ಕರಾವಳಿ

ಉಡುಪಿ ಪೊಲೀಸರ ಕಾರ್ಯಾಚರಣೆ: 14 ಲಕ್ಷ 70 ಸಾವಿರದ ನಿಷೇಧಿತ ಮಾದಕ ವಸ್ತುಗಳು ವಶಕ್ಕೆ..!

Pinterest LinkedIn Tumblr

ಉಡುಪಿ: ಮಣಿಪಾಲ ಪೊಲೀಸ್ ಠಾಣೆಯಲ್ಲಿ ಈ ಹಿಂದೆ ಪ್ರಕರಣ ದಾಖಲಾಗಿ ತನಿಖೆಯಲ್ಲಿದ್ದ ನಿಷೇಧಿತ ಮಾದಕ ವಸ್ತುಗಳ ಮಾರಾಟ ಪ್ರಕರಣದಲ್ಲಿ ಈ ದಿನ ಖಚಿತ ಮಾಹಿತಿಯ ಆಧಾರದ ಮೇಲೆ ಕಾರ್ಯಚರಣೆ ಮಾಡಿದ ಉಡುಪಿ ಪೊಲೀಸರು ಒಟ್ಟು 244 ಗ್ರಾಂ ತೂಕದ ಒಟ್ಟು 462 MDMA ಮಾತ್ರೆಗಳು ಮತ್ತು 14 ಗ್ರಾಂ ವಿದೇಶಿ ಹೈಡ್ರೊವಿಡ್ ಗಾಂಜಾಗಳನ್ನು ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡ ನಿಷೇದಿತ ಮಾದಕ ವಸ್ತುಗಳ ಒಟ್ಟು ಅಂದಾಜು ಮೌಲ್ಯ ರೂ 14 ಲಕ್ಷದ 70 ಸಾವಿರ ಆಗಿದೆ.

ಕಳೆದ 2 ತಿಂಗಳಲ್ಲಿ ವಿದೇಶದಿಂದ ಆಮದು ಮಾಡಿಕೊಂಡಿರುವ ಹೆಚ್ಚು ಮೌಲ್ಯದ ನಿಷೇಧಿತ ಮಾದಕ ವಸ್ತುಗಳನ್ನು 5ನೇ ಬಾರಿಗೆ ವಶಪಡಿಸಿಕೊಳ್ಳುತ್ತಿರುವ ಉಡುಪಿ ಪೊಲೀಸರು ಮಾದಕ ವಸ್ತುಗಳ ವಿರುದ್ಧ ಕಾರ್ಯಚರಣೆ ತೀವ್ರಗೊಳಿಸಿದ್ದು ಆರೋಪಿಗಳನ್ನು ಪತ್ತೆ ಮಾಡಲು ತಂಡಗಳನ್ನು ರಚಿಸಿದ್ದಾರೆ.

ಉಡುಪಿ ಎಸ್.ಪಿ ವಿಷ್ಣುವರ್ಧನ್ ಮತ್ತು ಅಡಿಷನಲ್ ಎಸ್ಪಿ ಕುಮಾರ್ ಚಂದ್ರ ಅವರ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಕಾರ್ಕಳ ಭರತ್ ಎಸ್ ರೆಡ್ಡಿ, ಮಣಿಪಾಲ ಇನ್ಸ್‌ಪೆಕ್ಟರ್ ಮಂಜುನಾಥ್ ಎಂ ಗೌಡ ಅವರ ನೇತೃತ್ವದ ತಂಡದ ಸದಸ್ಯರಾದ, ಉಡುಪಿ ಅಸಿಸ್ಟೆಂಟ್ ಡ್ರಗ್ ಕಂಟ್ರೋಲರ್ ನಾಗರಾಜ್ , ಶಿಕ್ಷಣ ಇಲಾಖೆಯ ಅಧಿಕಾರಿಗಳಾದ ಶಂಕರ್ ಮತ್ತು ಪ್ರದೀಪ್ ಕುಮಾರ್ ಮತ್ತು ಮಣಿಪಾಲ ಪೊಲೀಸ್ ಠಾಣೆಯ ಸಿಬ್ಬಂದಿಗಳಾದ ಆದರ್ಶ, ದಯಾಕರ್ ಪ್ರಸಾದ್, ಶುಭಾ , ಆನಂದಯ್ಯ, ಸುದೀಪ್, ಕಾರ್ಕಳ ಡಿವೈಎಸ್ಪಿ ಕಛೇರಿಯ ಜಗದೀಶ್ ಮೊದಲಾದವರು ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಉಡುಪಿ ಜಿಲ್ಲೆಯಲ್ಲಿ ಡ್ರಗ್ಸ್ ವಿರುದ್ದ ಕಾರ್ಯಚರಣೆ ನಿರಂತರವಾಗಿ ಮುಂದುವರಿಯುತ್ತದೆ ಎಂದು ಉಡುಪಿ ಎಸ್ಪಿ ವಿಷ್ಣುವರ್ಧನ್ ಹೇಳಿದ್ದಾರೆ.

Comments are closed.