ಕರಾವಳಿ

ಚೀನಾ ಗಡಿ ಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಯೋಧರ ಕುಟುಂಬದೊಂದಿಗೆ ದೀಪಾವಳಿ ಆಚರಿಸಿದ ಶಾಸಕ ಕಾಮತ್

Pinterest LinkedIn Tumblr

ಮಂಗಳೂರು : ಬಿಜೆಪಿ ಮಂಗಳೂರು ನಗರ ದಕ್ಷಿಣ ವತಿಯಿಂದ ಶಾಸಕ ವೇದವ್ಯಾಸ್ ಕಾಮತ್ ಅವರ ನೇತೃತ್ವದಲ್ಲಿ ಕದ್ರಿಯ ಯೋಧರೊಬ್ಬರ ಮನೆಯಲ್ಲಿ ದೀಪಾವಳಿ ಆಚರಿಸಲಾಯಿತು.

ಪ್ರಧಾನಿ ನರೇಂದ್ರ ಮೋದಿಯವರ ಆಶಯದಂತೆ ಪ್ರಸ್ತುತ ಚೀನಾ ಗಡಿ ಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕದ್ರಿ ನಿವಾಸಿ ಕ್ಯಾಪ್ಟನ್ ಭರತ್ ಅವರ ಮನೆಗೆ ಬಿಜೆಪಿ ಮುಖಂಡರೊಂದಿಗೆ ಆಗಮಿಸಿದ ಶಾಸಕ ವೇದವ್ಯಾಸ್ ಕಾಮತ್‌ ಸ್ಥಳೀಯರನ್ನೂ ಸೇರಿಸಿ ಭರತ್ ಕುಮಾರ್ ಅವರ ಪೋಷಕರನ್ನು ಗೌರವಿಸಿದರು.

ಈ‌ ವೇಳೆ ಮಾತನಾಡಿದ ಶಾಸಕ ಕಾಮತ್, ಇಂದು ದೇಶದೆಲ್ಲೆಡೆ ಹಬ್ಬದ ಸಂಭ್ರಮ ಮನೆ ಮಾಡಿದೆ. ಆದರೆ ಗಡಿಯಲ್ಲಿ ನಮಗಾಗಿ ನಿದ್ದೆ ಬಿಟ್ಟಿರುವ ಯೋಧರು ಅವರ ಸಂಭ್ರವನ್ನೆಲ್ಲ ನಮಗಾಗಿ ಧಾರೆಯೆರೆದಿದ್ದಾರೆ. ಹಾಗಾಗಿ ಪ್ರಧಾನಿ ನರೇಂದ್ರ ಮೋದಿಯವರ ಆಶಯದಂತೆ ಈ ಬಾರಿ ಕದ್ರಿಯ ಕ್ಯಾಪ್ಟನ್ ಭರತ್ ಶೆಟ್ಟಿ ಅವರ ಮನೆಗೆ ಭೇಟಿ ನೀಡಿ ಅವರ ಕುಟುಂಬದ ಸದಸ್ಯರೊಂದಿಗೆ ದೀಪಾವಳಿ ಆಚರಿಸಿದ್ದೇವೆ ಎಂದರು.

ಕ್ಯಾಪ್ಟನ್ ಭರತ್ ಶೆಟ್ಟಿ ಅವರ ವಿದ್ಯಾಭ್ಯಾಸ ಪೂರ್ಣಗೊಂಡ‌ ಬಳಿಕ ಬೆಂಗಳೂರಿನಲ್ಲಿ ಉತ್ತಮ ನೌಕರಿ ದೊರೆತರೂ ದೇಶ ಸೇವೆಗಾಗಿ ಅದನ್ನು ತೊರೆದು ಸೈನ್ಯಕ್ಕೆ ಸೇರಿದ್ದಾರೆ. ಸದ್ಯ ಚೀನಾ – ಭಾರತ ಗಡಿ ಭಾಗದಲ್ಲಿ ಕರ್ತವ್ಯದಲ್ಲಿರುವ ಭರತ್‌ ಶೆಟ್ಟಿ ಅವರಿಗೆ ಭಗವಂತನ ಅನುಗ್ರಹವಿರಲಿ. ತಾಯಿ ಭಾರತಿಯ ಸೇವೆಗಾಗಿ ಅವರಿಗೆ ಮತ್ತಷ್ಟು ಶಕ್ತಿ ದೊರೆಯಲಿ ಎಂದರು.

ಬಿಜೆಪಿ ಮಂಗಳೂರು ನಗರ ದಕ್ಷಿಣ ಮಂಡಲ ಅದ್ಯಕ್ಷರಾದ ವಿಜಯ್ ಕುಮಾರ್ ಶೆಟ್ಟಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಗೂ ಸ್ಥಳೀಯ ಮ.ನ.ಪಾ ಸದಸ್ಯರಾದ ಶ್ರೀ ಸುಧೀರ್ ಶೆಟ್ಟಿ, ಮಂಡಲದ ಪ್ರಧಾನ ಕಾರ್ಯದರ್ಶಿಗಳಾದ ಶ್ರೀಮತಿ ರೂಪಾ.ಡಿ.ಬಂಗೇರ, ಸುರೇಂದ್ರ ಜೆ., ಪದಾಧಿಕಾರಿಗಳಾದ ರಮೇಶ್ ಹೆಗ್ಡೆ, ದೀಪಕ್ ಪೈ, ಲಲ್ಲೇಶ್ ಕುಮಾರ್, ಅಜಯ್ ಕುಲಶೇಖರ್, ಮತ್ತು ಮ.ನ.ಪಾ ಸದಸ್ಯರಾದ ಮನೋಹರ್ ಶೆಟ್ಟಿ, ಶಕೀಲಾ ಕಾವ, ಕಾವ್ಯ ನಟರಾಜ್ ಹಾಗೂ ಅಕ್ಷಿತ್ ಶೆಟ್ಟಿ, ರತ್ನಾಕರ್, ಬಾಬು ಶೆಟ್ಟಿ, ಮೇಘರಾಜ್ ಹಾಗೂ ಮತ್ತಿತರ ಸ್ಥಳೀಯರು ಉಪಸ್ಥಿತರಿದ್ದರು.

Comments are closed.