ರಾಷ್ಟ್ರೀಯ

ಉತ್ತರಪ್ರದೇಶದ ಸರ್ಕಾರಿ ಆಸ್ಪತ್ರೆಯೊಂದರ ಸ್ಟ್ರೆಚರ್ ನಲ್ಲಿದ್ದ ಬಾಲಕಿಯ ಮೃತದೇಹವನ್ನು ಎಳೆದು ತಿಂದ ನಾಯಿ !  ದೃಶ್ಯ ವೈರಲ್

Pinterest LinkedIn Tumblr

ಲಕ್ನೋ: ಉತ್ತರಪ್ರದೇಶದ ಸಂಭಲ್ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯೊಂದರ ಸ್ಟ್ರೆಚರ್ ನಲ್ಲಿದ್ದ ಬಾಲಕಿಯ ಮೃತದೇಹವನ್ನು ನಾಯಿಯೊಂದು ಎಳೆದು ತಿನ್ನುತ್ತಿರುವ ಹೃದಯ ವಿದ್ರಾವಕ ದೃಶ್ಯವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಜನರ ಆಕ್ರೋಶಕ್ಕೆ ಗುರಿಯಾಗಿದೆ.

ಉತ್ತರಪ್ರದೇಶದ ಸಂಬಾಲ್ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ. ಸದ್ಯ ಈ ಹೃದಯವಿದ್ರಾವಕ ವೀಡಿಯೋ ನೋಡಿದ ನೆಟ್ಟಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಾಲಕಿ ಅಪಘಾತವೊಂದರಲ್ಲಿ ಮೃತಪಟ್ಟಿದ್ದಳು. ಈ ಹಿನ್ನೆಲೆಯಲ್ಲಿ ಮರಣೋತ್ತರ ಪರೀಕ್ಷೆಗೆ ಆಕೆಯ ಮೃತದೇಹವನ್ನು ಸಂಬಾಲ್ ಜಿಲ್ಲಾಸ್ಪತ್ರೆಗೆ ತರಲಾಗಿತ್ತು. ಈ ವೇಳೆ ಸ್ಟ್ರೆಚರ್ ನಲ್ಲಿ ಇರಿಸಲಾಗಿದ್ದ ಮೃತದೇಹವನ್ನು ನಾಯಿ ಎಳೆದು ತಿಂದಿದೆ. ಈ ಘಟನೆಯನ್ನು ನೋಡುತ್ತಿದ್ದ ವ್ಯಕ್ತಿಯೊಬ್ಬ ತನ್ನ ಮೊಬೈಲ್ ನಲ್ಲಿ ಸೆರೆಹಿಡಿದ್ದು, ಸಾಮಾಜಿಕ ಜಾಲತಾಣಕ್ಕೆ ಹರಿಬಿಟ್ಟಿದ್ದಾನೆ. ಈ ಮೂಲಕ ಆಸ್ಪತ್ರೆ ಸಿಬ್ಬಂದಿಯ ನಿರ್ಲಕ್ಷ್ಯತನವನ್ನು ಬಹಿರಂಗಪಡಿಸಿದ್ದಾನೆ.

ಈ ಸಂಬಂಧ ಬಾಲಕಿಯ ತಂದೆ ಮಾತನಾಡಿ, ಅಪಘಾತದಲ್ಲಿ ನನ್ನ ಮಗಳು ಮೃತಪಟ್ಟಿದ್ದಳು. ಹೀಗಾಗಿ ಮರಣೋತ್ತರ ಪರೀಕ್ಷೆಗೆಂದು ಆಕೆಯ ಮೃತದೇಹವನ್ನು ಸುಮಾರು 2 ಗಂಟೆಗಳ ಮೊದಲೇ ಆಸ್ಪತ್ರೆಗೆ ತರಲಾಗಿತ್ತು. ಇದೀಗ ಮಗಳ ಮೃತದೇಹವನ್ನು ನಾಯಿ ಎಳೆದು ತಿನ್ನುತ್ತಿರುವ ದೃಶ್ಯ ಬಯಲಾಗಿದ್ದು, ಇದು ಅಲ್ಲಿನ ಸಿಬ್ಬಂದಿಯ ನಿರ್ಲಕ್ಷ್ಯವನ್ನು ಬಯಲು ಮಾಡಿದೆ ಎಂದು ತಿಳಿಸಿದ್ದಾರೆ.

ಇನ್ನು ಮುಖ್ಯ ವೈದ್ಯಕೀಯ ಅಧಿಕಾರಿ ಅಮಿತಾಭ್ ಸಿಂಗ್ ಮಾತನಾಡಿ, ಈ ಘಟನೆಯ ಬಗ್ಗೆ ತನಿಖೆ ನಡೆಸಲು ಸಮಿತಿಯೊಂದನ್ನು ರಚಿಸಲಾಗಿದೆ ಎಂದು ಹೇಳಿದ್ದಾರೆ.

Comments are closed.