ಕರಾವಳಿ

ಗ್ರಾಹಕರಿಗೆ ಕೊಟ್ಯಾಂತರ ರೂ. ಪಂಗನಾಮ‍: ಮಲೈಕಾ ಸೊಸೈಟಿ ವಿರುದ್ಧ ಪ್ರಕರಣ ದಾಖಲು-ಮಂಗಳೂರು ಮ್ಯಾನೇಜರ್ ಬಂಧನ

Pinterest LinkedIn Tumblr

ಮಂಗಳೂರು: ಕಡಲ ನಗರಿ ಮಂಗಳೂರಿನ ಸೊಸೈಟಿಯೊಂದು ನೂರಾರು ಗ್ರಾಹಕರಿಗೆ ವಂಚಿಸಿರುವ ಘಟನೆ ಬೆಳಕಿಗೆ ಬಂದಿದ್ದು, ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಬ್ರಾಂಚ್ ಮ್ಯಾನೇಜರನ್ನು ಪೊಲೀಸರು ಬಂಧಿಸಿದ್ದಾರೆ.

ಮಲೈಕಾ ಸೊಸೈಟಿ ಹೆಸರಲ್ಲಿ ಗ್ರಾಹಕರಿಂದ ಕೋಟ್ಯಂತರ ರೂ. ಠೇವಣಿ ಸಂಗ್ರಹಿಸಿ ಅವಧಿ ಪೂರ್ಣಗೊಂಡಾಗ ಅದನ್ನು ಹಿಂದಿರುಗಿಸದೆ ವಂಚನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸ್ಥೆಯ ಸ್ಥಾಪಕ ಗಿಲ್ಬರ್ಟ್ ಬ್ಯಾಪಿಸ್ಟ್ ಹಾಗೂ ಆಡಳಿತ ಮಂಡಳಿ ವಿರುದ್ದ ಪ್ರಕರಣ ದಾಖಲಾಗಿದೆ. ಮಾತ್ರವಲ್ಲದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಬ್ರ್ಯಾಂಚ್ ಮ್ಯಾನೇಜರ್ ರೀನಾ ಜೋಶ್ ಅವರನ್ನು ಎನ್‍ಸಿ.ಇ.ಪಿ.ಎಸ್ ಠಾಣೆ ಪೋಲೀಸರು ಬಂಧಿಸಿದ್ದಾರೆ.

ಬೆಂಗಳೂರಿನ ಐಎಂಎ, ರಾಘವೇಂದ್ರ ಕೊ ಆಪರೇಟಿವ್ ಬ್ಯಾಂಕ್ ವಂಚನೆ ನಂತರ ಮಂಗಳೂರಿನ ಮಲೈಕಾ ಮಲ್ಟಿ ಸ್ಟೇಟ್ ಕೋ ಆಪರೇಟಿವ್ ಸೊಸೈಟಿ ತನ್ನ ಗ್ರಾಹಕರಿಟ್ಟಿದ್ದ ನೂರಾರು ಕೋಟಿ ರೂ. ಹಿಂದಿರುಗಿಸದೆ ಪಂಗನಾಮ ಹಾಕಿದೆ

ಮಂಗಳೂರಿನ ಬೆಂದೂರ್ ವೆಲ್‌ನಲ್ಲಿ ಪ್ರಧಾನ ಕಚೇರಿ ಹೊಂದಿರುವ ಮಲೈಕಾ ಸೊಸೈಟಿ ಮುಂಬೈ, ಬೆಂಗಳೂರು, ಮಂಗಳೂರು, ಗೋವಾಗಳಲ್ಲಿ ಶಾಖೆಗಳನ್ನುಹೊಂದಿದೆ. ಉಳಿತಾಯ ಖಾತೆ, ನಿರಖು ಠೇವಣಿ ಖಾತೆ ಸೇರಿದಂತೆ ಹಲವಾರು ಖಾತೆಗಳ ಹೆಸರಲ್ಲಿ ಸಾವಿರಾರು ಮಂದಿಯಿಂದ ಕೋಟ್ಯಾಂತರ ರೂ. ಸಂಗ್ರಹಿಸಿದೆ. ಆದರೆ ಆ ಠೇವಣಿ ಅವಧಿ ಮುಗಿದು ನಗದು ಹಿಂದಿರುಗಿಸುವ ವೇಳೆ ಸೊಸೈಟಿಯ ನಿರ್ದೇಶಕರುಗಳು ನಾಪತ್ತೆಯಾಗಿದ್ದಾರೆ.

ಮಲೈಕಾ ಮಲ್ಟಿ ಸ್ಟೇಟ್ ಕೋಆಪರೇಟಿವ್ ಸೊಸೈಟಿಯ ಮೇಲೆ ಒಟ್ಟು 350 ಕೋಟಿಗೂ ಹೆಚ್ಚು ವಂಚನೆ ಆರೋಪ ಕೇಳಿಬಂದಿದೆ. ತಿಂಗಳ ಇಂಟ್ರೆಸ್ಟ್ ಸ್ಕೀಂನಲ್ಲಿ ಹಣ ಇಟ್ಟ ಹಲವರಿಗೆ ಮಲೈಕಾ ಮಲ್ಟಿ ಸ್ಟೇಟ್ ಕೋಆಪರೇಟಿವ್ ಸೊಸೈಟಿಯಿಂದ ವಂಚನೆ ಆರೋಪ ಮಾಡಲಾಗಿದೆ.

ಮಂಗಳೂರು ಶಾಖೆಯೊಂದರಲ್ಲೇ ಸುಮಾರು 40 ಕೋಟಿಗೂ ಅಧಿಕ ಹಣ ಪಂಗನಾಮ‍ ಹಾಕಿದ್ದಾರೆ ಎಂದು ಫಿಕ್ಸ್ ಡೆಪಾಸಿಟ್ ಇಟ್ಟಿರುವ 800ಕ್ಕೂ ಅಧಿಕ ಜನ ಆರೋಪ ಮಾಡುತ್ತಿದ್ದಾರೆ.

ಕರಾವಳಿ ಭಾಗದಲ್ಲಿ ಹಲವು ಕಡೆ ಶಾಖೆಗಳನ್ನು ಹೊಂದಿರುವ ಮಲೈಕಾ ಮಲ್ಟಿ ಸ್ಟೇಟ್ ಕೋ ಆಪರೇಟಿವ್ ಸೊಸೈಟಿ ಹಿರಿಯ ನಾಗರಿಕರಿಗೆ ಹೆಚ್ಚಿನ ಬಡ್ಡಿ ನೀಡುವ ಭರವಸೆ ನೀಡಿತ್ತ. ಹೀಗಾಗಿ ಸಾವಿರಾರು ಜನರು ಇದರಲ್ಲಿ ಹಣ ಠೇವಣಿ ಇಟ್ಟಿದ್ದರು. ಆದರೆ ಅವಧಿ ಮುಗಿದ ಬಳಿಕ ಹಣ ಮರಳಿಸದೇ ಇದ್ದು, ಹಣವನ್ನು ಸೊಸೈಟಿ ಮಾಲಕರು ತಮ್ಮ ಖಾತೆಗೆ ಜಮಾ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ.

ಇದೀಗ ಪ್ರಧಾನ ಕಚೇರಿ ಬಂದ್ ಆಗಿದ್ದು ಇನ್ನೂ ಹಲವಾರು ಕಡೆಗಳಲ್ಲಿ ಶಾಖೆಗಳೂ ಸಹ ಮುಚ್ಚಿದೆ. ವಂಚನೆಗೊಳಗಾದ ನೂರಾರು ಮಂದಿ ಪಾಂಡೇಶ್ವರದ ನಾರ್ಕೋಟಿಕ್ ಮತ್ತು ಆರ್ಥಿಕ ಅಪರಾಧ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ.

ಮಂಗಳೂರು ಮೂಲದ ಎಲೇರಿ ಕುಟ್ಟಿನೋ ನೀಡಿದ ದೂರಿನ ಹಿನ್ನೆಲೆ ಎನ್‍ಸಿ.ಇ.ಪಿ.ಎಸ್ ಠಾಣೆ ಪೋಲೀಸರು ತನಿಖೆ ನಡೆಸಿ ಮಂಗಳೂರು ಶಾಖೆ ವ್ಯವಸ್ಥಾಪಕಿ ರೀನಾ ಜೋಶ್‍ ಎನ್ನುವವರನ್ನು ಬಂಧಿಸಿದ್ದಾರೆ. ಈ ವೇಳೆ ಸೊಸೈಟಿಗೆ ಸಂಬಂಧಪಟ್ಟ ಹಲವಾರು ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸ್ಥೆಯ ಸ್ಥಾಪಕ ಗಿಲ್ಬರ್ಟ್ ಬ್ಯಾಪಿಸ್ಟ್, ಪತ್ನಿ ಮರ್ಸಿಲಿನ್ ಬ್ಯಾಪ್ಟಿಸ್ಟ್ ಸೇರಿದಂತೆ ಆಡಳಿತ ಮಂಡಳಿಯ 12 ಮಂದಿ ವಿರುದ್ಧ ಪೊಲೀಸರಿಗೆ ದೂರು ನೀಡಲಾಗಿದ್ದು, ಇವರೆಲ್ಲರ ವಿರುದ್ಧ ದೂರು ದಾಖಲಾಗಿದೆ.

Comments are closed.