ಕರ್ನಾಟಕ

ಚಿತ್ರ ನಟಿ ಬಿಜೆಪಿ ನಾಯಕಿ ಖುಷ್ಬೂ ಕಾರಿಗೆ ಟ್ಯಾಂಕರ್ ಡಿಕ್ಕಿ : ದೇವರೇ ಕಾಪಾಡಿದ ಎಂದ ಖುಷ್ಬೂ

Pinterest LinkedIn Tumblr

ಚೆನ್ನೈ: ಚಿತ್ರ ನಟಿ ಬಿಜೆಪಿ ನಾಯಕಿ ಖುಷ್ಬೂ ಸುಂದರ್, ನಟಿ ಖುಷ್ಬೂ ಸುಂದರ್ ಅವರು ಪ್ರಯಾಣಿಸುತ್ತಿದ್ದ ಕಾರು ಇಂದು ಅಪಘಾತಕ್ಕೀಡಾಗಿದೆ.ಅದೃಷ್ಟವಶಾತ್ ಖುಷ್ಬೂ ಸೇರಿ ಕಾರಿನಲ್ಲಿದ್ದವರು ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.

ಖುಷ್ಬೂ ಅವರು ಕಡಲೂರಿಗೆ ತೆರಳುತ್ತಿದ್ದ ವೇಳೆ ಮೇಲ್ ಮರವತ್ತೂರ್ ಬಳಿ ಖುಷ್ಬೂ ಸುಂದರ್ ಅವರು ಪ್ರಯಾಣಿಸುತ್ತಿದ್ದ ಕಾರು ಅಪಘಾತಗೊಂಡಿದೆ. ಟ್ಯಾಂಕರೊಂದು ಕಾರಿಗೆ ಡಿಕ್ಕಿ ಹೊಡೆದಿದೆ ಪರಿಣಾಮ ಕಾರಿನ ಎಡಭಾಗ ನುಜ್ಜುಗುಜ್ಜಾಗಿದೆ, ಕಾರಿನಲ್ಲಿದ್ದ ಎಲ್ಲರೂ ಅಪಾಯದಿಂದ ಪಾರಾಗಿದ್ದಾರೆ

ಅಪಘಾತದ ಕುರಿತು ಬಿಜೆಪಿ ನಾಯಕಿ ಖುಷ್ಬೂ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಹೇಳಿಕೊಂಡಿದ್ದಾರೆ. ನಮ್ಮ ಕಾರು ಸರಿಯಾದ ಮಾರ್ಗದಲ್ಲೇ ಚಲಿಸುತ್ತಿತ್ತು, ಕಂಟೈನರ್ ಎಲ್ಲಿಂದಲೋ ಬಂದು ನನ್ನ ಕಾರಿಗೆ ಗುದ್ದಿದೆ ಎಂದು ಖುಷ್ಟೂ ತಮ್ಮ ಟ್ವಿಟರ್​ ಖಾತೆಯಲ್ಲಿ ಮಾಹಿತಿ ನೀಡಿದ್ದಾರೆ. ಕಾರು ಅಪಘಾತದ ಫೋಟೋಗಳನ್ನೂ ಅವರು ಶೇರ್​ ಮಾಡಿಕೊಂಡಿದ್ದಾರೆ.

ನಿಮ್ಮೆಲ್ಲರ ಆಶೀರ್ವಾದ ಹಾಗೂ ದೇವರ ಕೃಪೆಯಿಂದ ನನಗೆ ಏನೂ ಆಗಿಲ್ಲ, ಪ್ರಾಣಾಪಾಯದಿಂದ ಪಾರಾಗಿದ್ದೇನೆ. ಮುರುಗನ್​ ದೇವರ ಮೇಲೆ ಪತಿಗೆ ಅಪಾರ ಭಕ್ತಿ. ಅವನೇ ನಮ್ಮನ್ನು ಕಾಪಾಡಿದ್ದಾನೆ. ದೇವರ ಕೃಪೆಯಿಂದ ನಾನು ಸುರಕ್ಷಿತವಾಗಿದ್ದೇನೆ. ಕಡೂರು ಕಡೆಗೆ ನನ್ನ ಪ್ರಯಾಣ ಮುಂದುವರಿಸುತ್ತಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ.ಅಪಘಾತ ನಡೆದ ಸ್ಥಳಕ್ಕೆ ಪೊಲೀಸರು ಆಗಮಿಸಿ ತನಿಖೆ ಕೈಗೊಂಡಿದ್ದಾರೆ.

Comments are closed.