ಕರಾವಳಿ

ಗೋಹತ್ಯೆ ನಿಷೇಧ ಕಾಯಿದೆ ಅಂಗೀಕರ : ಹಿಂದೂ ಜನಜಾಗೃತಿ ಸಮಿತಿ ಹರ್ಷ

Pinterest LinkedIn Tumblr

ಮಂಗಳೂರು : ಕರ್ನಾಟಕ ರಾಜ್ಯ ಸರ್ಕಾರವು 33 ಕೋಟಿ ದೇವತೆಗಳ ವಾಸಸ್ಥಾನವಾಗಿರುವ ಗೋಹತ್ಯೆಯನ್ನು ತಡೆಯಲು ‘ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ವಿಧೆಯಕ-2020’ ಅನ್ನು ವಿಧಾನಸಭೆಯಲ್ಲಿ ಅಂಗಿಕಾರ ಪಡೆದಿದೆ. ಅದಕ್ಕಾಗಿ ಹಿಂದೂ ಜನಜಾಗೃತಿ ಸಮಿತಿ ಮತ್ತು ಸಮಸ್ತ ಹಿಂದೂ ಸಂಘಟನೆಗಳ ವತಿಯಿಂದ ಧನ್ಯವಾದಗಳನ್ನು ಸಲ್ಲಿಸುತ್ತಿದ್ದೇವೆ ಎಂದು ಹಿಂದೂ ಜನಜಾಗೃತಿ ಸಮಿತಿ, ಕರ್ನಾಟಕ ರಾಜ್ಯ ಘಟಕ ತಿಳಿಸಿದೆ.

ಈ ವಿಧೆಯಕವು ರಾಜ್ಯದಲ್ಲಿ ವ್ಯಾಪಕವಾಗಿ ನಡೆಯುತ್ತಿರುವ ಅಕ್ರಮ ಗೋಹತ್ಯೆ, ಗೋಸಾಗಾಟ ತಡೆಯಲು ಸಹಕಾರಿಯಾಗಲಿದೆ. ಇಡೀ ದೇಶದಲ್ಲಿ ಗೋಹತ್ಯೆ ನಿಷೇಧ ಕಾಯಿದೆಯು ಅತ್ಯಂತ ಅವಶ್ಯಕತೆ ಇತ್ತು. ಈ ಹಿಂದೆ ಕರ್ನಾಟಕ ಭಾಜಪ ಸರ್ಕಾರವು ಜಾರಿಗೆ ತಂದಿದ್ದ ಗೋಹತ್ಯೆ ನಿಷೇಧ ಕಾಯಿದೆಯನ್ನು ಕಾಂಗ್ರೆಸ್ ಸರ್ಕಾರವು ತೆಗೆದುಹಾಕುವ ಮೂಲಕ ಮಹಾಪಾಪವನ್ನು ಮಾಡಿತ್ತು.

ಆದರೆ ಈಗ ಮತ್ತೊಮ್ಮೆ ಈ ಮಹತ್ವಪೂರ್ಣ ಕಾಯಿದೆಯನ್ನು ಜಾರಿಗೆ ತಂದ ಯಡಿಯುರಪ್ಪ ನೇತೃತ್ವದ ಸರ್ಕಾರಕ್ಕೆ ಅಭಿನಂದನೆಗಳು ಎಂದು ಹಿಂದೂ ಜನಜಾಗೃತಿ ಸಮಿತಿಯ ಕರ್ನಾಟಕ ರಾಜ್ಯ ವಕ್ತಾರ ಶ್ರೀ ಮೋಹನ ಗೌಡ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Comments are closed.