ಕರಾವಳಿ

ಮದುವೆ ಮನೆಯಲ್ಲಿ ದಾಂಧಲೆ : ಸ್ಥಳೀಯ ರೌಡಿ ಶೀಟರ್‌ ಬಂಧನ

Pinterest LinkedIn Tumblr

ಮಂಗಳೂರು : ಮದುವೆ ಮನೆಯಲ್ಲಿ ದಾಂಧಲೆ ನಡೆಸಿದ ನಗರದ ಖ್ಯಾತ ರೌಡಿ ಶೀಟರ್‌ ಓರ್ವನನ್ನು ಪೊಲೀಸರು ಬಂಧಿಸಿದ ಘಟನೆ ಸೋಮವಾರ ರಾತ್ರಿ ನಡೆದಿದೆ.

ನಗರದ ಪಡೀಲ್ ನಲ್ಲಿ ಸೋಮವಾರ ರಾತ್ರಿ ಮದುವೆ ಕಾರ್ಯಕ್ರಮ ನಡೆಯುತ್ತಿದ್ದ ಮನೆಯಲ್ಲಿ ಅಲ್ಲಿನ ನಿವಾಸಿಗಳು ಹಾಗೂ ಗೌರೀಶ್ ಮಧ್ಯೆ ಮಾತಿನ ಚಕಮಕಿ ನಡೆದಿದ್ದು, ಈ ವೇಳೆ ರೌಡಿ ಶೀಟರ್‌ ಗೌರೀಶ್ ಮದುವೆ ಮನೆಯಲ್ಲಿ ಎಂಬಾತ ದಾಂಧಲೆ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ.

ಈ ಬಗ್ಗೆ ಮನೆಯವರು ನೀಡಿದ ದೂರಿನ ಹಿನ್ನೆಲೆಯಲ್ಲಿ ಕಂಕನಾಡಿ ನಗರ ಪೊಲೀಸರು ರೌಡಿಶೀಟರ್ ಗೌರೀಶ್ ವಶಕ್ಕೆ ಪಡೆದಿದ್ದಾರೆ.

ಕಂಕನಾಡಿ ನಗರ ಪೊಲೀಸರ ಠಾಂಎಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಗೌರೀಶ್ ನನ್ನು ಹೆಚ್ಚಿನ ವಿಚಾರಣೆಗೊಳಪಡಿಸಿದ್ದಾರೆ ಎನ್ನಲಾಗಿದೆ.

Comments are closed.