ಕರ್ನಾಟಕ

13 ವರ್ಷದ ಬಾಲಕಿಯನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರವೆಸಗಿದ ಕಾಮುಕರು

Pinterest LinkedIn Tumblr

ಕೋಲಾರ : ಬಾಲಕಿಯನ್ನು ಅಪಹರಿಸಿದ ನಾಲ್ವರು ಯುವಕರು ಹಳೆ ಮನೆಯಲ್ಲಿ ಕೂಡಿ ಹಾಕಿ ಸಾಮೂಹಿಕವಾಗಿ ಅತ್ಯಾಚಾರ ಎಸಗಿದ ಘಟನೆ ಕೋಲಾರ ಜಿಲ್ಲೆಯ ಕೆಜಿಎಫ್‌ ತಾಲ್ಲೂಕಿನ ಬೇತಮಂಗಲ ಪೊಲೀಸ್ ಠಾಣಾ ವ್ಯಾಫ್ತಿಯ ಹಂಗಳ ಗ್ರಾಮದಲ್ಲಿನಡೆದಿದೆ.

ಭಾನುವಾರ ರಾತ್ರಿ ಮನೆಯಿಂದ ಹೊರ ಹೋಗಿದ್ದ ಹಂಗಳ ಗ್ರಾಮದ 13 ವರ್ಷದ ಬಾಲಕಿಯನ್ನು ಅಪಹರಿಸಿದ ಆರೋಪಿಗಳು ಹಳೆ ಮನೆಯಲ್ಲಿ ಕೂಡಿ ಹಾಕಿ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ.

ಅತ್ಯಾಚಾರವೆಸಗಿದ ಕಾಮುಕರನ್ನು ಹಂಗಳ ಗ್ರಾಮದ ಹರೀಶ್ (28), ಜಗದೀಶ್ (18) ,ರಘು (23) ಹಾಗೂ ಮಹೇಶ್ (19) ಎಂದು ಹೆಸರಿಸಲಾಗಿದೆ. ಅದೇ ಗ್ರಾಮದ 13 ವರ್ಷದ ಬಾಲಕಿಯು ಬಹಿರ್ದೆಸೆಗಾಗಿ ಭಾನುವಾರ ರಾತ್ರಿ ಮನೆಯಿಂದ ಹೊರ ಹೋಗಿದ್ದಾಗ ಆರೋಪಿಗಳು ಆಕೆಯನ್ನು ಅಪಹರಿಸಿದ್ದರು. ನಂತರ ಗ್ರಾಮದ ಹೊರವಲಯದ ಹಳೇ ಮನೆಗೆ ಎಳೆದೊಯ್ದು ಸಾಮೂಹಿಕ ಅತ್ಯಾಚಾರ ಎಸಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಸಂತ್ರಸ್ತ ಬಾಲಕಿಯ ತಂದೆ ಸೋಮವಾರ ರಾತ್ರಿ ಠಾಣೆಗೆ ದೂರು ನೀಡಿದರು. ಈ ದೂರು ಆಧರಿಸಿ ಅಪಹರಣ ಮತ್ತು ಮಕ್ಕಳ ವಿರುದ್ಧದ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ನಾಲ್ವರು ಆರೋಪಿಗಳನ್ನು ಮಂಗಳವಾರ ಬಂಧಿಸಿದ್ದಾರೆ.

Comments are closed.