ಕರಾವಳಿ

ಗ್ರಾಮ ಪಂಚಾಯಿತಿ ಚುನಾವಣೆ : ಅಬಕಾರಿ ಅಕ್ರಮಗಳ ತಡೆಯಲು ವಿಚಕ್ಷಣದಳ ರಚನೆ

Pinterest LinkedIn Tumblr

ಮಂಗಳೂರು : ಗ್ರಾಮ ಪಂಚಾಯಿತಿಗಳ ಸಾರ್ವತ್ರಿಕ ಚುನಾವಣೆ-2020 ರ ಸಂಬಂಧ ನೀತಿ ಸಂಹಿತೆ ಜಾರಿಯಲ್ಲಿರುವ ಅವಧಿಯಲ್ಲಿ ನಡೆಯಬಹುದಾದ ಅಬಕಾರಿ ಅಕ್ರಮಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಅಬಕಾರಿ ಇಲಾಖಾ ವತಿಯಿಂದ ಜಿಲ್ಲಾ ಮತ್ತು ಉಪ ವಿಭಾಗ ಮಟ್ಟದಲ್ಲಿ ವಿಚಕ್ಷಣದಳಗಳನ್ನು ರಚಿಸಲಾಗಿದೆ.

ವಿಚಕ್ಷಣದಳಗಳ ನಿಯಂತ್ರಣಾಧಿಕಾರಿಗಳ ಹುದ್ದೆ, ಹೆಸರು ಹಾಗೂ ದೂರವಾಣಿ ಸಂಖ್ಯೆಗಳು: ಜಿಲ್ಲಾ ಮಟ್ಟ -ಶೈಲಜಾ.ಎ ಕೋಟೆ, ಡೆಪ್ಯುಟಿ ಕಮೀಷನರ್ ಆಫ್ ಎಕ್ಸೈಜ್ ಮೊಬೈಲ್ ಸಂಖ್ಯೆ: 9449597103.

ಉಪ ವಿಭಾಗ ಮಟ್ಟ – ಶಿವ ಪ್ರಸಾದ್, ಅಬಕಾರಿ ಉಪ ಅಧೀಕ್ಷಕರು, ಮಂಗಳೂರು ಉಪ ವಿಭಾಗ- ಮೊಬೈಲ್ ಸಂಖ್ಯೆ: 9449597109, ಅಮರನಾಥ.ಎಸ್.ಎಸ್ ಭಂಡಾರಿ, ಅಬಕಾರಿ ಉಪ ಅಧೀಕ್ಷಕರು, ಮಂಗಳೂರು ಉಪ ವಿಭಾಗ-2 ಮೊಬೈಲ್ ಸಂಖ್ಯೆ: 9449597781, ಶೋಭಾ.ಕೆ, ಅಬಕಾರಿ ಉಪ ಅಧೀಕ್ಷಕರು, ಬಂಟ್ವಾಳ ಉಪ ವಿಭಾಗ, ಮೊಬೈಲ್ ಸಂಖ್ಯೆ: 9448547076, ಶಿವ ಪ್ರಸಾದ್, ಅಬಕಾರಿ ಉಪ ಅಧೀಕ್ಷಕರು, ಪುತ್ತೂರು ಉಪ ವಿಭಾಗ ಮೊಬೈಲ್ ಸಂಖ್ಯೆ: 9449597111.

ಸಾರ್ವಜನಿಕರು ಅಬಕಾರಿ ಅಕ್ರಮಗಳ ಬಗ್ಗೆ ಮಾಹಿತಿಯನ್ನು ವಿಚಕ್ಷಣದಳಗಳ ನಿಯಂತ್ರಣಾಧಿಕಾರಿಗಳಿಗೆ ನೀಡಬಹುದಾಗಿರುತ್ತದೆ. ಎಂದು ಜಿಲ್ಲೆಯ ಡೆಪ್ಯುಟಿ ಕಮೀಷನರ್ ಆಫ್ ಎಕ್ಸೈಜ್ ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Comments are closed.