ಕರಾವಳಿ

ಕನ್ನಡ, ತೆಲುಗು, ಮರಾಠಿ, ಗುಜರಾತಿ ಹಾಗೂ ಆಂಗ್ಲ ಭಾಷೆಯಲ್ಲಿ ‘ಸನಾತನ ಪಂಚಾಂಗ 2021’- ಅಂಡ್ರೈಡ್ ಆಯಾಪ್‌ ಬಿಡುಗಡೆ್

Pinterest LinkedIn Tumblr

ಪಾಶ್ಚಾತ್ಯ ಸಂಸ್ಕೃತಿಯ ಗುಲಾಮಗಿರಿಯಿಂದ ಹೊರತಂದು ಹಿಂದೂ ಧರ್ಮಜಾಗೃತಿಗಾಗಿಯೇ ‘ಸನಾತನ ಪಂಚಾಂಗ’ದ ನಿರ್ಮಾಣ ! – ಸದ್ಗುರು ಡಾ.ಚಾರುದತ್ತ ಪಿಂಗಳೆ, ರಾಷ್ಟ್ರೀಯ ಮಾರ್ಗದರ್ಶಕರು, ಹಿಂದೂ ಜನಜಾಗೃತಿ ಸಮಿತಿ

‘ಹಿಂದೂ ಪಂಚಾಂಗ’ ಇದು ಹಿಂದೂ ಧರ್ಮ ಹಾಗೂ ಸಂಸ್ಕೃತಿಯ ಅಡಿಪಾಯವಾಗಿದೆ. ನಾವು ಆಂಗ್ಲರನ್ನು ಹಾಗೂ ಮೊಘಲರನ್ನು ಈ ದೇಶದಿಂದ ಹೊರದಬ್ಬಿದೆವು; ಆದರೆ ತದನಂತರ ಬಂದ ರಾಜಕಾರಣಿಗಳು ಮಹಾನ ಹಿಂದೂ ಕಾಲಗಣನೆಯನ್ನು ನಿರ್ಲಕ್ಷಿಸಿ ಆಂಗ್ಲ ಕಾಲಗಣನೆಯನ್ನು ಸ್ವೀಕರಿಸಿದರು. ಇದರಿಂದ ಒಂದು ರೀತಿಯಲ್ಲಿ ಪಾಶ್ಚಾತ್ಯರ ಸಾಂಸ್ಕೃತಿಕ ಗುಲಾಮಗಿರಿಯನ್ನು ಸ್ವೀಕಾರ ಮಾಡಿ ದೇಶಕ್ಕೆ ದೊಡ್ಡ ಹಾನಿಯನ್ನುಂಟು ಮಾಡಿದರು.

ಈ ಗುಲಾಮಗಿರಿಯಿಂದ ಜನರನ್ನು ಹೊರತಂದು ಅವರಲ್ಲಿ ಹಿಂದೂ ಧರ್ಮ, ಸಂಸ್ಕೃತಿ, ಭಾಷೆ, ರಾಷ್ಷ್ರ ಇತ್ಯಾದಿಗಳ ಬಗ್ಗೆ ಸ್ವಾಭಿಮಾನ ಹಾಗೂ ಪ್ರೀತಿಯನ್ನು ಮೂಡಿಸಲು ಸನಾತನ ಸಂಸ್ಥೆಯು 2005 ರಿಂದ ‘ಸನಾತನ ಪಂಚಾಂಗ’ವನ್ನು ಆರಂಭಿಸಿತು.

ಈ ನಿಮಿತ್ತ ನಾವೆಲ್ಲರೂ, ನಮ್ಮ ಹುಟ್ಟುಹಬ್ಬವನ್ನು ಹಾಗೂ ಹೊಸ ವರ್ಷವನ್ನು ತಿಥಿಗನುಸಾರ ಆಚರಿಸೋಣ ಎಂದು ನಿರ್ಧರಿಸೋಣ ಎಂದು ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ಮಾರ್ಗದರ್ಶಕರಾದ ಸದ್ಗುರು(ಡಾ.) ಚಾರುದತ್ತ ಪಿಂಗಳೆಯವರು ಹೇಳಿದರು.

ಈ ಸಮಯದಲ್ಲಿ ಇತರ ಗೌರವಾನ್ವಿತ ವಕ್ತಾರರು ಜೀವನದಲ್ಲಿ ಹಿಂದೂ ಕಾಲಗಣನೆ ಹಾಗೂ ಪಂಚಾಂಗದ ಮಹತ್ವವನ್ನು ಬಿಂಬಿಸಿದರು.

ಅವರು ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಆಯೋಜಿಸಿರುವ ‘ಹಿಂದೂ ಕಾಲಗಣನೆ ಹಾಗೂ ಸನಾತನ ಪಂಚಾಂಗಗಳ ವೈಶಿಷ್ಟ್ಯ’ ಈ ಆನ್‌ಲೈನ್ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ಈ ಸಮಯದಲ್ಲಿ ಸನಾತನ ಸಂಸ್ಥೆ ನಿರ್ಮಿಸಿದ ಕನ್ನಡ, ತೆಲುಗು, ಮರಾಠಿ, ಗುಜರಾತಿ ಹಾಗೂ ಆಂಗ್ಲ ಭಾಷೆಯ ‘ಸನಾತನ ಪಂಚಾಂಗ 2021’ನ ಆಂಡ್ರೈಡ್ ಆಪ್‌ನ ಉದ್ಘಾಟನೆಯನ್ನು ಮಾಡಲಾಯಿತು.

ಕನ್ನಡ ಭಾಷೆಯ ಆಪ್‌ಅನ್ನು ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ಮಾರ್ಗದರ್ಶಕರಾದ (ಡಾ.) ಚಾರುದತ್ತ ಪಿಂಗಳೆ ಇವರ ಹಸ್ತದಿಂದ, ತೆಲಗು ಭಾಷೆಯ ಆಪ್‌ಅನ್ನು ಒಡಿಶಾದ ನಿವೃತ್ತ ಪೊಲೀಸ್ ಮಹಾನಿರೀಕ್ಷಕ ಶ್ರೀ. ಅರುಣಕುಮಾರ್ ಉಪಾಧ್ಯಾಯ ಇವರ ಹಸ್ತದಿಂದ, ಮರಾಠಿ ಭಾಷೆಯ ಆಪ್‌ಅನ್ನು ಪ್ರಸಿದ್ಧ ಪಂಚಾಂಗ ನಿರ್ಮಾಪಕರಾದ ಶ್ರೀ. ಮೋಹನ ದಾತೆ ಇವರ ಹಸ್ತದಿಂದ ಗುಜರಾತಿ ಭಾಷೆಯ ಆಪ್‌ಅನ್ನು ಪಟನಾ(ಬಿಹಾರ)ದ ವರ್ಲ್ಡ್ ಆಸ್ಟ್ರೋ ಫೆಡರೇಶನ್‌ನ ಪ್ರಾ. ಆಚಾರ್ಯ ಅಶೋಕಕುಮಾರ್ ಮಿಶ್ರಾ ಇವರ ಹಸ್ತದಿಂದ ಹಾಗೂ ಆಂಗ್ಲ ಭಾಷೆಯ ಆಪ್‌ಅನ್ನು ನೇಪಾಳದ ವಿಶ್ವ ಜ್ಯೋತಿಷ ಮಹಾಸಂಘದ ಸಂಸ್ಥಾಪಕ ಅಧ್ಯಕ್ಷ ಡಾ. ಲೋಕರಾಜ ಪೌಡೇಲ್ ಇವರ ಹಸ್ತದಿಂದ ಮಾಡಲಾಯಿತು.

ಕೆಲವು ದಿನಗಳ ಹಿಂದೆ ಹಿಂದಿ ಭಾಷೆಯ ಪಂಚಾಂಗದ ಉದ್ಘಾಟನೆಯನ್ನು ಮಧ್ಯಪ್ರದೇಶದ ಶ್ರೀ ಗುಪ್ತೇಶ್ವರಧಾಮನ ಪೀಠಾಧೀಶ್ವರ ಡಾ. ಮುಕುಂದದಾಸ ಮಹಾರಾಜ ಇವರ ಹಸ್ತದಿಂದ ಮಾಡಲಾಗಿತ್ತು.

ಆಂಡ್ರೈಡ್ ಹಾಗೂ ಐಒಎಸ್ ತಂತ್ರಜ್ಞಾನದ ಎಲ್ಲ ‘ಸನಾತನ ಪಂಚಾಂಗ 2021’ ಆಪ್ https://sanatanpanchang.com/download-apps/ ಈ ಲಿಂಕ್‌ನಿಂದ ಡೌನ್‌ಲೋಡ್ ಮಾಡಕೊಳ್ಳಬೇಕು, ಎಂದು ಸನಾತನ ಸಂಸ್ಥೆಯು ಕರೆ ನೀಡಿದೆ.

ಈ ಕಾರ್ಯಕ್ರಮವನ್ನು ಫೇಸ್‌ಬುಕ್ ಹಾಗೂ ಯು-ಟ್ಯೂಬ್‌ನ ಮಾಧ್ಯಮದಿಂದ 36,027 ಜನರು ಪ್ರತ್ಯಕ್ಷವಾಗಿ ನೋಡಿದರೇ, 1,34,949 ಜನರ ತನಕ ತಲುಪಿದೆ.

ಭಾರತೀಯ ಅರ್ಥವ್ಯವಸ್ಥೆ ಹಾಗೂ ಕುಟುಂಬವ್ಯವಸ್ಥೆಯು ಹಿಂದೂ ಪಂಚಾಂಗದ ಮೇಲೆ ಅವಲಂಬಿಸಿ ರುವುದರಿಂದ ಪಂಚಾಂಗದ ಮಹತ್ವವು ‘ಯಾವಚ್ಚಂದ್ರದಿವಾಕರೌ’ (ಸೂರ್ಯಚಂದ್ರರು ಇರುವ ತನಕ) ಇರಲಿದೆ ! – ಪಂಚಾಂಗಕರ್ತ ಶ್ರೀ. ಮೋಹನ ದಾತೆ

ಹಿಂದೂಗಳ ಕಾಲಗಣನೆ ಲಕ್ಷಾಂತರ ವರ್ಷ ಹಳೆಯದಾಗಿದ್ದು ಅದು ಸೂರ್ಯ-ಚಂದ್ರಗಳ ಗತಿಯ ಮೇಲೆ ಆಧರಿಸಿದೆ. ಅದೇರೀತಿ ಅದು ನಿಸರ್ಗಚಕ್ರ ಹಾಗೂ ಋತುಚಕ್ರಗಳಿಗೆ ಅನುಕೂಲಕರವಾಗಿದೆ. ಆದ್ದರಿಂದ ಪ್ರತಿವರ್ಷ ಹಬ್ಬ, ಋತು, ವ್ರ್ರತ ಇತ್ಯಾದಿ ದಿನಗಳು ಬದಲಾಗುವುದಿಲ್ಲ, ಆದರೆ ಇತರ ಪಂಥಗಳ ಎರಡು-ನಾಲ್ಕು ಸಾವಿರ ವರ್ಷಗಳ ಹಿಂದೆ ಅಸ್ತಿತ್ವದಲ್ಲಿ ಬಂದ ಕಾಲಗಣನೆಯು ದೋಷಪೂರಿತವಾಗಿದೆ.

ಇಂದೂ ಜನರು ಆಂಗ್ಲ ಕ್ಯಾಲೆಂಡರ್‌ಅನ್ನು ದಿನಾಂಕ ನೋಡಲು ಅಲ್ಲ ಬದಲಾಗಿ ಆಯಾ ದಿನದ ತಿಥಿ, ನಕ್ಷತ್ರ, ಮುಹೂರ್ತ, ಏಕಾದಶಿ, ಪ್ರದೊಷ, ಹಬ್ಬ, ವ್ರತ ಇತ್ಯಾದಿಗಳನ್ನು ನೋಡಲು ಖರೀದಿಸುತ್ತಾರೆ. ಭಾರತದ ಅರ್ಥವ್ಯವಸ್ಥೆಯು ಈ ಹಬ್ಬ-ಉತ್ಸವಗಳ ಮೇಲೆ ಅವಲಂಬಿಸಿದೆ. ಅದಕ್ಕನುಸಾರ ಖರೀದಿ-ಮಾರಾಟ ಆಗುತ್ತದೆ. ವ್ಯಾಪಾರದಲ್ಲಿ ವಹಿವಾಟು ಇರುತ್ತದೆ. ಇದೆಲ್ಲ ಹಿಂದೂ ಪಂಚಾಂಗದಿಂದ ಆಗುತ್ತದೆ. ಆದ್ದರಿಂದ ಪಂಚಾಂಗದ ಮಹತ್ವವು ಬರುವ ಕಾಲದಲ್ಲಿ ‘ಯಾವಚ್ಚಂದ್ರದಿಯಾಕರೌ’ (ಸೂರ್ಯಚಂದ್ರರು ಇರುವ ತನಕ) ಇರಲಿದೆ, ಎಂದು ಮಹಾರಾಷ್ಷ್ರದ ಪ್ರಸಿದ್ಧ ಪಂಚಾಂಗ ನಿರ್ಮಾಣಕರ್ತರಾದ ಶ್ರೀ. ಮೋಹನ ಧುಂಡಿರಾಜ ದಾತೆ ಇವರು ಹೇಳಿದರು.

ಸನಾತನ ಸಂಸ್ಥೆಯು ಅನೇಕ ವರ್ಷಗಳಿಂದ ಯುಗಾದಿ ಹಬ್ಬದಂದು ಹೊಸವರ್ಷ ಆಚರಿಸುವ ಮಹತ್ವವನ್ನು ಬಿಂಬಿಸಿದ್ದರಿಂದ ಇಂದಿನ ಯುವಾಪೀಳಿಗೆಯು ಜನವರಿ 1 ರ ಬದಲಾಗಿ ಯುಗಾದಿಯಂದು ಬೃಹತ್‌ ಪ್ರಮಾಣ ದಲ್ಲಿ ಸ್ವಾಗತಯಾತ್ರೆಯನ್ನು ನಡೆಸಿ ಹೊಸವರ್ಷವನ್ನು ಆಚರಿಸುತ್ತಿದೆ, ಎಂದು ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.

ವರದಿ ಕೃಪೆ :ಶ್ರೀ ವಿನೋದ ಕಾಮತ್, ರಾಜ್ಯ ವಕ್ತಾರರು, ಸನಾತನ ಸಂಸ್ಥೆ, ಕರ್ನಾಟಕ

Comments are closed.