ಕರಾವಳಿ

ಮಂಗಳೂರಿನ ಗೂಡ್ ಶೆಡ್‌ ಜಂಕ್ಷಣ್ ಬಳಿ ತಾತ್ಕಾಲಿಕ ಮಾರ್ಗ ಬದಲಾವಣೆ

Pinterest LinkedIn Tumblr

ಮಂಗಳೂರು ನವೆಂಬರ್ 19 : ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಗೂಡ್ ಶೆಡ್ ರಸ್ತೆಯಲ್ಲಿ ಒಳಚರಂಡಿ ಪೈಪ್ ಲೈನ್ ಕಾಮಗಾರಿಯು ಪ್ರಾರಂಭಗೊಳ್ಳಲಿದ್ದು, ಮೋಟಾರು ವಾಹನ ಕಾಯ್ದೆ 1988 ರ ಕಲಂ 115 ಹಾಗೂ ಕರ್ನಾಟಕ ಮೋಟಾರು ವಾಹನ ನಿಯಮಾವಳಿಗಳು1989 ರ ನಿಯಮ 221 ರ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಗೂಡ್ ಶೆಡ್ ರೈಲ್ವೆ ಜಂಕ್ಷನ್ ನಿಂದ ನಿರೇಶ್ವಾಲ್ಯ ಜಂಕ್ಷನ್ ವರೆಗೆ ನವೆಂಬರ್ 18 ರಿಂದ ಡಿಸೆಂಬರ್ 27ರವರೆಗೆ ವಾಹನಗಳ ಸಂಚಾರದಲ್ಲಿ ತಾತ್ಕಾಲಿಕವಾಗಿ ಬದಲಾವಣೆ ಮಾಡಲಾಗಿದೆ.

ಗೂಡ್ ಶೆಡ್ ರೈಲ್ವೆ ಜಂಕ್ಷನ್ ನಿಂದ ನಿರೇಶ್ವಾಲ್ಯ ಜಂಕ್ಷನ್ ತನಕ ರಸ್ತೆಯಲ್ಲಿ ವಾಹನ ಸಂಚಾರವನ್ನು ಸಂಪೂರ್ಣ ನಿ?ಧಿಸಲಾಗಿದ್ದು, ದಕ್ಕೆ ಕಡೆಯಿಂದ ಸಂಚರಿಸುವ ವಾಹನಗಳು ನಿರೇಶ್ವಾಲ್ಯ ಜಂಕ್ಷನ್ ಆಗಿ ಬದ್ರಿಯಾ ಜಂಕ್ಷನ್ ಅಥವಾ ರೋಜಾರಿಯೋ ಜಂಕ್ಷನ್ ಕಡೆಗೆ ಸಂಚರಿಸುವುದು.

ಈ ನಿಬಂಧಗಳು, ಪೊಲೀಸ್ ವಾಹನಗಳು ಹಾಗೂ ತುರ್ತು ಸೇವೆಯ ವಾಹನಗಳಿಗೆ ಅನ್ವಯಿಸುವುದಿಲ್ಲ ಎಂದು ಪೊಲೀಸು ಆಯುಕ್ತರು ಹಾಗೂ ಅಡಿಷನಲ್ ಡಿಸ್ಟ್ರಿಕ್ಟ್ ಮೆಜಿಸ್ಟ್ರೇಟ್ ವಿಕಾಶ್ ಕುಮಾರ್ ವಿಕಾಶ್, ಐ.ಪಿ.ಎಸ್. ಆದೇಶ ಹೊರಡಿಸಿದ್ದಾರೆ.

Comments are closed.