಮಕ್ಕಳಿಗೆ ಮದುವೆಯಾಗಿದೆ. ಗಂಡು ಮಕ್ಕಳೆಲ್ಲರು ಮುಂಬೈನಲ್ಲಿ ಕೆಲಸ ಮಾಡುತ್ತಿದ್ದಾರೆ. ಮನೆಯಲ್ಲಿ ಅಪ್ಪ ಅಮ್ಮ ಮತ್ತು ಇಬ್ಬರು ಸೊಸೆಯಂದಿರು ಬದುಕುತ್ತಿದ್ದಾರೆ.

ಈ ಸಂಸಾರದಲ್ಲಿದ್ದ ಕಿರಿ ಸೊಸೆ ಮೇಲೆ ಮಾವನಿಗೆ ಕಣ್ಣು ಬಿದ್ದಿದೆ. ಇಬ್ಬರೂ ಪರಸ್ಪರ ಒಪ್ಪಿ ಅಕ್ರಮ ಸಂಬಂಧ ಬೆಳೆಸಿಕೊಂಡಿದ್ದಾರೆ. ಆದರೆ ಇತ್ತೀಚೆಗೆ ಈ ವಿಚಾರ ಅತ್ತೆ ಮತ್ತು ಮೊದಲ ಸೊಸೆಗೆ ಗೊತ್ತಾಗಿದೆ. ಸಹಿಸಲಾಗದ ಅತ್ತೆ ಸೊಸೆ, ಕಿರಿ ಸೊಸೆಯನ್ನು ಅವಳ ತವರು ಮನೆಗೆ ಕಳುಹಿಸಿದ್ದಾರೆ. ಆದರೆ ಇದರಿಂದ ಸಿಟ್ಟಿಗೆದ್ದ ಮಾವ, ಹಿರಿ ಸೊಸೆ ಮೇಲೆ ಹಲ್ಲೆ ಮಾಡಿ, ಕಿರಿ ಸೊಸೆಯನ್ನು ವಾಪಾಸು ಕರೆಸಿಕೊಂಡಿದ್ದ. ತನ್ನ ಪತ್ನಿ ಮತ್ತು ಹಿರಿ ಸೊಸೆಯನ್ನು ಮನೆಯಿಂದ ಹೊರಗೆ ಹಾಕಿ, ಹತ್ತಿರದಲ್ಲೇ ಇದ್ದ ಬೇರೊಂದು ಮನೆಯಲ್ಲಿ ಇರುವಂತೆ ಮಾಡಿದ್ದ.

ಇದರಿಂದ ಸಿಟ್ಟಾಗಿದ್ದ ಅತ್ತೆ ಸೊಸೆ, ಒಂದು ನಿರ್ಧಾರಕ್ಕೆ ಬಂದಿದ್ದಾರೆ. ರಾತ್ರಿ ವೇಳೆ ಮನೆಗೆ ನುಗ್ಗಿದ ಜೋಡಿ, ಮಲಗಿದ್ದ ಮಾವನ ಕತ್ತನ್ನು ಕೊಯ್ದಿದ್ದಾರೆ. ಗಾಯಗೊಂಡಿದ್ದ ಮಾವನನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಆತ ಆಸ್ಪತ್ರೆ ಸೇರುವುದರೊಳಗೆ ಕೊನೆಯುಸಿರೆಳೆದಿದ್ದಾನೆ. ಇದೀಗ ಕಿರಿ ಸೊಸೆ, ತನ್ನ ಅಕ್ಕ ಮತ್ತು ಅತ್ತೆಯ ಮೇಲೆ ಪೊಲೀಸ್​ ಪ್ರಕರಣ ದಾಖಲಿಸಿದ್ದಾಳೆ.

Comments are closed.