ಕರಾವಳಿ

ಮಂಗಳೂರಿನಲ್ಲಿ ಲಷ್ಕರ್ ಉಗ್ರರ ಪರ ಬರೆದ ಗೋಡೆ ಬರಹ ಪತ್ತೆ:ಸ್ಥಳೀಯರಲ್ಲಿ ಆತಂಕ

Pinterest LinkedIn Tumblr

ಮಂಗಳೂರು: ಮಂಗಳೂರಿನ ಅಪಾರ್ಟ್‌ಮೆಂಟ್ ಒಂದರ ಕಾಂಪೌಂಡ್‌ ಗೋಡೆ ಮೇಲೆ ಕಿಡಿಗೇಡಿಗಳು ಲಷ್ಕರ್ ಉಗ್ರರ ಪರವಾದ ಗೋಡೆ ಬರಹಗಳನ್ನು ಬರೆದಿದ್ದು, ಇದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.

ನಗರದ ಕದ್ರಿ ಬಳಿಯ ಸರ್ಕ್ಯೂಟ್ ಹೌಸ್ ರಸ್ತೆಯಲ್ಲಿರುವ ಅಪಾರ್ಟ್ ಮೆಂಟ್ ಒಂದರ ಕಂಪೌಂಡ್ ನಲ್ಲಿ ಕೆಲ ಕಿಡಿಗೇಡಿಗಳು ಉಗ್ರ ಸಂಘಟನೆ ಪರ ಗೋಡೆ ಬರಹ ಬರೆದ ಘಟನೆ ಬೆಳಕಿಗೆ ಬಂದಿದೆ.

ಕೌಂಪೌಂಡ್‌ನ ಮೇಲೆ ಹ್ಯಾಷ್ ಟ್ಯಾಗ್ ಹಾಕಿ, “ಲಷ್ಕರ್‌‌ ಜಿಂದಾಬಾದ್”‌‌‌‌‌ ಎಂದು ಬರೆದಿದ್ದು,’ಡು ನಾಟ್ ಫೋರ್ಸ್ ಅಸ್‌ ಟು ಇನ್ವೈಟ್ ತಾಲಿಬಾನ್ ಆಯಂಡ್ ಲಷ್ಕರ್-ಇ-ತೊಯ್ಬಾ ಟು ಡೀಲ್‌ ವಿತ್ ಸಂಘೀಸ್ ಆಯಂಡ್ ಮನ್ವೇದಿಸ್’ (“Do not force us to invite Lashkar-e-Toiba and Taliban to Deal with Sanghis and Manvedis” ಎಂದು ಇಂಗ್ಲೀಷ್​ನಲ್ಲಿ ಬರೆದು ಬರಹದ ಮೂಲಕ ಲಷ್ಕರ್ ಉಗ್ರರನ್ನ ಕರೆಸುವುದಾಗಿ ಬೆದರಿಕೆ ಹಾಕಿದ್ದಾರೆ. ಇದರ ಅನುವಾದ ಸಂಘಿಗಳು ಮತ್ತು ಮನುವಾದಿಗಳ ವಿರುದ್ಧ ಹೋರಾಟಕ್ಕೆ ಲಷ್ಕರ್-ಇ-ತೊಯ್ಬಾ, ತಾಲಿಬಾನ್‌ ಸಂಘಟನೆಗೆ ಆಹ್ವಾನಿಸಲು ನಮ್ಮನ್ನು ಪ್ರೇರೇಪಿಸಬೇಡಿ ಎಂದು. ಸದ್ಯ ಸ್ಥಳಕ್ಕೆ ಕದ್ರಿ ಆಗಮಿಸಿದ ಪೊಲೀಸರು ವಿವಾದಿತ ಬರಹದ ಮೇಲೆ ಪೇಂಟಿಂಗ್ ಮಾಡಿ ಅಳಿಸಿದ್ದಾರೆ.

ನವೆಂಬರ್ 26, 2008ರಂದು ಪಾಕಿಸ್ತಾನ ಮೂಲದ ಲಷ್ಕರ್ ಎ ತೊಯ್ಬಾ ಉಗ್ರರು ಸಮುದ್ರ ಮಾರ್ಗದಲ್ಲಿ ಬಂದು ಮುಂಬೈನಲ್ಲಿ ದಾಳಿ ನಡೆಸಿದ್ದರು. ಈ ಭಯಾನಕ ದಾಳಿಯಲ್ಲಿ 18 ಭದ್ರತಾ ಸಿಬ್ಬಂದಿ ಸೇರಿ 166 ಮಂದಿ ಮೃತಪಟ್ಟಿದ್ದರು. ನವೆಂಬರ್ 26, 2020ಕ್ಕೆ ಮುಂಬೈ ಮೇಲೆ ನಡೆದ ಉಗ್ರರ ದಾಳಿಗೆ 12 ವರ್ಷಗಳಾಗಿದೆ. ಈ ನಡುವೆ ಇಂದು ಕಡಲ ನಗರಿಯಲ್ಲಿ ಕಿಡಿಗೇಡಿಗಳ ಈ ಕೃತ್ಯ ಭಯವನ್ನುಟ್ಟಿಸಿದೆ.

ಆರೋಪಿಗಳ ಪತ್ತೆಗೆ ಕದ್ರಿ ಪೊಲೀಸರಿಂದ ಶೋಧಕಾರ್ಯ ಶುರು ಮಾಡಿದ್ದು ಬರಹವಿದ್ದ ಸುತ್ತಮುತ್ತಲಿನ ರಸ್ತೆಗಳ ಸಿಸಿಟಿವಿ ಪರಿಶೀಲಿಸಲಾಗುತ್ತಿದೆ.

Comments are closed.