
ಮಂಗಳೂರು ನವೆಂಬರ್ 19 : ಸಾರ್ವಜನಿಕರ ಬೇಡಿಕೆಗೆ ಅನುಗುಣವಾಗಿ ಕೆಎಸ್‌ಆರ್‌ಟಿಸಿ ಮಂಗಳೂರು ವಿಭಾಗದಿಂದ ನವೆಂಬರ್ 22ರಿಂದ ಎರ್ನಾಕುಲಂ, ಕೊಯಮತ್ತೂರು ಗೆ ವೋಲ್ವೋ ವಾಹನಗಳೊಂದಿಗೆ ಹಾಗೂ ನವೆಂಬರ್ 20ರಿಂದ ಬೆಂಗಳೂರಿಗೆ ರಾಜಹಂಸ ಮತ್ತು ಕ್ಲಬ್ ಕ್ಲಾಸ್ ಸಾರಿಗೆ ಸೌಲಭ್ಯವನ್ನು ಆರಂಭಿಸಲಾಗುವುದು.
ನಿಗಮದ ವಾಹನಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರ ಅನುಕೂಲ ಹಾಗೂ ಆರೋಗ್ಯದ ಹಿತದೃಷ್ಟಿಯಿಂದ ಎಸ್‌ಒಪಿ ರಲ್ಲಿನ ನಿರ್ದೇಶನಗಳಂತೆ ಪ್ರಯಾಣಿಸಲು ಸುವ್ಯವಸ್ಥೆಯನ್ನು ಕಲ್ಪಿಸಲಾಗಿದೆ.
ಸಾರಿಗೆಗಳಿಗೆ ಆನ್‌ಲೈನ್ ಮುಂಗಡ ಟಿಕೇಟು ಬುಕ್ಕಿಂಗ್ ಮಾಡುವ ಪ್ರಯಾಣಿಕರು www.ksrtc.in ಗೆ ಅಥವಾ ಹತ್ತಿರದ ರಿಸರ್ವೇಶನ್ ಕೌಂಟರ್‌ಗೆ ಸಂಪರ್ಕಿಸಬಹುದಾಗಿದೆ ಎಂದು ಕೆಎಸ್‌ಆರ್‌ಟಿಸಿ ಮಂಗಳೂರು ವಿಭಾಗೀಯ ನಿಯಂತ್ರಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Comments are closed.