ಕರ್ನಾಟಕ

ಸರ್ಕಾರಿ ಟೆಂಡರ್, ಆನ್ಲೈನ್ ಗೇಮ್ ವೆಬ್‌ಸೈಟ್‌ ಹ್ಯಾಕರ್, ಡ್ರಗ್ ದಂಧೆಕೋರರ ಸಪೋರ್ಟರ್ ಬಂಧನ

Pinterest LinkedIn Tumblr

ಬೆಂಗಳೂರು: ಡಾರ್ಕ್ ವೆಬ್ ಮೂಲಕ ಅಕ್ರಮ ನಡೆಸುತ್ತಿದ್ದ ಬೆಂಗಳೂರಿನ ಕುಖ್ಯಾತ ಹ್ಯಾಕರ್ ಶ್ರೀಕಿ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಈತ ಡ್ರಗ್ಸ್ ದಂಧೆಕೋರರಿಗೆ ಸಹಾಯವಾಗುತ್ತಿದ್ದ ವೆಬ್ ಸೈಟ್​ಗಳನ್ನ ಹ್ಯಾಕ್ ಮಾಡಿ ಅಕ್ರಮ ಎಸಗುತ್ತಿದ್ದು ಅಂತಾರಾಷ್ಟ್ರೀಯ ಕುಖ್ಯಾತಿಯ ಹ್ಯಾಕರ್ ಆಗಿದ್ದ. ಬೆಂಗಳೂರಿನ ಶ್ರೀ ಕೃಷ್ಣ ಅಲಿಯಾಸ್ ಶ್ರೀಕಿ ಸದ್ಯ ಸಿಸಿಬಿ ವಶದಲ್ಲಿದ್ದಾನೆ.

ಸರ್ಕಾರಿ ವೆಬ್ ಸೈಟ್​ಗಳ ಜೊತೆಗೆ ಅಂತರರಾಷ್ಟ್ರೀಯ ವೆಬ್​​ಸೈಟ್​ಗಳನ್ನೂ ಹ್ಯಾಕ್ ಮಾಡುತ್ತಿದ್ದ ಶ್ರೀಕಿ ಡ್ರಗ್ಸ್ ದಂಧೆಕೋರರಿಗೆ ಸಹಾಯ ಮಾಡುತ್ತಿದ್ದು ಈ ಬಗ್ಗೆ ಬೆಂಗಳೂರಿನ ಪೊಲೀಸ್ ಕಮಿಷನರ್ ಕಮಲ್ ಪಂಥ್ ಸುದ್ದಿಗೋಷ್ಟಿಯಲ್ಲಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಡಾರ್ಕ್ ವೆಬ್ ಮೂಲಕ ಅಂತರರಾಷ್ಟ್ರೀಯ ಡ್ರಗ್ಸ್ ವ್ಯವಹಾರ ನಡೆಸಿದ್ದಲ್ಲದೆ ಆನ್​ಲೈನ್ ಬಿಟ್ ಕಾಯಿನ್ ಮೂಲಕ ಬ್ಯುಸಿನೆಸ್ ಶುರು ಮಾಡಿದ್ದ ಶ್ರೀಕಿ ಮಾದಕ ವ್ಯಸನಿ ಎನ್ನಲಾಗಿದೆ.

2019ರಲ್ಲಿ ಗೇಮಿಂಗ್ ವೆಬ್​ಸೈಟ್​ಗಳಲ್ಲಿ ನಿಪುಣನಾಗಿದ್ದ ಶ್ರೀಕಿಯನ್ನು ಬಳಸಿಕೊಂಡು ಸುನೀಶ್ ಹೆಗ್ಡೆ ಡಾರ್ಕ್ ವೆಬ್ ಮೂಲಕ ಡ್ರಗ್ಸ್ ದಂಧೆ ಮಾಡುತ್ತಿದ್ದ ಎನ್ನಲಾಗಿದೆ. ಈತನನ್ನು ದೇವನಹಳ್ಳಿ ಹಾಗೂ ಗೋವಾದ ಪಂಚತಾರಾ ಹೋಟೆಲ್​ಗಳಲ್ಲಿ ಇರಿಸಿ ಹ್ಯಾಕರ್ ಆಗಿ ಉಪಯೋಗಿಸಿಕೊಳ್ಳಲಾಗುತ್ತಿತ್ತು.

ಶ್ರೀಕಿ ಸರ್ಕಾರಿ ವೆಬ್​ಸೈಟ್​ಗಳನ್ನ ಹ್ಯಾಕ್ ಮಾಡುತ್ತಿದ್ದ. ಟೆಂಡರ್​ಗೆ ಸಂಬಂಧಪಟ್ಟ ಮಾಹಿತಿಯನ್ನು ಹ್ಯಾಕ್ ಮಾಡಿ ಪಡೆಯುತ್ತಿದ್ದ. ಅಂತರರಾಷ್ಟ್ರೀಯ ವೆಬ್ ಸೈಟ್​ಗಳನ್ನೂ ಹ್ಯಾಕ್ ಮಾಡಿ ಅಕ್ರಮ ಮಾರ್ಗದಲ್ಲಿ ಹಣ ಸಂಪಾದನೆ ಮಾಡುತ್ತಿದ್ದ. ಹಲವು ವರ್ಷಗಳಿಂದ ತಲೆ ಮರೆಸಿಕೊಂಡು ಓಡಾಡುತ್ತಿದ್ದ ಈತ ಈಗ ಸಿಕ್ಕಿಬಿದ್ದಿದ್ದಾನೆ.

(ಸಾಂದರ್ಭಿಕ ಚಿತ್ರಗಳು)

Comments are closed.