ಕರಾವಳಿ

ಅನುಮತಿಯಿಲ್ಲದೇ ಜಾಥಾ: ಸಿಎಫ್ಐ ಸಂಘಟನೆ ಸದಸ್ಯರ ವಿರುದ್ಧ ಎಫ್ಐಆರ್..!

Pinterest LinkedIn Tumblr

ಉಡುಪಿ: ಅನುಮತಿಯಿಲ್ಲದೇ ಜಾಥಾ ನಡೆಸಿದ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ (ಸಿಎಫ್ಐ) ಸಂಘಟನೆ ಕಾರ್ಯಕರ್ತರ ವಿರುದ್ಧ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಜ್ಯಸರ್ಕಾರ ಮತ್ತು ಅಲ್ಪ ಸಂಖ್ಯಾತ ಇಲಾಖೆಯಿಂದ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ವಿದ್ಯಾರ್ಥಿವೇತನ ಶೀಘ್ರವಿತರಿಸುವ ಬಗ್ಗೆ ಅಲ್ಪ ಸಂಖ್ಯಾತ ವಿದ್ಯಾರ್ಥಿಗಳಿಗೆ ನೀಡುವ PHD,M.Phil ಕಡಿತಗೊಳಿಸಿರುವ ಸರಕಾರದ ಕ್ರಮ ಹಿಂಪಡೆಯಬೇಕೆಂಬ ಎಂಬ ಬಗ್ಗೆ ಸಿಎಫ್ಐ ಸಂಘಟನೆಯವರು ಜಿಲ್ಲಾಧಿಕಾರಿಯವರಿಗೆ ಮನವಿನೀಡುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಈ ಕಾರ್ಯಕ್ರಮದ ಅಂಗವಾಗಿ ಪ್ರತಿಭಟನೆಗೆ ಸೇರಿದ ಸದಸ್ಯರು ಉಡುಪಿ ಡಿ.ಸಿ ಕಚೇರಿ ರಸ್ತೆಯ ಕಾಯಿನ್‌ ಸರ್ಕಲ್‌‌ ಬಳಿ ರಸ್ತೆ ಜಾಥ ಮಾಡಲು ಮುಂದಾಗಿದ್ದು, ಈ ಬಗ್ಗೆ ಪೊಲೀಸ್ ಇಲಾಖೆಯಿಂದ ಪೂರ್ವಾನುಮತಿ ಪಡೆದುಕೊಂಡಿರಲಿಲ್ಲ.

ಈ ವಿಚಾರವನ್ನು ಸಂಘಟನೆಯ ಸದಸ್ಯರಿಗೆ ಮನವರಿಕೆ ಮಾಡಿದ್ದು, ಸಂಘಟನೆಯ ಸದಸ್ಯರಾದ ಉಸಾಮ,ಸಫವನ್‌‌,ಮಸೂದ್ ,ರಿಯಾಜ್‌ ವಿಟ್ಲ ಅವರು ಪೊಲೀಸ್‌ ಅಧಿಕಾರಿಯವರ ಮೌಖಿಕ ಆದೇಶವನ್ನು ಉಲ್ಲಂಘಿಸಿ ಜಾಥ ನಡೆಸಿದ್ದಾರೆ.

ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.